ಸುಪ್ರೀಂ ನ್ಯಾಯಮೂರ್ತಿಯಾಗಿ ಇಂದೂ ಮಲ್ಹೋತ್ರಾ ಪ್ರಮಾಣ
Team Udayavani, Apr 28, 2018, 6:00 AM IST
ಹೊಸದಿಲ್ಲಿ: ಸುಪ್ರೀಂಕೋರ್ಟ್ ನ್ಯಾಯಮಮೂರ್ತಿಯಾಗಿ ಇಂದೂ ಮಲ್ಹೋತ್ರಾ (61)ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಿಗೆೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಧಿಕಾರದ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಮೂಲಕ ಸಿಜೆಐ ಸೇರಿದಂತೆ ಸುಪ್ರೀಂಕೋರ್ಟಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
67 ವರ್ಷಗಳ ಇತಿಹಾಸದಲ್ಲಿ ಮಹಿಳಾ ನ್ಯಾಯ ಮೂರ್ತಿಯೊಬ್ಬರು ವಿಭಾಗೀಯ ಪೀಠದಲ್ಲಿರು ವುದು 3ನೇ ಬಾರಿಯಾಗಿದೆ. ನ್ಯಾ| ಜ್ಞಾನ ಸುಧಾ ಮಿಶ್ರಾ ಮತ್ತು ನ್ಯಾ| ರಂಜನಾ ಪ್ರಕಾಶ್ ದೇಸಾಯಿ ಹಾಗೂ ನ್ಯಾ| ರಂಜನಾ ಪ್ರಕಾಶ್ ದೇಸಾಯಿ ಮತ್ತು ನ್ಯಾ| ಆರ್.ಭಾನುಮತಿ ವಿಭಾಗೀ ಯ ಪೀಠದ ನೇತೃತ್ವ ವಹಿಸಿದ್ದರು. ಈಗ ನ್ಯಾ| ಇಂದೂ ಮಲ್ಹೋತ್ರಾ ಮತ್ತು ನ್ಯಾ| ಆರ್. ಭಾನುಮತಿ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದಾರೆ.
ಸ್ವಾತಂತ್ರಾ ನಂತರ ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ ಮೊದಲ ಮಹಿಳಾ ವಕೀಲೆ ಎಂಬ ಹೆಗ್ಗಳಿಕೆಗೆ ನ್ಯಾ| ಇಂದೂ ಮಲ್ಹೋತ್ರಾ ಪಾತ್ರರಾಗಿದ್ದಾರೆ. ಈ ಸ್ಥಾನಕ್ಕೇರಿದ 7ನೇ ಮಹಿಳಾ ನ್ಯಾಯಮೂರ್ತಿ.
ಹುಟ್ಟಿದ್ದು ಬೆಂಗಳೂರಿನಲ್ಲಿ: ನ್ಯಾ| ಇಂದೂ ಮಲ್ಹೋತ್ರಾ ಬೆಂಗಳೂರಿನಲ್ಲಿ ನ್ಯಾಯವಾದಿಗಳ ಕುಟುಂಬದಲ್ಲಿ ಜನಿಸಿದವರು. 1983ರಲ್ಲಿ ಅವರು ದಿಲ್ಲಿ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿಕೊಂಡರು. 1988ರಲ್ಲಿ ಸುಪ್ರೀಂಕೋರ್ಟ್ ವಕೀಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು