2011ರ ವಿಶ್ವಕಪ್ನ ಧೋನಿ ಬ್ಯಾಟ್ ಗರಿಷ್ಠ ಮೊತ್ತಕ್ಕೆ ಹರಾಜು
Team Udayavani, Apr 3, 2018, 7:15 AM IST
ನವದೆಹಲಿ: 2011ರಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಂ.ಎಸ್.ಧೋನಿ ಬಳಸಿದ ಬ್ಯಾಟ್ 72 ಲಕ್ಷ ರೂ.ಗೆ ಹರಾಜಾಗಿತ್ತು. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತಕ್ಕೆ ಹರಾಜಾಗಿರುವ ಬ್ಯಾಟ್ ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.
ಅಂದು ಭಾರತ ತಂಡದ ನಾಯಕನಾಗಿದ್ದ ಎಂ.ಎಸ್.ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಭಾರತ ಚಾಂಪಿಯನ್ ಆಗುವಂತೆ ಮಾಡಿದ್ದರು. ವಿಶ್ವಕಪ್ ಮುಗಿದು 3 ತಿಂಗಳ ನಂತರ ಲಂಡನ್ನಲ್ಲಿ ಬ್ಯಾಟನ್ನು ಹರಾಜು ಹಾಕಲಾಗಿತ್ತು. ವಿಶೇಷ ಎಂದರೆ ಈ ಬ್ಯಾಟ್ 72 ಲಕ್ಷ ರೂ.ಗೆ ಹರಾಜು ಆಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತಕ್ಕೆ ಹರಾಜಾದ ಬ್ಯಾಟ್ ಆಗಿದೆ. ಹರಾಜಿನಿಂದ ಬಂದ ಹಣವನ್ನು ಧೋನಿ ಪತ್ನಿ ಸಾಕ್ಷಿ ನಡೆಸುತ್ತಿರುವ ಸಾಮಾಜಿಕ ಸಂಸ್ಥೆಗೆ ಬಳಸಲಾಗಿದೆ.