13ರ ಪುತ್ರಿಯ ಮೇಲೆ 6 ತಿಂಗಳು ಅತ್ಯಾಚಾರ ಎಸಗಿದ ಅಪ್ಪ ಅರೆಸ್ಟ್
Team Udayavani, Jun 6, 2018, 5:33 PM IST
ಕೋಟ, ರಾಜಸ್ಥಾನ : ಆರು ತಿಂಗಳ ಕಾಲ ತನ್ನ 13 ವರ್ಷ ಪ್ರಾಯದ ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಆಕೆಯ 43 ವರ್ಷ ಪ್ರಾಯದ ತಂದೆಯನ್ನು ರಾಜಸ್ಥಾನದ ಝಳವಾರ್ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಅತ್ಯಾಚಾರಿ ತಂದೆಯು ವೃತ್ತಿಯಲ್ಲಿ ಕಾರ್ಮಿಕನಾಗಿದ್ದು ಕುಡುಕನಾಗಿದ್ದ ಮತ್ತು ಪತ್ನಿಯನ್ನು ಬಿಟ್ಟಿದ್ದ. ಈ ದಂಪತಿಗೆ ಮೂವರು ಮಕ್ಕಳು. ಆರು ತಿಂಗಳ ಹಿಂದೆ ತನ್ನ ಪರಿತ್ಯಕ್ತ ಪತ್ನಿಯ ಬಳಿಗೆ ಹೋಗಿದ್ದ ಆತ ಪುತ್ರಿ ಮತ್ತು ಮಗನನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಅವರನ್ನು ತನ್ನ ಸಂಗಡ ಒಯ್ದಿದ್ದ. ಈ ಆರು ತಿಂಗಳ ಕಾಲವೂ ಆತ ತನ್ನ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ.
ಆಕೆಯ ತಾಯಿ ಈಚೆಗೆ ಮಕ್ಕಳನ್ನು ಕಾಣಲೆಂದು ಅವರ ತಂದೆಯ ಮನೆಗೆ ಹೋಗಿದ್ದಾಗ ಪುತ್ರಿಯು ತನ್ನ ಮೇಲೆ ತಂದೆ ನಡೆಸುರುವ ಲೈಂಗಿಕ ದೌರ್ಜನ್ಯವನ್ನು ವಿವರಿಸಿದಳು. ಕೂಡಲೇ ತಾಯಿ ಪೊಲೀಸರಿಗೆ ದೂರು ನೀಡಿದಳು.
ಅದಾಗಲೇ ತಲೆ ಮರೆಸಿಕೊಂಡಿದ್ದ ಅತ್ಯಾಚಾರಿಯನ್ನು ಪೊಲೀಸರು ಮೊನ್ನೆ ಸೋಮವಾರ ಸೆರೆ ಹಿಡಿದು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಯನ್ನು 15 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು