ಅಹ್ಮದಾಬಾದ್: ಬೆಂಕಿ ಹೊತ್ತಿಕೊಂಡ ಕಾರು, ಮೂವರು ಸುಟ್ಟು ಕರಕಲು
Team Udayavani, Mar 8, 2018, 10:29 AM IST
ಅಹ್ಮದಾಬಾದ್ : ಇಲ್ಲಿನ ರಿಂಗ್ ರೋಡ್ನಲ್ಲಿರುವ ಭಡಾಜ್ ವೃತ್ತದ ಸಮೀಪ ವೇಗವಾಗಿ ಸಾಗುತ್ತಿದ್ದ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮವಾಗಿ ಅದರೊಳಗಿದ್ದ ಮೂವರು ಸುಟ್ಟು ಕರಕಲಾದರು; ಇನ್ನಿಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು.
ವರದಿಗಳ ಪ್ರಕಾರ ಫೋಕ್ಸ್ವ್ಯಾಗನ್ ಕಾರು ರಿಂಗ್ ರೋಡ್ನಲ್ಲಿ ಇನ್ನೊಂದು ಕಾರಿಗೆ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತು. ಅದರೊಳಗಿದ್ದವರ ಪೈಕಿ ಮೂವರು ಹೊರ ಬರಲಾರದೆ ಸುಟ್ಟು ಕರಕಲಾದರು. ಇನ್ನಿಬ್ಬರಿಗೆ ಹೇಗೋ ಪ್ರಯಾಸದಿಂದ ಕಾರಿನಿಂದ ಹೊರಬರಲು ಸಾಧ್ಯವಾದರೂ ಅವರಿಗೆ ತೀವ್ರ ಸುಟ್ಟ ಗಾಯಗಳಾದವು.
ಮೃತರನ್ನು ರಾರೋಲ್ ಬಾರ್ಡ್, ರಾಯಲ್ ಪಟ್ವಾ ಮತ್ತು ಢೇರಿ ಪಟೇಲ್ ಎಂದು ಗುರುತಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ