“ತಂದೆಯರ ದಿನಾಚರಣೆ’ಗೆ “ಕಿಲಾಡಿ ಪೊಲೀಸ್’ ಗಿಫ್ಟ್: ಬೊಂಬಾಟ್ ಟೀಸರ್ ವೀಕ್ಷಿಸಿ
Team Udayavani, Jun 17, 2018, 3:07 PM IST
ಸ್ಯಾಂಡಲ್ವುಡ್ನಲ್ಲಿ ತಾಯಂದಿರ ದಿನಾಚರಣೆಯಂದು ಚಿರಂಜೀವಿ ಸರ್ಜಾ ಅಭಿನಯದ “ಅಮ್ಮ ಐ ಲವ್ ಯೂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲ ತಾಯಂದಿರಿಗೆ ಸಮರ್ಪಿಸಲಾಗಿತ್ತು. ಇದೀಗ ಕನ್ನಡದ ನಟ ಹರೀಶ್ ರಾಜ್ ಒಂದು ಹೆಜ್ಜೆ ಮುಂದೆ ಹೋಗಿ “ತಂದೆಯರ ದಿನಾಚರಣೆ’ ಸಲುವಾಗಿ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಅದನ್ನು ಎಲ್ಲ ತಂದೆಯರಿಗೂ ಅರ್ಪಿಸಿದ್ದಾರೆ. ಹೌದು! “ಶ್ರೀ ಸತ್ಯನಾರಾಯಣ’ ಚಿತ್ರದ ನಂತರ ಹರೀಶ್ ರಾಜ್ ಅವರ ಇನ್ನೊಂದು ಚಿತ್ರ “ಕಿಲಾಡಿ ಪೊಲೀಸ್’ ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅವರ ನಿರ್ಮಾಣ ಮತ್ತು ನಿರ್ದೇಶನದ ಐದನೆಯ ಚಿತ್ರ. ಇನ್ನು ಈ ಚಿತ್ರದ ಟೀಸರ್ ನ್ನು “ತಂದೆಯರ ದಿನಾಚರಣೆಯಂದು ಬಿಡುಗಡೆ ಮಾಡಿದ್ದು, ಎಲ್ಲ ತಂದೆಯರಿಗೂ ಇದನ್ನು ಅರ್ಪಿಸಲಾಗಿದೆ. ಈ ಟೀಸರ್ ನಲ್ಲಿ ಹೇಳುವ ಹಾಗೆ “ತಾಯಿ ನಂತರ ಕಣ್ಣಿಗೆ ಕಾಣೋ ದೇವರು ಅಂದರೆ ಅದು ತಂದೆ. ತನ್ನ ಮಗುವನ್ನ ತಾಯಿಯಷ್ಟೇ ಪ್ರೀತಿ ಮಾಡುತ್ತಾನೆ. ಆದರೆ ಹೇಳಿಕೊಳ್ಳೊಕ್ಕೆ ಬರಲ್ಲ. ಬೆರಳು ಹಿಡಿದು ನಡೆಯೋದು ಕಲಿಸುತ್ತಾನೆ, ತಮಾಷೆ ಮಾಡಿ ನಗಿಸುತ್ತಾನೆ. ತಪ್ಪು ಮಾಡಿದಾಗ ಹೊಡೆದು, ಬಯ್ದು, ಬುದ್ಧಿ ಕಲಿಸುತ್ತಾನೆ. ಹೆಂಡತಿ ಮಕ್ಕಳು ಚೆನ್ನಾಗಿರಬೇಕು ಅಂತಾ, ಎಷ್ಟೇ ದುಃಖ ಇದ್ದರೂ ಯಾರ ಹತ್ತಿರನೂ ತೋರಿಸಿಕೊಳ್ಳದೇ, ನಗು – ನಗುತಾ ಖುಷಿಯಾಗಿ ಮಕ್ಕಳನ್ನು ಬೆಳೆಸುತ್ತಾನೆ, ಎಲ್ಲ ತಂದೆಯಂದಿರಿಗೂ ಒಂದು ಆಸೆ ಇರುತ್ತೆ. ನಮ್ಮಪ್ಪನ ಆಸೆ ನಾನು ಪೊಲೀಸ್ ಆಗಬೇಕು ಅಂತಾ’. ಎಂಬ ಸಂದೇಶದ ಜೊತೆಗೆ “ಹ್ಯಾಟ್ಸ್ ಆಫ್ ಟು ಅಲ್ ಫಾಧರ್ಸ್’, ಹ್ಯಾಪಿ ಫಾಧರ್ಸ್ ಡೇ ಎಂಬ ಸಂದೇಶದೊಂದಿಗೆ ತೆರೆ ಬೀಳುತ್ತದೆ. ಚಿತ್ರದ ತಂದೆಯ ಮಹತ್ವ ಸಾರುವ ಟೀಸರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..