“ವೆನಿಲ್ಲಾ’ದಲ್ಲಿ ಕ್ಯಾಪ್ನೋ ಫೋಬಿಯಾ: ಮರ್ಡರ್ ಮಿಸ್ಟ್ರಿ ಟ್ರೈಲರ್ ವೀಕ್ಷಿಸಿ
Team Udayavani, Feb 13, 2018, 5:08 PM IST
ಜಯತೀರ್ಥ ನಿರ್ದೇಶನದ “ವೆನಿಲ್ಲಾ’ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಅವಿನಾಶ್ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸುತ್ತಿದ್ದಾರೆ. ಚಿತ್ರದಲ್ಲಿ ಸ್ವಾತಿ ಕೊಂಡೆ ನಾಯಕಿಯಾಗಿ ನಟಿಸಿದ್ದಾರೆ. “ವೆನಿಲ್ಲಾ’ ಒಂದು ಮರ್ಡರ್ ಮಿಸ್ಟ್ರಿ ಚಿತ್ರ. ಇಡೀ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುತ್ತದೆ. ಕ್ಯಾಪ್ನೋ ಫೋಬಿಯಾ ಎಂಬ ಕಾಯಿಲೆಗೂ ಇದಕ್ಕೂ ಸಂಬಂಧವಿದೆ. ಕ್ಯಾಪ್ನೋ ಫೋಬಿಯಾ ಇರುವವರಿಗೆ ಹೊಗೆ ನೋಡಿದರೆ ಭಯ ಆಗುತ್ತದೆ. ಈ ಚಿತ್ರಕ್ಕೂ ಆ ಫೋಬಿಯಾಗೂ ಸಂಬಂಧವಿದೆಯಂತೆ. ಈ ಚಿತ್ರವನ್ನು ನಾಯಕ ಅವಿನಾಶ್ ಅವರ ತಂದೆ ಜಯರಾಂ ನಿರ್ಮಿಸಿದ್ದಾರೆ. ಚಿತ್ರಕ್ಕೆ ಭರತ್ ಬಿ.ಜೆ. ಸಂಗೀತವಿದೆ. ಚಿತ್ರದಲ್ಲಿ ರವಿಶಂಕರ್ ಗೌಡ, ರೆಹಮಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದ ಮರ್ಡರ್ ಮಿಸ್ಟ್ರಿ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ