ಬೀದಿಗೆ ಬಂದ ಬದುಕು, ಪರ್ಯಾಯ ವ್ಯವಸ್ಥೆ ಕಲ್ಪಿಸದಕ್ಕೆ ಆಕ್ರೋಶ​​​​​​​


Team Udayavani, May 8, 2018, 6:20 AM IST

0705uppe1-2.jpg

ಮರವಂತೆ: ತ್ರಾಸಿ-ಮರವಂತೆ ಕಡಲ ತೀರದಲ್ಲಿ ನೆಲೆಸಿರುವ 40 ಗೂಡಂಗಡಿಗಳ ತೆರವು ಕಾರ್ಯಾಚರಣೆ ಸೋಮವಾರ ಬೆಳಗ್ಗೆ ನಡೆದಿದೆ.

ಕುಂದಾಪುರ ಸಹಾಯಕ ಕಮೀಷನರ್‌ ಭೂಬಾಲನ್‌ ಹಾಗೂ ಬೈಂದೂರು ತಹಶೀಲ್ದಾರ ಪುರಂದರ ಹೆಗಡೆ ಪೊಲೀಸ್‌ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರದ ಮೂಲಕ ಗೂಡಂಗಡಿಗಳನ್ನು ನೆಲಸಮಗೊಳಿಸಲು ಮುಂದಾದಾಗ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. 

ಆತ್ಮಹತ್ಯೆಗೆ ಯತ್ನ
ಪೊಲೀಸ್‌ ಸರ್ಪಗಾವಲಿನ ನಡುವೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ವ್ಯಾಪಾರಸ್ಥರು ಕಕ್ಕಾಬಿಕ್ಕಿಯಾಗಿದ್ದರು. ಈಗ ಬಂದು ಹೋಗಿ ಎಂದರೆ ಎಲ್ಲಿ ಹೋಗುವುದು ಆದರಿಂದ 15ದಿನಗಳ ಕಾಲಾವಕಾಶ ನೀಡಬೇಕು ಎಂದು ವಿನಂತಿಸಿದರು ಕೇಳಲಿಲ್ಲ, ಈ ನಡುವೆ ಕಾರ್ಯಾಚರಣೆಗೆ ಮುಂದಾದಾಗ ಕೆಲ ವ್ಯಾಪಾರಸ್ಥರು ಸಮುದ್ರಕ್ಕೆ ಹಾರಿ ಜೀವ ಕಳೆದುಕೊಳ್ಳಲು ಯತ್ನಿಸಿದರು. ಬಳಿಕ ಅಧಿಕಾರಿಗಳು ಸಂಜೆಯ ವರೆಗೆ ತೆರವುಗೊಳಿಸಲು ಸಮಯ ನೀಡಿದರು. ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಹಿಂದಿನ ಭರವಸೆ ಠುಸ್‌
ಈ ಹಿಂದೆ ಅಧಿಕಾರಿಗಳು ತ್ರಾಸಿ ಪ್ರವಾಸಿ ಮಂದಿರದಲ್ಲಿ ವ್ಯಾಪಾರಸ್ಥರೊಂದಿಗೆ ಮಾತುಕತೆ ನೆಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಭರವಸೆ ನೀಡಿದರು. ಪರ್ಯಾಯ ಜಾಗವನ್ನು ನೀಡದೆ ನಿಮ್ಮನ್ನು ತೆರವುಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅದರೆ ಈಗ ಏಕಾಏಕಿ ಬಂದು ನಮ್ಮ ಹೊಟ್ಟೆ ಮೇಲೆ ಹೊಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ವ್ಯಾಪಾರಸ್ಥರು.

ಪರ್ಯಾಯ ಸ್ಥಳವಕಾಶವನ್ನೇ ಮಾಡದೇ, ಜಾಗವನ್ನು ತೆರವುಗೊಳಿಸುವಂತೆ ಅಧಿಕಾರಿಗಳು ಮುಂದಾಗಿರುವ ಪರಿಣಾಮ ವ್ಯಾಪಾರಸ್ಥರ ಬದುಕಿನಲ್ಲಿ ಸುನಾಮೀಯೇ ಅಪ್ಪಳಿಸಿದ ಅನುಭವವಾಗಿದೆ. ಇವರ ಆದಾಯವನ್ನೇ ನಂಬಿಕೊಂಡಿರುವ ಇವರ ಕುಟುಂಬದವರನ್ನು ಚಿಂತೆಗೀಡು ಮಾಡಿದೆ. ಅಧಿಕಾರಿಗಳು ಸೂಕ್ತ ಸ್ಥಳವನ್ನು ಮೊದಲೆ ನೀಡಿವ ಮೂಲಕ ಮಾನವೀಯತೆಯ ಔದಾರ್ಯವನ್ನು ತೋರಬಹುದಿತ್ತು. ಸಾಧ್ಯವಾದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡಲಿ ಎನ್ನುವ ಆಶಯ ಸಾರ್ವಜನಿಕರದಾಗಿದೆ. 

ಊಟ ಕಸಿದುಕೊಂಡರು
13ವರ್ಷಗಳಿಂದ ಇಲ್ಲಿನ ದಿನಿತ್ಯದ ವ್ಯಾಪಾರ ನಂಬಿಕೊಂಡು ನನ್ನ ಹಾಗೂ ಕುಟುಂಬದವರ ಜೀವನ ನಡೆಯುತಿತ್ತು. ಇದೇ ಬದುಕಿನ ಆಧಾರ ಸ್ತಂಭವಾಗಿತು. ಬೇರೆ ವ್ಯವಸ್ಥೆ ಮಾಡದೇ ಜಾಗ ಬಿಡಲು ಹೇಳಿದಾಗ ಕೈಕಾಲುಗಳು ನಡುಗಲು ಶುರುವಾಗಿದೆ. ಒಂದು ತಿಂಗಳ ಬಳಿಕ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ. ಅಲ್ಲಿಯ ವರೆಗೇ ದಿನ ದೂಡುವುದಾದರು ಹೇಗೆ ಬದುಕೇ ದುಸ್ಥರವಾಗಿ ಪರಿಣಮಿಸಿದೆ ಎಂದು ಕಣ್ಣೀರಿಡುತ್ತಾರೆ ರಾಜಶೇಖರ್‌ ಕುಂದರ್‌.

ಜೀವಗಳನ್ನು ಉಳಿಸಿದ್ದೇನೆ..!
ಪ್ಯಾಪಾರದಲ್ಲಿ ಸಿಗುವ ಒಂದಿಷ್ಟು ಲಾಭಾಂಶದಿಂದಲ್ಲೇ ಜೀವನ ಸಾಗುತಿತ್ತು. ನಮಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಸಾಕಿತ್ತು. ಅಲ್ಲಿಗೆ ಹೋಗಬಹುದಿತ್ತು. ಇಷ್ಟೊಂದು ಪೊಲೀಸ್‌ ಬಂದೋಬಸ್ತ್ ಮಾಡುವುದು ಬೇಕಿರಲಿಲ್ಲ, ನಾವು ಹೊಟ್ಟೆಪಾಡಿಗಾಗಿ ಇಲ್ಲಿರೋದೋ, 20ವರ್ಷಗಳಿಂದ ಇಲ್ಲಿದ್ದು, ನಾಲ್ಕು ಜೀವಗಳನ್ನು ಉಳಿಸಿದ್ದೇನೆ. ಸ್ವಲ್ಪ ದಿನಗಳ ಸಮಯವನ್ನು ನೀಡುವ ಮಾನವೀಯತೆಯು ತೋರಲಿಲ್ಲ.
– ನಿತ್ಯಾನಂದ ವ್ಯಾಪಾರಿ,

ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು 
ಕೆಲವು ಸಮಯದಿಂದ ತೆರವು ಮಾಡುವಂತೆ ತಿಳಿಸುತ್ತಿದ್ದು ಇದುವರೆಗೂ ತೆರವುಗೊಳಿಸದೇ ಇರುವುದರಿಂದ ಈಗ ಕಾರ್ಯಾಚರಣೆ ಮೂಲಕ ತೆರವುಗೊಳಿಸುವುದು ಅನಿವಾರ್ಯವಾಗಿದೆ. ವ್ಯಾಪಾರಿಗಳಿಗೆ ಒಂದು ತಿಂಗಳ ಬಳಿಕ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.   
– ಭೂಬಾಲನ್‌,  ಕುಂದಾಪುರ ಸಹಾಯಕ ಕಮೀಷನರ್‌ 

ಟಾಪ್ ನ್ಯೂಸ್

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.