ಆಲಿಂಗಿಸಿದಕ್ಕೆ ಬಂಧನ
Team Udayavani, Jul 16, 2018, 9:00 AM IST
ರಿಯಾದ್: ಕಟ್ಟರ್ ಸಂಪ್ರದಾಯವಾದಿ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪುರುಷ ಗಾಯಕರೊಬ್ಬರು ಹಾಡುತ್ತಿದ್ದಾಗ, ವೇದಿಕೆಗೆ ಧಾವಿಸಿ ಬಂದು ಅವರನ್ನು ಆಲಿಂಗಿಸಿದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ‘ಅರಬ್ ಗಾಯನದ ರಾಜಕುಮಾರ’ ಎಂದೇ ಖ್ಯಾತಿ ಗಳಿಸಿರುವ ಮಜೀದ್ ಅಲ್ ಮೊಹಂದಿಸ್ ಅವರು ತೈಫ್ ನಗರದ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಹಾಡುತ್ತಿದ್ದ ವೇಳೆ, ಒಮ್ಮಿಂದೊಮ್ಮೆಲೇ ಓಡಿ ಬಂದ ಯುವತಿ ಮೊಹಂದಿಸ್ರನ್ನು ಅಪ್ಪಿಕೊಂಡಳು. ಕೂಡಲೇ ಪೊಲೀಸರು ಆಕೆಯನ್ನು ಎಷ್ಟು ಎಳೆದರೂ ಆಕೆ ಗಟ್ಟಿಯಾಗಿ ತಬ್ಬಿಕೊಂಡಿದ್ದಳು. ನಂತರ ಆಕೆಯನ್ನು ಬಲವಂತವಾಗಿ ಬಂಧಿಸಿ ಕರೆದೊಯ್ಯಲಾಯಿತು. ಆಕೆಯ ವಿರುದ್ಧ ತನಿಖೆ ನಡೆಸಿ ಶಿಕ್ಷೆ ನೀಡಲಾಗುವುದು ಎಂದು ಮೆಕ್ಕಾ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ