ಸುಲಿಗೆಕೋರರ ಬಂಧನ: ಸಿಕ್ಕಿತು ವಾಹನ-ಆಭರಣ


Team Udayavani, Jun 25, 2018, 5:14 PM IST

25-june-20.jpg

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಪೊಲೀಸರು ಕುಖ್ಯಾತ ಸುಲಿಗೆಕೋರರಿಬ್ಬರನ್ನು ಬಂಧಿಸಿ, ಅವರಿಂದ ಅಂದಾಜು 1.76 ಲಕ್ಷ ರೂ. ಮೌಲ್ಯದ ನಾಲ್ಕು ದ್ವಿಚಕ್ರ ವಾಹನ, ಮೊಬೈಲ್‌, ಎರಡು ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಳೇಹುಬ್ಬಳ್ಳಿ ಆನಂದನಗರ ರಸ್ತೆ ಸಂಗಮ ಕಾಲೋನಿಯ ಶಾಂತಪ್ಪ ಎಸ್‌. ವೀರಾಪುರ ಹಾಗೂ ಚನ್ನಪೇಟೆ ಅಂಬೇಡ್ಕರ್‌ ಕಾಲೋನಿಯ ಮಹದೇವ ಎಸ್‌. ಭರಮಣ್ಣವರ ಬಂಧಿತ ಸುಲಿಗೆಕೋರರಾಗಿದ್ದು, ಅಜೀಜ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಬಂಧಿತರು ಜೂ. 13ರಂದು ತಾರಿಹಾಳ ರಸ್ತೆ ಜಗದೀಶನಗರ ಕ್ರಾಸ್‌ ಬಳಿ ಟಾಟಾ ಏಸ್‌ ವಾಹನ ಅಡ್ಡಗಟ್ಟಿ ಅದರಲ್ಲಿದ್ದವರಿಗೆ ಚಾಕು ತೋರಿಸಿ ಹೆದರಿಸಿ ನಗ-ನಾಣ್ಯ, ಮೊಬೈಲ್‌ ದೋಚಿಕೊಂಡು ಹೋಗಲು ಯತ್ನಿಸಿದ್ದರು. ಆಗ ಅಡ್ಡಿಪಡಿಸಿದ್ದ ಓರ್ವನಿಗೆ ಚಾಕುವಿನಿಂದ ಇರಿದು ಗಾಯಪಡಿಸಿ ಪರಾರಿಯಾಗಿದ್ದರು. ಈ ಕುರಿತು ಕಲಘಟಗಿ ತಾಲೂಕು ಬಿಸರಳ್ಳಿ ಗ್ರಾಮದ ಜ್ಯೋತಿ ಹುಂಡಿ ಎಂಬುವರು ಗೋಕುಲ ರಸ್ತೆ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ದೂರಿನನ್ವಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಶಾಂತಪ್ಪ ವೀರಾಪುರ ಹಾಗೂ ಮಹದೇವ ಭರಮಣ್ಣವರ ಎಂಬುವರನ್ನು ಶನಿವಾರ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಶಾಂತಪ್ಪನು ಧಾರವಾಡದಲ್ಲಿ ಮೂರು ಹಾಗೂ ಹಳೇಹುಬ್ಬಳ್ಳಿಯಲ್ಲಿ ಒಂದು ದ್ವಿಚಕ್ರ ವಾಹನ ಕಳವು ಮಾಡಿ, ಆ ಮೂಲಕ ಸುಲಿಗೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಈತನ ವಿರುದ್ಧ ಹು-ಧಾದಲ್ಲಿ 13 ಸುಲಿಗೆ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಹದೇವ ವಿರುದ್ಧವೂ ಅವಳಿ ನಗರದಲ್ಲಿ 13 ಸುಲಿಗೆ ಪ್ರಕರಣಗಳು ದಾಖಲಾಗಿವೆ. ಇವರಿಬ್ಬರು ಸುಲಿಗೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ವಶದಲ್ಲಿದ್ದರು. ಮೂರು ತಿಂಗಳ ಹಿಂದಷ್ಟೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಡಿಸಿಪಿಗಳಾದ ರೇಣುಕಾ ಸುಕುಮಾರ, ಬಿ.ಎಸ್‌. ನೇಮಗೌಡ, ಎಸಿಪಿ ಎಚ್‌.ಕೆ. ಪಠಾಣ ಮಾರ್ಗದರ್ಶನದಲ್ಲಿ ಗೋಕುಲ ರಸ್ತೆ ಠಾಣೆ ಇನ್‌ ಸ್ಪೆಕ್ಟರ್‌ ಮಲ್ಲಯ್ಯ ಮಠಪತಿ, ಪಿಎಸ್‌ಐ ಎಸ್‌. ಎಚ್‌. ದೊಡ್ಡಮನಿ, ಸಿಬ್ಬಂದಿಗಳಾದ ಎಸ್‌.ಎಚ್‌. ತಹಶೀಲ್ದಾರ, ಸಂಜೀವ ಕುರಹಟ್ಟಿ, ಎನ್‌.ಐ. ನೀಲಗಾರ, ಬಸವರಾಜ ಬೆಳಗಾವಿ, ಎಸ್‌.ಎಫ್‌. ಕಣಬೂರ, ಆರ್‌. ವೈ. ಕೋತಂಬ್ರಿ, ಎಸ್‌.ಜಿ. ಹೊಸಮನಿ, ಕೆ.ಎಚ್‌. ನೀಲಪ್ಪಗೌಡರ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಅಜೀಜ್‌ ಪತ್ತೆಗೆ ಜಾಲ ಬೀಸಿದ್ದಾರೆ.

ಟಾಪ್ ನ್ಯೂಸ್

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Anjali Ambigera Case; Protest by BJP workers in Hubli

Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರಮಠದ ಜಗದ್ಗುರು ಶ್ರೀ

Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರ ಮಠದ ಜಗದ್ಗುರು

Anjali Ambigera case: ABVP protest in Hubli

Anjali Ambigera case: ಹುಬ್ಬಳ್ಳಿಯಲ್ಲಿ ಎಬಿವಿಪಿ ಪ್ರತಿಭಟನೆ

mango

ಧಾರವಾಡ ಮಾವು ಮೇಳಕ್ಕೆ ಉತ್ತಮ‌ ಸ್ಪಂದನೆ: 40 ಟನ್ ಮಾರಾಟ, ಮತ್ತೆ ಮೂರು ದಿನ‌ ವಿಸ್ತರಣೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್‌ ಪಂದ್ಯ ಆಯೋಜನೆ

India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್‌ ಪಂದ್ಯ ಆಯೋಜನೆ

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.