ಮಿಡ್ನಾಪುರ : ಪ್ರಧಾನಿ ಮೋದಿ rally ಟೆಂಟ್ ಕುಸಿದು 20 ಮಂದಿಗೆ ಗಾಯ
Team Udayavani, Jul 16, 2018, 3:30 PM IST
ಮಿಡ್ನಾಪುರ : ಪಶ್ಚಿಮ ಮಿಡ್ನಾಪುರದಲ್ಲಿ ಇಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರಾಲಿಯ ವೇಳೆ ಟೆಂಟ್ ಒಂದು ಭಾಗಷಃ ಕುಸಿದು ಬಿದ್ದು ಕನಿಷ್ಠ 20 ಮಂದಿ ಗಾಯಗೊಂಡರು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಯಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದು ಗಾಯಾಳುಗಳ ಸಂಖ್ಯೆ ಹೆಚ್ಚಬಹುದೆಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಕಿಸಾನ್ ಕಲ್ಯಾಣ್ ರಾಲಿಯ ಪ್ರವೇಶ ದ್ವಾರಕ್ಕೆ ಸಮೀಪವೇ ತಾತ್ಕಾಲಿಕ ಟೆಂಟ್ ನಿರ್ಮಿಸಲಾಗಿತ್ತು. ಮೋದಿ ಅವರು ಭಾಷಣ ಮಾಡುತ್ತಿದ್ದಾಗ ಅದು ಭಾಗಷಃ ಕುಸಿದು ಬಿತ್ತು. ಗಾಯಾಳುಗಳಲ್ಲಿ ಕೆಲವರಿಗೆ ಮೂಳೆ ಮುರಿತ, ಪಕ್ಕೆಲುಬು ಮುರಿತ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಟೆಂಟ್ ಭಾಗಷಃ ಕುಸಿದು ಬೀಳುವನ್ನು ಖುದ್ದು ಕಂಡ ಪ್ರಧಾನಿ ಮೋದಿ, ಒಡನೆಯೇ ತನ್ನ ಸಮೀಪದಲ್ಲೇ ನಿಂತಿದ್ದ ಎಸ್ಪಿಜಿ ಸಿಬಂದಿಗಳಿಗೆ ಜನರ ನೆರವಿಗೆ ಧಾವಿಸಿ ಅವರಿಗೆ ನೆರವಾಗುವಂತೆ ಸೂಚಿಸಿದರು. ಕಾರ್ಯಕ್ರಮದ ಬಳಿಕ ಭಾವನಾತ್ಮಕರಾದ ಮೋದಿ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!