10 ಸೂತ್ರ…11 ಜನರ ಸಾಮೂಹಿಕ ಸಾವಿನ ಹಿಂದಿನ ರಹಸ್ಯ ಬಯಲು?

Team Udayavani, Jul 2, 2018, 3:21 PM IST

dead.jpg

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ ನವದೆಹಲಿಯ ಒಂದೇ ಕುಟುಂಬದ 11 ಮಂದಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಸಾಮೂಹಿಕ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ದೆಹಲಿಯ ಬಾಟಿಯ ಕುಟುಂಬದ ಸಾಮೂಹಿಕ ಸಾವಿನ ರಹಸ್ಯ ಬಯಲಾಗಿರುವುದು ಡೈರಿಯಿಂದಾಗಿ!. ಅತೀಯಾದ ದೈವಭಕ್ತಿಯಿಂದ 11 ಮಂದಿಯೂ ಮೋಕ್ಷ ಪಡೆಯಲು ಸಾವಿಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.

ಮೋಕ್ಷಕ್ಕಾಗಿ ಸಾಯಲು 10 ಸೂತ್ರಗಳನ್ನು ಡೈರಿಯಲ್ಲಿ ಬರೆಯಲಾಗಿದೆ. ಮಾನವನ ದೇಹ, ಬದುಕು ತಾತ್ಕಾಲಿಕ ಎಂದು ಕೂಡಾ ಉಲ್ಲೇಖಿಸಲಾಗಿದೆ.

ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜಿನೆಗಾದಿ ಬಾಬಾ ಅವರ ಪ್ರೇರಣೆಯಂತೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾರಾ? ಅಥವಾ ಇದೊಂದು ವ್ಯವಸ್ಥಿತ ಕೊಲೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ಮೋಕ್ಷ ಪಡೆಯಲು ಡೈರಿಯಲ್ಲಿದ್ದ 10 ಸೂತ್ರಗಳು ಯಾವುದು ಗೊತ್ತಾ?

1)ಮೋಕ್ಷದ ಸಾವು ಪಡೆಯಲು ಭಾನುವಾರ ಇಲ್ಲವೇ ಗುರುವಾರ ಆಯ್ಕೆ ಮಾಡಿಕೊಳ್ಳಬೇಕು ಸೂಕ್ತ

2)ಸಾಯುವ ಮುನ್ನ ಬಾಯಿ, ಕಣ್ಣಿಗೆ ಸೀರೆ/ದುಪ್ಪಟ್ಟದಿಂದ ಗಟ್ಟಿಯಾಗಿ ಕಟ್ಟಬೇಕು.

3)ಏಳು ದಿನಗಳೇ ಮೊದಲೇ ಈ ವೃತವನ್ನು ಕಟ್ಟುನಿಟ್ಟಾಗಿ ಆಚರಿಸಬೇಕು

4)ಹತ್ಯೆ ಮಾಡುವಾಗ ವಯಸ್ಸಾದವರು ಇದ್ದರೆ ಅವರನ್ನು ಮಲಗಿಸಿ ಜೀವ ತೆಗೆಯಬೇಕು

5)ಮೋಕ್ಷಕ್ಕಾಗಿ ಹತ್ಯೆ ಮಾಡುವಾಗ ಬೆಳಕು ಹೆಚ್ಚು ಇರಬಾರದು.

6)ಮೋಕ್ಷದ ಹತ್ಯೆಗೆ ಬದ್ಧರಾಗಿರಬೇಕು

7)ಬಾಯಿಗೆ ಬಿಗಿಯಾಗಿ ಬಟ್ಟೆ ಕಟ್ಟಬೇಕು

8)ಎಲ್ಲರ ತಲೆಯಲ್ಲೂ ಇದೇ ಯೋಚನೆ ಇರಬೇಕು.

9)ಕೈಯನ್ನು ಕಟ್ಟಿದ ಮೇಲೆ ಬಟ್ಟೆ ಉಳಿದರೆ ಕಣ್ಣನ್ನೂ ಕಟ್ಟಬೇಕು.

10)ಮಧ್ಯರಾತ್ರಿ 12ರಿಂದ 1ಗಂಟೆಯೊಳಗೆ ಆಗಬೇಕು, ಹೋಮ, ಹವನ ಮಾಡಬೇಕು.

ಘಟನೆಯ ವಿವರ:

ಆಘಾತಕಾರಿ ಬೆಳವಣಿಗೆ ಯಲ್ಲಿ ನವದೆಹಲಿಯ ಒಂದೇ ಕುಟುಂಬದ 11 ಮಂದಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಎಲ್ಲರ ಕೈಗಳನ್ನೂ ಹಿಂದಕ್ಕೆ ಕಟ್ಟಿರುವುದಲ್ಲದೇ, ಕಣ್ಣಿಗೂ ಬಟ್ಟೆ  ಕಟ್ಟಲಾಗಿದೆ. ಮೊದಲಿಗೆ ಆತ್ಮಹತ್ಯೆ ಎಂದು ಹೇಳಿದ್ದ ದೆಹಲಿ ಪೊಲೀಸರು, ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೃತರಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು, ನಾಲ್ವರು ಬಾಲಕಿಯರು ಸೇರಿದ್ದಾರೆ. ಒಂಬತ್ತು ಮಂದಿ ಕಿಟಕಿ ಸರಳಿಗೆ ನೇಣು ಹಾಕಿ ಕೊಂಡಿರುವ ಸ್ಥಿತಿಯಲ್ಲಿ, ಒಬ್ಬ ಮಹಿಳೆ ಬಾಗಿಲಿನ ಚಿಲಕಕ್ಕೆ ನೇಣು ಬಿಗಿದು ಕೊಂಡಂತೆ ಹಾಗೂ ಒಬ್ಬ ಮಹಿಳೆಯ ಶವ ನೆಲದ ಮೇಲೆ ಪತ್ತೆಯಾಗಿತ್ತು.

ಇದು ಉತ್ತರ ದೆಹಲಿಯ ಸಂತ್‌ ನಗರದಲ್ಲಿನ ರಾಜಸ್ಥಾನಿ ಕುಟುಂಬವಾಗಿದ್ದು, ಕಿರಾಣಿ ಮತ್ತು ಪ್ಲೆವುಡ್‌ ಅಂಗಡಿ ನಡೆಸುತ್ತಿದೆ. ಜತೆಗೆ ಮನೆಯಲ್ಲಿ ಸದ್ಯದಲ್ಲೇ ವಿವಾಹ ಕಾರ್ಯಕ್ರಮವೊಂದನ್ನು ಆಯೋಜಿಸಲು ತಯಾರಿ ನಡೆದಿತ್ತು ಎಂದೂ ಮೂಲಗಳು ತಿಳಿಸಿದ್ದವು.

ಭಾನುವಾರ ಬೆಳಗ್ಗೆ 7.30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ ಯಾರೂ ಮನೆಯಿಂದ ಹೊರಗೆ ಬರದ ಕಾರಣ ನೆರೆಮನೆಯವರು ಕಿಟಕಿ ಮೂಲಕ ನೋಡಿದಾಗ ವಿಚಾರ ಗೊತ್ತಾಗಿದೆ. ಸದ್ಯಕ್ಕೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಪೊಲೀಸರು ಭಾನುವಾರ ತಿಳಿಸಿದ್ದರು.

ಟಾಪ್ ನ್ಯೂಸ್

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.