ಫಿಂಚ್ ಮದುವೆ: ಮೊದಲ ಐಪಿಎಲ್ ಪಂದ್ಯಕ್ಕಿಲ್ಲ
Team Udayavani, Feb 16, 2018, 6:40 AM IST
ಮೆಲ್ಬರ್ನ್: 2018ರ ಐಪಿಎಲ್ ವೇಳಾಪಟ್ಟಿ ಬಿಡುಗೊಂಡ ಬೆನ್ನಲ್ಲೇ ಆಸ್ಟ್ರೇಲಿಯದ ಇಬ್ಬರು ಕ್ರಿಕೆಟಿಗರು ಮೊದಲ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇವರೆಂದರೆ ಆರನ್ ಫಿಂಚ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್. ಕಾರಣ, ಫಿಂಚ್ ಮದುವೆ!
ಹೌದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸದಸ್ಯನಾಗಿರುವ ಫಿಂಚ್ ಎಪ್ರಿಲ್ 7ರಂದು ಗೆಳತಿ ಆ್ಯಮಿ ಗ್ರಿಫಿತ್ ಜತೆ ವಿವಾಹ ಬಂಧಕ್ಕೊಳಗಾಗಲಿದ್ದಾರೆ. ಈ ಕಾರಣಕ್ಕಾಗಿ ಎ. 8ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಗುತ್ತದೆ.
ಇನ್ನು ಡೆಲ್ಲಿ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಹೊರಗುಳಿಯುವುದೇಕೆ ಗೊತ್ತೇ? ಗೆಳೆಯ ಫಿಂಚ್ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು!
“ನಾನು ಇಂದು ಬೆಳಗ್ಗೆ ಐಪಿಎಲ್ ವೇಳಾಪಟ್ಟಿಯನ್ನು ನೋಡಿದೆ. ನನ್ನ ಮದುವೆಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ. ಆ್ಯಮಿಯನ್ನು ಬಿಟ್ಟಿರುವುದು ಕಷ್ಟ….’ ಎಂದು ಫಿಂಚ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
“ನಮ್ಮ ಮುಂದಿನ ಪಂದ್ಯ ನಡೆಯುವುದು ಎ. 13ಕ್ಕೆ. ಮದುವೆ ಸಮಾರಂಭಕ್ಕೆ ಇಷ್ಟು ಅವಧಿ ಧಾರಾಳ. ಅದೃಷ್ಟವಶಾತ್ ನಾನು ಒಂದೇ ಐಪಿಎಲ್ ಪಂದ್ಯವನ್ನು ತಪ್ಪಿಸಿಕೊಳ್ಳುತ್ತಿದ್ದೇನೆ…’ ಎಂದಿದ್ದಾರೆ ಫಿಂಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ