ಡಿಜಿಟಲ್ ಅರ್ಥವ್ಯವಸ್ಥೆಗೆ ದೇಶಗಳು ಸಿದ್ಧಗೊಂಡಿಲ್ಲ
Team Udayavani, Mar 30, 2018, 9:45 AM IST
ನ್ಯೂಯಾರ್ಕ್: ಫೇಸ್ಬುಕ್ ಹಾಗೂ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯ ದತ್ತಾಂಶ ಅವ್ಯವಹಾರದಿಂದಾಗಿ ಬಹುತೇಕ ದೇಶಗಳು ಡಿಜಿಟಲ್ ಆರ್ಥಿಕತೆಗೆ ಇನ್ನೂ ತಯಾರಾಗಿಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಳೆದ ವರ್ಷ ಅಮೆರಿಕದ ಚುನಾವಣೆಯ ವೇಳೆ ಫೇಸ್ಬುಕ್ ದತ್ತಾಂಶವನ್ನು ಬಳಸಿ ಕೇಂಬ್ರಿಜ್ ಅನಾಲಿಟಿಕಾ ಅಕ್ರಮ ಎಸಗಿತ್ತು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸರಕು ಹಾಗೂ ಸೇವೆಗಳ ಖರೀದಿಯೂ ಹೆಚ್ಚುತ್ತಿದೆ. ಹೀಗಾಗಿ ಗ್ರಾಹಕರ ಆನ್ಲೈನ್ ವಹಿವಾಟು ರಕ್ಷಿಸುವ ಜವಾಬ್ದಾರಿ ಸರಕಾರಗಳ ಮೇಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.