ಡೀಲ್‌, ಕಿಕ್‌ ಬ್ಯಾಕ್‌ ಜಾಯಮಾನ ನನಗಿಲ್ಲ: ಎಚ್‌ಡಿಕೆ


Team Udayavani, Mar 11, 2018, 4:28 PM IST

tmk.jpg

ತುಮಕೂರು: ಅಧಿಕಾರಿಗಳ ಜೊತೆ ಡೀಲ್‌ ಮಾಡಿಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಕರಗತ, ನಾವು ಆ ಜಾಯಮಾನದಲ್ಲಿ ಬಂದಿಲ್ಲ. ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಮಾಡುವ ಡೀಲ್‌, ಕಿಕ್‌ಬ್ಯಾಕ್‌ ವ್ಯವಹಾರ ಎಲ್ಲದರಲ್ಲಿಯೂ ಪರಿಣಿತರು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

ಸಿಎಂ ಹೇಳಿಕೆಗೆ ಸಹಮತ: ಅವರು ನಗರದ ಪುರಸ್‌ ಕಾಲೋನಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಡೀಲ್‌ ಮಾಡೋದು ಕುಮಾರ ಸ್ವಾಮಿಯಿಂದ ಕಲಿಬೇಕಿಲ್ಲ ನಾನು 1984 ರಲ್ಲಿಯೇ ಮಂತ್ರಿಯಾದವನು ಎಂದು ಮುಖ್ಯ ಮಂತ್ರಿಯವರ ಹೇಳಿಕೆಗೆ ಉತ್ತರಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ಅವರ ಮಾತಿಗೆ ನನ್ನ ಸಹಮತವಿದೆ ಎಂದಿದ್ದಾರೆ.

ಅಧಿಕಾರಿಗಳ ಜೊತೆ ಡೀಲ್‌ ಮಾಡಿಕೊಳ್ಳುವುದು ಸಿದ್ದರಾಮಯ್ಯನವರಿಗೆ ಮಾತ್ರ ಕರಗತ ನಾವು ಆ ಜಾಯಮಾನದಲ್ಲಿ ಎಂದೂ ಬಂದವರಲ್ಲ. ಮುಖ್ಯ ಮಂತ್ರಿ ಹೆಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅಧಿಕಾರಿಗಳ ಜೊತೆ ಮಾಡುವ ಡೀಲ್‌ ಹಾಗೂ ಇತರೆ ವ್ಯವಹಾರಗಳು ಹೇಗೆ ರುಜು ಹಾಕಿಕೊಳ್ಳಬೇಕು ಅನ್ನೋದರಲ್ಲಿ ಸಿದ್ದರಾಮಯ್ಯ ಪರಿಣಿತರು ಎಂದು ಹೇಳಿದರು.

ಆರ್ಥಿಕ ಪರಿಸ್ಥಿತಿ ದುರ್ಬಲ: ಅಂತವರಿಗೆ ನಾವು ಹೇಳಿಕೊಡಲು ಆಗುವುದಿಲ್ಲ, ಅವರಿಗೆ ಹೇಳಿ ಕೊಡುವಷ್ಟು ನಾವು ದೊಡ್ಡವರಲ್ಲ. ಸಿದ್ದರಾಮಯ್ಯ ಇರುವುದೇ ಈ ರಾಜ್ಯದ ಲೂಟಿ ಮಾಡುವುದಕ್ಕೆ ಅನ್ನುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವ ಬಗ್ಗೆ ಬಿಸ್‌ನೆಸ್‌ ಲೈನ್‌ ಪತ್ರಿಕೆ ಬಹಿರಂಗ ಪಡಿಸಿದೆ ಎಂದರು.

ಈ ಮುಖ್ಯಮಂತ್ರಿಗಳು ರಾಜ್ಯದ ಬೊಕ್ಕಸವನ್ನು ದಿವಾಳಿ ಮಾಡಿ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ದುರಂಕಾರ, ಗರ್ವ, ದುಡ್ಡಿನ ಮದ ಅವರನ್ನು ಈ ರೀತಿ ಮಾತನಾಡಿಸುತ್ತಿದೆ ಎಂದರು. ಲಂಚದ ಪಾಠ: ಆರೋಗ್ಯ ಸಚಿವರೇ ವಿಧಾನ ಸೌಧದಲ್ಲಿ ಹೇಳಿದ್ದರು ಲಂಚ ತೆಗೆದುಕೊಳ್ಳೋದು ತಪ್ಪಿಲ್ಲ ಎಂದು ಹೇಳಿದ್ದರು. ದುಡ್ಡು ಹೊಡೆಯುವುದನ್ನು ನಾವು ಕಲಿತುಕೊಂಡಿದ್ದೇವೆ ನೀವು ಕಲಿತು ಕೊಳ್ಳಿ ಎಂದು ವಿಧಾನ ಸಭೆಯಲ್ಲಿ ಪಾಠ ಮಾಡಿದ್ದಾರೆ ಎಂದರು.

 ಗುಬ್ಬಿ ಶಾಸಕ ಶ್ರೀನಿವಾಸ್‌, ಮೇಯರ್‌ ರವಿಕುಮಾರ್‌, ತುಮಕೂರು ಜೆಡಿಎಸ್‌ ಅಭ್ಯರ್ಥಿ ಗೋವಿಂದ ರಾಜ್‌, ಜೆಡಿಎಸ್‌ ಜಿಲ್ಲಾ ಮಹಾ ಪ್ರಧಾನ ಕಾಯದರ್ಶಿ ಇಂತಿಯಾಸ್‌ ಇದ್ದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.