ಪರಿಶುದ್ಧ ನಗುವೇ ದಿವ್ಯೌಷಧ


Team Udayavani, Mar 4, 2018, 12:41 PM IST

bid-3.jpg

ಬೀದರ: ಪರಿಶುದ್ಧ ನಗುವೆ ದಿವ್ಯ ಔಷಧ. ನಗುವುದರಿಂದ ಶ್ವಾಸಕೋಶಗಳು ತೆರೆದುಕೊಂಡು ಹೆಚ್ಚು ಆಮ್ಲಜನಕ ಹೀರಿಕೊಳ್ಳುತ್ತವೆ. ನಗುವಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಹೇಳಿದರು.

ನಗರದ ಶರಣ ಉದ್ಯಾನದಲ್ಲಿ ಹೋಳಿ ಹಬ್ಬದ ನಿಮಿತ್ತ ಆಯೋಜಿಸಿದ್ದ ನಗೆಮಾರಿ ತಂದೆಗಳ ಸ್ಮರಣೋತ್ಸವ ಮತ್ತು ನಗೆ ಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆದ್ದರಿಂದ ಪ್ರತಿಯೊಬ್ಬರೂ ಹಾಸ್ಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಮನುಷ್ಯರಿಗೆ ನಗುವು ಒಂದು ವಿಟಾಮಿನ್‌. ಆದರೆ ನಗಿಸುವುದು ಅಸಾಮಾನ್ಯ ಕಲೆ. ನಗುವ ಸಾಮರ್ಥ್ಯ ಇರುವುದು ಮನುಷ್ಯರಿಗೆ ಮಾತ್ರ. ಅದಕ್ಕೆ ಬಿಗುಮಾನ ಅಹಂಕಾರ ಬಿಟ್ಟು ನಗಬೇಕು. ಮನಪೂರ್ತಿ ನಗುವುದರಿಂದ ಒತ್ತಡ ನಿವಾರಣೆಯಾಗಿ ಆನಂದ ಲಭಿಸುತ್ತದೆ ಎಂದರು. ಹನ್ನೆರಡನೇ ಶತಮಾನದ ಶರಣರು ನಗಿಸುವುದನ್ನು ಒಂದು ಕಾಯಕವಾಗಿ ಗೌರವಿಸಿದರು. 

ಬಹುರೂಪಿ ಚೌಡಯ್ಯನವರು ಮತ್ತು ನಗೆಮಾರಿ ತಂದೆಗಳು ಜನರಿಗೆ ನಗಿಸುತ್ತಲೆ ಸುಂದರ ಬದುಕಿನ ತತ್ವ ಸಾರುವುದನ್ನು
ಕಾಯಕವಾಗಿಸಿಕೊಂಡಿದ್ದರು ಎಂದು ಬಣ್ಣಿಸಿ, ನಗುವನ್ನೇ ಜೀವನವಾಗಿಸಿಕೊಳ್ಳಬೇಕು ಎಂದು ಕರೆಯಿತ್ತರು. ಈ ಸಂದರ್ಭದಲ್ಲಿ ಔರಾದನ ರಾಮದಾಸ ಬಿರಾದಾರ ಅವರು ಶರಣರ ತತ್ವಗಳನ್ನು ಕೀರ್ತನ ಶೈಲಿಯಲ್ಲಿ ಬಣ್ಣಿಸುತ್ತಾ ಶರಣರ ಸಂಗಕ್ಕಿಂತ ಭಾಗ್ಯ ಮತ್ತೂಂದಿಲ್ಲ. ಶರಣರ ನೆನೆದರೆ ಪುಣ್ಯ ಎಂದು ವಿವರಿಸಿದರು. 

ನಗೆಗಡಲಲ್ಲಿ ತೇಲಿದ ಸಭಿಕರು: ಟಿವಿ9 ಕಲಾವಿದರಾದ ಚಿಂಚೋಳಿಯ ರಾಚಯ್ಯಸ್ವಾಮಿ, ಆಕಾಶವಾಣಿ ಮತ್ತು ಚಂದನವಾಹಿನಿ ಕಲಾವಿದ ರೇವಣಸಿದ್ಧಯ್ಯ ಸ್ವಾಮಿ ಮತ್ತು ಹಾಸ್ಯಕಲಾವಿದ ಮಲ್ಲಿಕಾರ್ಜುನ ಟಂಕಸಾಲಿ ಅವರು ದಿನನಿತ್ಯ ಗಂಡ ಹೆಂಡತಿ ಮಧ್ಯದಲ್ಲಿ ಸಂಭವಿಸುವ ಹಾಸ್ಯ ಪ್ರಸಂಗಗಳು, ಗೆಳೆಯರ ಮಧ್ಯ ಮತ್ತು ಶಾಲೆಯಲ್ಲಿ ಶಿಕ್ಷಕರ-ವಿದ್ಯಾರ್ಥಿಗಳ ಮಧ್ಯ ಘಟಿಸುವ ಹಾಸ್ಯ ಪ್ರಸಂಗಗಳನ್ನು ಹೇಳಿ 2 ಗಂಟೆಗೂ ಅ ಧಿಕ ಸಮಯ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಮಿಮಿಕ್ರಿಗಳ ಮೂಲಕವೂ ಜನರನ್ನು ರಂಜಿಸಿದರು. ಡಾ| ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು.

ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್‌.ಕೆ. ಪಾಟೀಲರು ಪರಿಸರ ಸ್ನೇಹಿ, ಹೊಗೆರಹಿತ ಪಟಾಕಿ ಸಿಡಿಸಿ ನಗೆಹಬ್ಬ ಉದ್ಘಾಟಿಸಿದರು. ಅಗ್ನಿಶಾಮಕದಳದ ನಿವೃತ್ತ ಅಧಿಕಾರಿ ಅಮೃತ ಚಿಮಕೋಡ ಅವರು ಧ್ವಜಾರೋಹಣ ನೆರವೇರಿಸಿದರು.

ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿ ವಚನ ವಾಚನ ಮಾಡಿಸಿದರು. ಪ್ರಭಾವತಿ ಗೋರನಾಳೆ ಗುರು ಪೂಜೆ ಮಾಡಿದರು. ಯುಕೆಜಿ ವಿದ್ಯಾರ್ಥಿನಿ ಭಕ್ತಿ ಪಾಟೀಲ ಕಿತ್ತೂರ ರಾಣಿ ಚನ್ನಮ್ಮನ ಛದ್ಮವೇಷದಲ್ಲಿ ಸಭಿಕರನ್ನು ರಂಜಿಸಿದರು. ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು. 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.