ಸಿಡಿಲಿಗೂ ಅಂಜದ ಕಂಚಿನ ಹುಡುಗಿ

Team Udayavani, Jun 24, 2018, 6:00 AM IST

abhinaya-1.jpg

ಬೆಂಗಳೂರು: “ಒಂದಲ್ಲ, ಎರಡು ಸಲ ನಮ್ಮ ಮನೆಗೆ ಸಿಡಿಲು ಬಡಿಯಿತು…!’
“ಮೊದಲ ಸಲ ಸಿಡಿಲು ಬಡಿದಾಗ ಕಣ್ಣೆದುರಿಗೆ ಅಣ್ಣನನ್ನು ಕಳೆದುಕೊಂಡೆ. ಎರಡನೇ ಸಲ ಸಿಡಿಲು ಬಡಿದಾಗ ಕೊಟ್ಟಿಗೆಯಲ್ಲಿದ್ದ ಪ್ರೀತಿ ಪಾತ್ರವಾದ ಮೂರು ಹಸುಗಳೆಲ್ಲ ಸತ್ತು ಬಿದ್ದವು. ಈಗ ನಾವು ಸಿಡಿಲಿಗೆ ಹಿಡಿ ಶಾಪ ಹಾಕಿಕೊಂಡೆ ಮನೆ ಬದಲಾಯಿಸಿದ್ದೇವೆ. ಮನೆ ಜವಾಬ್ದಾರಿ ಹೊರಬೇಕಿದ್ದ ಅಣ್ಣನ ಸಾವು ಇನ್ನೂ ಕಣ್ಣ ಮುಂದೆಯೇ ಇದೆ. ನಮ್ಮ ಮನೆಯ ಎಲ್ಲ ಹೊರೆಯನ್ನು ನನ್ನ ಅಪ್ಪ ಇಳಿವಯಸ್ಸಿನಲ್ಲಿ ಹೊತ್ತುಕೊಂಡಿದ್ದಾರೆ. ಕಷ್ಟಪಟ್ಟು ನನ್ನನ್ನು ಸಾಕಿ ಕ್ರೀಡಾಪಟುವಾಗಿಸಿದ್ದಾರೆ. ಇದೀಗ ನಾನು ಹೈಜಂಪ್‌ನಲ್ಲಿ 2 ಸಲ ಅಂತಾರಾಷ್ಟ್ರೀಯ ಮತ್ತು 6 ಬಾರಿ ರಾಷ್ಟ್ರೀಯ ಪದಕ ಗೆದ್ದಿದ್ದೇನೆ. ಪ್ರಸ್ತುತ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಳ್ಳುವ ಹಠಕ್ಕೆ ಬಿದ್ದಿದ್ದೇನೆ. ಗೆದ್ದೇ ಗೆಲ್ಲುತ್ತೇನೆ…’ ಎಂದು ಹೇಳುವಷ್ಟರಲ್ಲಿ ಆ ಹುಡುಗಿಯ ಕಣ್ಣಾಲಿಗಳು ತೇವಗೊಂಡಿದ್ದವು.

ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ದಕ್ಷಿಣ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಮತ್ತು ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಶ್ಯನ್‌ ಕೂಟದ ಹೈಜಂಪ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಜೆಯ ಅಭಿನಯ ಶೆಟ್ಟಿ (20 ವರ್ಷ) “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳು, ಸಾಧನೆಯ ಕ್ಷಣಗಳನ್ನು ನೆನಪಿಸಿಕೊಂಡರು.

ಬದುಕಿನ ಹಳಿ ತಪ್ಪಿಸಿದ ಆ ಸಿಡಿಲು!
“ಆಗ ನನಗಿನ್ನೂ 12 ವರ್ಷ. 6ನೇ ತರಗತಿಯಲ್ಲಿದ್ದೆ. ನನ್ನ ಅಣ್ಣ ಅಭಿಲಾಷ್‌ (14 ವರ್ಷ). ಅವನು 8ನೇ ತರಗತಿಯಲ್ಲಿ ಓದುತ್ತಿದ್ದ, ಒಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ಅಣ್ಣ ನಮ್ಮ ಮನೆಯ ಅಡುಗೆ ಕೋಣೆಯ ಕಿಟಕಿ ಪಕ್ಕದಲ್ಲಿ ನಿಂತಿದ್ದ.  ಎಲ್ಲಿಂದ ಸಿಡಿಲು ಬಂದು ಬಡಿಯಿತೋ ಗೊತ್ತಿಲ್ಲ. ಒಂದೇ ಸೆಕೆಂಡ್‌ನ‌ಲ್ಲಿ ನಮ್ಮ ಮನೆ ಛಿದ್ರವಾಗಿತ್ತು. ಅಣ್ಣನನ್ನು ಕಳೆದುಕೊಂಡು ನಾವು ಅನಾಥರಾದೆವು. ಈ ನೋವು ಕಾಡುತ್ತಿದ್ದಾಗಲೇ 2017ರಲ್ಲಿ ಮತ್ತೂಮ್ಮೆ ಸಿಡಿಲು ಬಡಿಯಿತು. ಈ ವೇಳೆ ಮನೆಯ ಪಕ್ಕದಲ್ಲಿದ್ದ ಹಸು ಕಟ್ಟುವ ಕೊಟ್ಟಿಗೆ ನುಚ್ಚು ನೂರಾಗಿತ್ತು. ಮೂರು ಹಸುಗಳು ನೋಡ ನೋಡುತ್ತಿದ್ದಂತೆ ಸತ್ತು ಬಿದ್ದಿದ್ದವು. ಆ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು ಅಭಿನಯ.

ಬದುಕು ಬದಲಿಸಿದ ಹೈಜಂಪ್‌
“ನನ್ನನ್ನು ತಂದೆ ಸುಧಾಕರ ಶೆಟ್ಟಿ-ತಾಯಿ ಸಜೀವಿ ಮಗನಂತೆ ಬೆಳೆಸಿದರು. ಅಣ್ಣನಿಲ್ಲದ ಮನೆಯಲ್ಲಿ ಆತನ ಸ್ಥಾನ ತುಂಬುವ ಜವಾಬ್ದಾರಿ ಹೊತ್ತೆ. ಕ್ರೀಡಾಪಟುವಾಗುವ ಕನಸು ಕಂಡಿದ್ದಾಗ ಆಳ್ವಾಸ್‌ ಶಿಕ್ಷಣ ಸಂಸ್ಥೆ ನನಗೆ ಅವಕಾಶ ಕೊಟ್ಟಿತು. ಹೈಜಂಪ್‌ನಲ್ಲಿ ನನಗೆ ಬದುಕು ಕಟ್ಟಿ ಕೊಟ್ಟಿತು. ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಲು ಮನ ತುಡಿಯುತ್ತಿದೆ’ ಎಂದರು ಅಭಿನಯ ಶೆಟ್ಟಿ.

ವಿಶ್ವ ಕೂಟದತ್ತ ಅಭಿನಯ ಕಣ್ಣು
ಪ್ರಸ್ತುತ ಅಭಿನಯ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ಹಿರಿಯರ ರಾಷ್ಟ್ರೀಯ ಕೂಟದಲ್ಲಿ ರಾಜ್ಯ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ. ಇದೇ ಮೊದಲ ಸಲ ಅವರು ಹಿರಿಯರ ಆ್ಯತ್ಲೆಟಿಕ್ಸ್‌ ತಂಡದಲ್ಲಿ ಸ್ಥಾನ ಪಡೆ‌ದಿರುವುದು ವಿಶೇಷ.

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.