ಗುಲ್ಬರ್ಗ ವಿವಿಗೆ ಬಸವೇಶ್ವರ ಹೆಸರನ್ನಿಡಿ

Team Udayavani, Apr 7, 2018, 11:24 AM IST

gul-3.jpg

ಕಲಬುರಗಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಶೀಘ್ರವೇ ಸಾಮಾಜಿಕ ಪರಿವರ್ತನೆಗೆ
ನಾಂದಿ ಹಾಡಿದ ಜಗಜ್ಯೋತಿ ಬಸವೇಶ್ವರ ಹೆಸರನ್ನು ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಘೋಷಣೆ
ಮಾಡಬೇಕೆಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಗೌರವ ಸಲಹೆಗಾರ, ಹಿರಿಯ ಜಾನಪದ ವಿದ್ವಾಂಸ ಡಾ| ಗೊ.ರು.
ಚನ್ನಬಸಪ್ಪ ಆಗ್ರಹಿಸಿದರು.

ಶುಕ್ರವಾರ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ಕಟ್ಟಡದ ಅನುಭವ ಮಂಟಪದಲ್ಲಿ ಶ್ರೀ ಗಳಂಗಳಪ್ಪ ಪಾಟೀಲ ಬಸವಾದಿ
ಶರಣ ಸಾಹಿತ್ಯ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಯುವಕರಿಗಾಗಿ ವಚನ ಸಾಹಿತ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವೀಯ ನೆಲೆಯಲ್ಲಿ 12ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ವ್ಯಕ್ತಿ ಮತ್ತು ಸಮಾಜವನ್ನು ಏಕಕಾಲಕ್ಕೆ ಪರಿವರ್ತನೆಯಾಗುವಂತೆ ಮಾಡುವಲ್ಲಿ ಕಾರಣರಾದ ಬಸವೇಶ್ವರ ಹೆಸರು ವಿವಿಗೆ ಇಡುವ ಮೂಲಕ ಬಸವಾದಿ ಶರಣರಿಗೆ ಗೌರವ
ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಬಹುತೇಕ ಕ್ರಿಮಿನಲ್‌ ವ್ಯಕ್ತಿಯುಳ್ಳ ಹೆಸರಿಡಲಾಗಿದೆ. ಬದಲಾಗಿ 30 ಜಿಲ್ಲೆಗಳ ಹೆಸರಿಟ್ಟರೆ ಆ ಜಿಲ್ಲೆಯ ಜನರಿಗೆ ಹೆಚ್ಚಿನ ಖುಷಿ ತರುತ್ತದೆ. ಕನ್ನಡಿಗರನ್ನು ಒಡೆದಾಳುವ ನೀತಿ ಸರ್ಕಾರಗಳದ್ದಾಗಿದೆ. ಈಗ ವೀರಶೈವ-ಲಿಂಗಾಯತ್‌ ಯುದ್ಧ ಆರಂಭವಾಗಿದೆ ಎಂದು ಹೇಳಿದರು. ವಚನಕಾರರು ತೋರಿದ ಕಾಯಕದ ಪರಿಕಲ್ಪನೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಯುವಕರ ಜೀವನ ಜಾಗೃತಾವಸ್ಥೆಯಿಂದ ಕೂಡಬೇಕಾದರೆ ಕಾಯಕದಲ್ಲಿ ತೊಡಗಿರಬೇಕು. ರಾಜಕೀಯ ವ್ಯವಸ್ಥೆ ಯುವ ಜನಾಂಗದ ದಾರಿ ತಪ್ಪಿಸುವಂತಿದೆ. ವಚನಗಳನ್ನು ನಾಮಾಂಕಿತಗಳನ್ನು ಮೀರಿ ಓದಿದಾಗ ಮಾತ್ರ ನಿಜಾರ್ಥದ ಅರಿವು ಉಂಟಾಗುತ್ತದೆ. ಇಲ್ಲದಿದ್ದರೆ ಪೂರ್ವಗ್ರಹ ಉಂಟಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಎಸ್‌.ಆರ್‌.ನಿರಂಜನ್‌ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ತಿಳಿಸುವುದೇ ಶಿಕ್ಷಣದ ಮೊದಲ ಹೆಜ್ಜೆಯಾಗಿದೆ. ಬಸವಾದಿ ಶರಣರ ಕುರಿತ ಅಧ್ಯಯನಕ್ಕೆ ಬಸವಕಲ್ಯಾಣದಲ್ಲಿ ಎಂ.ಎ. ಕನ್ನಡ (ಶರಣ ಸಾಹಿತ್ಯ) ಸ್ನಾತಕೋತ್ತರ
ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು. ಬಸವಾದಿ ಶರಣ ಸಾಹಿತ್ಯ ಕೇಂದ್ರದ ದಾಸೋಹಿ ಬಿ.ಜಿ. ಪಾಟೀಲ, ಯುವ ಮುಖಂಡ ಚಂದು ಪಾಟೀಲ, ಕುಲಸಚಿವ ದಯಾನಂದ ಅಗಸರ, ಗುವಿವಿ ಸಿಂಡಿಕೇಟ್‌ ಸದಸ್ಯ ಚಂದ್ರಶೇಖರ ನಿಟ್ಟೂರೆ, ವಿತ್ತಾಧಿಕಾರಿ
ಪ್ರೊ| ಲಕ್ಷ್ಮಣ ರಾಜನಾಳಕರ್‌, ಪ್ರೊ| ಎಚ್‌.ಟಿ.ಪೋತೆ, ಪ್ರೊ| ಪರಿಮಳಾ ಅಂಬೇಕರ್‌ ಮುಂತಾದವರಿದ್ದರು. ಕೇಂದ್ರದ ನಿರ್ದೇಶಕಿ
ಡಾ| ಜಯಶ್ರೀ ದಂಡೆ ಪ್ರಾಸ್ತಾವಿಕ ಮಾತನಾಡಿದರು. ಡಾ| ಗಿರಿಗೌಡ ಅರಳಿಹಳ್ಳಿ, ಡಾ| ಶಿವಲೀಲಾ ಶೀಲವಂತ ನಿರೂಪಿಸಿದರು. ಪೂಜಾ ವಚನ ಪ್ರಾರ್ಥಿಸಿದರು. ಉದ್ಘಾಟನಾ ಸಮಾರಂಭದ ನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ಜರುಗಿದವು

ಟಾಪ್ ನ್ಯೂಸ್

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Farooq Abdullah

ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.