ಬಾವಲಿ ಸಂತತಿಗೇ ಮಾರಕವಾದ ನಿಫ

Team Udayavani, May 28, 2018, 11:19 AM IST

blore-6.jpg

ತುಮಕೂರು: ಇಂದಿನ ಆಧುನಿಕ ಭರಾಟೆಯ ನಡುವೆ ನಮೊಟ್ಟಿಗೆ ಬದುಕು ನಡೆಸುತ್ತಿದ್ದ ಅನೇಕ ಜೀವ ಜಂತುಗಳು ಕಾಣದಂತಹ ಸ್ಥಿತಿ ತಲುಪಿವೆ. ಪ್ರಾಣಿ ಜಗತ್ತಿನಲ್ಲಂತೂ ದುರ್ಬಲ ಜೀವಿಗಳಿಗೆ ಉಳಿಗಾಲವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಆಹಾರ ಹುಡುಕಿಕೊಂಡು ಕಾಡಿನಲ್ಲಿರ ಬೇಕಾದ ಪ್ರಾಣಿ ಪಕ್ಷಿಗಳು ನಾಡಿನತ್ತ ಆಗಮಿಸು ತ್ತಿದ್ದು, ಪರಿಸರ ಅಸಮತೋಲನ ದಿಂದ ಕಣ್ಣಿಗೆ ಕಾಣ ದಂತೆ ಅನೇಕ ಜೀವ ಜಂತುಗಳು ದೂರವಾಗುತ್ತಿವೆ. ಈಗ ಈ ಸಾಲಿಗೆ ಬಾವಲಿಗಳು ಸೇರುತ್ತಿವೆ. ನಿಪ ವೈರಾಣು ಬಾವಲಿಗಳಿಂದ ಹರಡುತ್ತಿದೆ ಎಂದು ಅವು ಗಳನ್ನು ಸಾಯಿಸಲು ಮುಂದಾಗುತ್ತಿದ್ದಾರೆ.

ಬಾವಲಿಗಳಿಂದ ನಿಪ ವೈರಾಣು ಹರಡುತ್ತಿದೆಯೇ? 
ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಪ ವೈರಾಣುವಿನಿಂದ ಕಾಣಿಸಿಕೊಳ್ಳುತ್ತಿರುವ ರೋಗದಿಂದ ಮನುಷ್ಯ ಉಳಿಯುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಈ ವೈರಾಣು ಬಾವಲಿಗಳಿಂದ ಮತ್ತು ಕೆಲವು ಹಕ್ಕಿ ಪಕ್ಷಿಗಳಿಂದ ಹಂದಿಗಳಿಂದ ಹರಡುತ್ತದೆ ಎನ್ನುವ ಸುದ್ದಿ ಹಿನ್ನೆಲೆಯಲ್ಲಿ ಈಗ ಈ ಬಾವಲಿಗಳ ಸಂತತಿಯನ್ನು ನಾಶ ಮಾಡಲು ಹೊರಟಿರುವುದು ಅಪರೂಪದ ಪಕ್ಷಿಗಳ ವಿನಾಶ ಮಾಡಿದಂತೆ ಆಗುತ್ತದೆ.

ಬಾವಲಿಗಳಿಂದ ನಿಪ ವೈರಾಣು ಹರಡುತ್ತಿಲ್ಲ ಎಂದು ಈಗಾಗಲೇ ಧೃಡಪಟ್ಟಿದೆ. ಆದರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಬಾವಲಿಗಳನ್ನು ಹಿಡಿದು ಸಾಯಿಸಿ ಅವುಗಳನ್ನು ಭೂಮಿಯಲ್ಲಿ
ಹೂಳಲು ತೀರ್ಮಾನ ಕೈಗೊಂಡಿರುವುದು ಪಕ್ಷಿ ಪ್ರಿಯರಿಗೆ ಆತಂಕ ಉಂಟಾಗಿದೆ.

ರೈತ ಸ್ನೇಹಿ ಬಾವಲಿ: ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿ ಪಕ್ಷಿಯೂ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬಾವಲಿಗಳು ರೈತ ಸ್ನೇಹಿಯಾಗಿವೆ. ರಾತ್ರಿ ವೇಳೆಯಲ್ಲಿ ಹಣ್ಣು ಹಂಪಲುಗಳನ್ನು ತಿಂದು ಆ ಬೀಜವನ್ನು ಪರಿಸರದಲ್ಲಿ ಉದುರಿಸಿ ಗಿಡ ಮರಗಳು ಬೆಳೆಯಲು ಸಹಕಾರಿಯಾಗುತ್ತೆ. ಕೆಲವು ಕೀಟಗಳನ್ನು ತಿಂದು ರೈತರಿಗೆ ನೆರವಾಗುತ್ತವೆ. ಇಂತಹ ಬಾವಲಿಗಳಿಂದ ರೋಗ ಹರಡುತ್ತಿದೆ ಎಂದು ವದಂತಿ ಹುಟ್ಟುತ್ತಿದೆ.

ನಿಪ ರೋಗ ಕಾಣಿಸಿಕೊಂಡಿರುವುದು ಕೇರಳದಲ್ಲಿ. ತುಮಕೂರಿಗೂ ಕೇರಳಕ್ಕೂ ನೂರಾರು ಕಿ.ಮೀ. ಅಂತರವಿದೆ. ಬಾವಲಿಗಳ ಒಂದು ದಿನಕ್ಕೆ ಹತ್ತರಿಂದ ಹದಿನೈದು ಕಿ.ಮೀ. ದೂರ ಹೋಗಿ ಆಹಾರ ಸೇವಿಸಿ ಬೆಳಗಾಗುವುದರೊಳಗೆ ತಮ್ಮ ಸ್ಥಳಕ್ಕೆ ಬಂದು ಮರದಲ್ಲಿ ನೇತಾಡುತ್ತವೆ. ಈ ಬಾವಲಿಗಳಿಗೆ ಆ ವೈರಾಣು ಹರಡಿಲ್ಲ ಆದರೆ ಈ ಬಾಗದ
ಬಾವಲಿಗಳನ್ನು ಹಿಡಿದು ಸಾಯಿಸಲು ಗ್ರಾಮ ಪಂಚಾಯಿತಿ ನಿರ್ಧಾರ ಕೈಗೊಂಡಿರುವುದು ಎಷ್ಟು ಸರಿ ಎನ್ನುವ ಚರ್ಚೆ ಆರಂಭಗೊಂಡಿದೆ.

ಈಗಾಗಲೇ ಹಲವು ಪಕ್ಷಿ ಸಂಕುಲ ನಾಶವಾಗಿವೆ ಇರುವ ಪಕ್ಷಿಗಳನ್ನು ಸಂರಕ್ಷಿಸಿ ಅವುಗಳ ಸಂತತಿಯನ್ನು ಬೆಳವಣಿಗೆ ಮಾಡುವತ್ತ ಸರ್ಕಾರ ಸೂಕ್ತ ದಿಟ್ಟ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಎಲ್ಲಿಯೂ ಬಾವಲಿ ಸೇರಿದಂತೆ ಯಾವುದೇ ಪ್ರಾಣಿ ಪಕ್ಷಿಗಳನ್ನು ಸಾಯಿಸದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.