ಪುನೀತ್ ಈಗ ನಟ ಸಾರ್ವಭೌಮ; ಹೊಸ ಚಿತ್ರಕ್ಕೆ ಟೈಟಲ್ ಸಿಕ್ತು
Team Udayavani, Mar 15, 2018, 1:51 PM IST
ಡಾ.ರಾಜ್ಕುಮಾರ್ ಅವರಿಗೆ “ನಟ ಸಾರ್ವಭೌಮ’ ಎಂಬ ಬಿರುದನ್ನು ಅಭಿಮಾನಿಗಳು, ಚಿತ್ರಪ್ರೇಮಿಗಳು ಕೊಟ್ಟಿದ್ದು ನಿಮಗೆ ಗೊತ್ತೇ ಇದೆ. ಈಗ ಆ ಬಿರುದು ಪುನೀತ್ರಾಜಕುಮಾರ್ಗೆ ಸಿಕ್ಕಿದೆ. ಇದು ಬೇರ್ಯಾರೋ ಕೊಟ್ಟ ಬಿರುದಲ್ಲ. ಚಿತ್ರತಂಡವೊಂದು ಕೊಟ್ಟ ಬಿರುದು! ಹೌದು, ಪುನೀತ್ರಾಜಕುಮಾರ್ ಅವರ ಹೊಸ ಚಿತ್ರದ ಟೈಟಲ್ ಬಗ್ಗೆ ಅನೇಕರಿಗೆ ಕುತೂಹಲವಿತ್ತು. ಚಿತ್ರಕ್ಕೆ ಏನು ಟೈಟಲ್ ಇಡಬಹುದೆಂದು ಅಭಿಮಾನಿಗಳು ಕಾಯುತ್ತಿದ್ದರು. ಈಗ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದ್ದು, “ನಟ ಸಾರ್ವಭೌಮ’ ಎಂದಿಡಲಾಗಿದೆ. ಈ ಮೂಲಕ ಮುಂದೆ ಪುನೀತ್ ಅವರನ್ನು ಅಭಿಮಾನಿಗಳು “ನಟ ಸಾರ್ವಭೌಮ’ ಎಂದು ಕರೆಯಬಹುದು.
ರಾಕ್ಲೈನ್ ವೆಂಕಟೇಶ ನಿರ್ಮಾಣದ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. “ರಣವಿಕ್ರಮ’ ನಂತರ ಪುನೀತ್-ಪವನ್ ಜೋಡಿಯ ಎರಡನೇ ಸಿನಿಮಾವಿದು. ಈಗಾಗಲೇ “ನಟ ಸಾರ್ವಭೌಮ’ ಚಿತ್ರೀಕರಣ ಕೂಡಾ ಆರಂಭವಾಗಿದೆ. ಈ ಚಿತ್ರಕ್ಕಾಗಿ ಪುನೀತ್ ಹೇರ್ಸ್ಟೈಲ್ ಕೂಡಾ ಬದಲಾಗಿದ್ದು, ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಆರಂಭದಲ್ಲಿ ಈ ಚಿತ್ರಕ್ಕೆ ಪ್ರಿಯಾಂಕಾ ಜ್ವಾಲಕರ್ ನಾಯಕಿಯಾಗಿದ್ದರು. ಈಗ ಅವರು ಬದಲಾಗಿದ್ದು, ರಚಿತಾ ರಾಮ್ಗೆ ಪುನೀತ್ ಸಿನಿಮಾದಲ್ಲಿ ಮತ್ತೂಮ್ಮೆ ಅವಕಾಶ ಸಿಕ್ಕಿದೆ. ಚಿತ್ರಕ್ಕೆ ವೈದಿ ಛಾಯಾಗ್ರಹಣ, ಇಮಾನ್ ಡಿ ಸಂಗೀತವಿದೆ. ಚಿತ್ರದ ಫಸ್ಟ್ಲುಕ್ ಪುನೀತ್ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ