ಕೋಸ್ಟಲ್‌ ಸಿನೆಮಾದಲ್ಲಿ ಏರಾ ಉಲ್ಲೆರ್‌ ! 

Team Udayavani, Apr 26, 2018, 11:53 AM IST

26-April-7.jpg

ತುಳು ರಂಗಭೂಮಿ ಹಾಗೂ ಸಿನೆಮಾ ಅಂದಾಗ ಪಕ್ಕನೆ ಕೇಳಿ ಬರುವ ಹೆಸರು ದೇವದಾಸ್‌ ಕಾಪಿಕಾಡ್‌. ತುಳು ಸಾಂಸ್ಕೃತಿಕ ಲೋಕದ ಬೆಳವಣಿಗೆಯಲ್ಲಿ ಕಾಪಿಕಾಡ್‌ ಶ್ರಮ ಅಷ್ಟರ ಮಟ್ಟಿಗೆ ಉಲ್ಲೇಖನೀಯ. ತೆಲಿಕೆದ ಬೊಳ್ಳಿ, ಚಂಡಿ ಕೋರಿ, ಅರೆಮರ್ಲೆರ್‌ ಸಹಿತ ತುಳು ಸಿನೆಮಾ ಲೋಕದಲ್ಲಿ ಕಾಪಿಕಾಡ್‌ ಅವರದ್ದು ನಿರಂತರ ಕೊಡುಗೆ. ಅದೇ ಮೂಡ್‌ನ‌ಲ್ಲಿ ಈಗ ಸದ್ದಿಲ್ಲದೆ ಸಿನೆಮಾ ಮಾಡುವುದಕ್ಕೆ ಕಾಪಿಕಾಡ್‌ ಮುಂದಾಗಿದ್ದಾರೆ.

ಈಗಾಗಲೇ ಚಿತ್ರದ ಹೆಸರನ್ನು ಪ್ರಕಟಿಸಿರುವ ಕಾಪಿಕಾಡ್‌, ಶೂಟಿಂಗ್‌ ಸಹಿತ ಇತರ ಮಾಹಿತಿಗಳನ್ನು ಸಸ್ಪೆನ್ಸ್‌ ಆಗಿ ಇಡಲು ವಿಶೇಷ ಕಾಳಜಿ ವಹಿಸಿದ್ದಾರೆ. ಹೀಗಾಗಿಯೇ ಚಿತ್ರದ ಮುಹೂರ್ತ ನಡೆದು ನಾಲ್ಕೈದು ದಿನದ ಶೂಟಿಂಗ್‌ ನಡೆದಿದ್ದರೂ, ಕಾಪಿಕಾಡ್‌ ಅವರು ತಾವು ಮಾಡುತ್ತಿರುವ ಸಿನೆಮಾದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸಿನೆಮಾ ಶೂಟಿಂಗ್‌ ಎಲ್ಲ ಮುಗಿದ ಅನಂತರವೇ ಸಿನೆಮಾದ ಬಗ್ಗೆ ಪ್ರಚಾರ ಮಾಡುವ ಎಂಬ ಯೋಚನೆಯಲ್ಲಿ ಅವರಿದ್ದಾರೆ.

ಸಿನೆಮಾದ ಹೆಸರು ‘ಏರಾ ಉಲ್ಲೆರ್‌’. ಹೆಸರೇ ಸೂಚಿಸುವಂತೆ ಇಲ್ಲೊಂದು ಸಸ್ಪೆನ್ಸ್‌ನ ಸೂಚನೆ ಪಕ್ಕಾ ಆದಂತಾಗುತ್ತದೆ. ಹೀಗಾಗಿ ಈ ಸಿನೆಮಾ ಸಸ್ಪೆನ್ಸ್‌ ಎನ್ನುವುದು ದೃಢವಾಗುತ್ತದೆ. ತುಳುವಿನಲ್ಲಿ ಇಂತಹ ಪ್ರಯತ್ನ ಅಪರೂಪ. ಯಾಕೆಂದರೆ ಕಾಮಿಡಿ ಗಿಮಿಕ್‌ನಲ್ಲಿಯೇ ಸಿನೆಮಾ ಓಡುವುದು ಎಂದು ಈಗಾಗಲೇ ಫಿಕ್ಸ್‌ ಆಗಿರುವ ಕೋಸ್ಟಲ್‌ವುಡ್‌ನ‌ಲ್ಲಿ ಕಾಮಿಡಿ ಜತೆಗೆ ಇನ್ನೂ ಏನಾದರೂ ಬೇಕು ಎಂಬ ಕಳಕಳಿಗೆ ಕಾಪಿಕಾಡ್‌ ಸ್ಪಂದಿಸಿದ್ದಾರೆ. ಇದೇ ಕಾರಣಕ್ಕಾಗಿ ಸಸ್ಪೆನ್ಸ್‌ ಚಿತ್ರ ಮಾಡಲು ಮನಸ್ಸು ಮಾಡಿದ್ದಾರೆ.

ಗುಟ್ಟು ಬಿಡದೆ, ಮಂಗಳೂರಿನಲ್ಲಿ ಶೂಟಿಂಗ್‌ ಕಾಣುತ್ತಿರುವ ‘ಏರಾ ಉಲ್ಲೆರ್‌’ನಲ್ಲಿ ಅರ್ಜುನ್‌ ಕಾಪಿಕಾಡ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ‘ಕರ್ಣೆ’ ಶೂಟಿಂಗ್‌ ಮುಗಿಸಿ ಬಂದಿರುವ ಅರ್ಜುನ್‌ ‘ಏರಾ ಉಲ್ಲೆರ್‌’ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಾಯಕಿಯಾಗಿ ರಶ್ಮಿತಾ ಚಂಗಪ್ಪ ಕಾಣಿಸಲಿದ್ದಾರೆ. ಉಳಿದಂತೆ ಯಾರಿದ್ದಾರೆ ಎಂಬುದು ಸದ್ಯದ ಕುತೂಹಲ. ಅಂದಹಾಗೆ, ತುಳುವಿನ ಕಾಮಿಡಿ ಸ್ಟಾರ್‌ ಗಳು ಇದರಲ್ಲೂ ಇದ್ದಾರೆ ಹಾಗೂ ಹೊಸ ಮುಖಗಳಿಗೆ ವಿಶೇಷ ಒತ್ತು ನೀಡಲಾಗಿದೆ ಎಂಬ ಮಾಹಿತಿ ಇದೆ.

ಈಗಾಗಲೇ ಕಾಪಿಕಾಡ್‌ ‘ಅರೆ ಮರ್ಲೆರ್‌’ ಮುಗಿಸಿದ ಅನಂತರ ‘ಪಿಸ್‌ಂಟೆ’ ಎಂಬ ಸಿನೆಮಾ ಮಾಡುವುದಿತ್ತು. ಜತೆಗೆ ಕನ್ನಡದಲ್ಲಿ ‘ಜಬರ್ದಸ್ತ್’ ಎಂಬ ಸಿನೆಮಾ ಮಾಡುವ ಬಗ್ಗೆಯೂ ಯೋಚಿಸಿದ್ದರು. ಆದರೆ, ಅದರ ಮಧ್ಯೆಯೇ ಈಗ ದಿಢೀರಾಗಿ ‘ಏರಾ ಉಲ್ಲೆರ್‌’ ಸಿನೆಮಾ ಮಾಡಲಾಗುತ್ತಿದೆ. ಬೊಳ್ಳಿ ಮೂವೀಸ್‌ ಲಾಂಛನದಲ್ಲಿ ಸಿನೆಮಾ ರೆಡಿಯಾಗುತ್ತಿದೆ. ಮುಂದಿನ 18 ದಿನದಲ್ಲಿ ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಲಿದೆ. ರಂಗಭೂಮಿ- ಸಿನೆಮಾದಲ್ಲಿ ಎವರ್‌ಗ್ರೀನ್‌ ಹಾಡುಗಳನ್ನು ನೀಡಿರುವ ಕಾಪಿಕಾಡ್‌ ಅವರೇ ಈ ಸಿನೆಮಾಕ್ಕೂ ಸಂಗೀತ ಒದಗಿಸಲಿದ್ದಾರೆ.

 ದಿನೇಶ್‌ ಇರಾ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.