ಬಿಳಿ ಪಂಚೆ, ಅಂಗಿ ಧರಿಸಿ ಬಂದ ಕುಮಾರಸ್ವಾಮಿ
Team Udayavani, May 24, 2018, 7:05 AM IST
ಬೆಂಗಳೂರು: ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಳಿ
ಪಂಚೆ ಮತ್ತು ಬಿಳಿ ಶರ್ಟ್ ಧರಿಸಿ ಆಗಮಿಸಿದ್ದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಳಿ ಬಣ್ಣದ ಪೈಜಾಮದಲ್ಲಿದ್ದರು. ಮಾಜಿ ಪ್ರಧಾನಿ ಎಚ್.ಡಿ.
ದೇವೇಗೌಡ, ಪತ್ನಿ ಚೆನ್ನಮ್ಮ ದೇವೇಗೌಡ ಅವರು 4.10ರ ವೇಳೆ ವೇದಿಕೆಗೆ ಬಂದರೆ, ಕುಮಾರಸ್ವಾಮಿ ಅವರು 4.15ಕ್ಕೆ ವೇದಿಕೆ ಏರಿದರು. ಇದಾದ ಒಂದು ನಿಮಿಷಕ್ಕೆ ಡಾ.ಜಿ.ಪರಮೇಶ್ವರ್ ಬಂದರು. ಇದಾದ ಬಳಿಕ, 4.24ರ
ವೇಳೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವೇದಿಕೆಯೇರಿದರು