ಶೀರೂರು ಮೂಲಮಠದಲ್ಲಿ ಶ್ರೀಗಳ ವೃಂದಾವನ ಪ್ರವೇಶ

Team Udayavani, Jul 20, 2018, 5:35 AM IST

vrindavana-19-7.jpg

ಉಡುಪಿ: ಐಹಿಕವನ್ನು ತ್ಯಜಿಸಿದ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ವೃಂದಾವನ ಪ್ರವೇಶ ಗುರುವಾರ ಸಂಜೆ ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ  ಜರಗಿತು. ತೆರೆದ ಜೀಪಿನಲ್ಲಿ ಉಡುಪಿ ರಥಬೀದಿಯಿಂದ ಸಂಜೆ 6 ಗಂಟೆಗೆ ಹೊರಟ ಸ್ವಾಮೀಜಿ ಪಾರ್ಥಿವ ಶರೀರಕ್ಕೆ ದಾರಿಯುದ್ದಕ್ಕೂ ಜನರು ಕಾದು ನಿಂತು ಗೌರವ ಸಲ್ಲಿಸಿದರು. ಸುಮಾರು 7 ಗಂಟೆಗೆ ಶೀರೂರು ಮಠಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ದೇವರ ಸ್ಮರಣೆಯೊಂದಿಗೆ ಶರೀರವನ್ನು ಶಿಖೀಯಲ್ಲಿ (ಬುಟ್ಟಿ ) ಇರಿಸಿ ಮುಖ್ಯದ್ವಾರದಿಂದ ಒಳಗೆ ಕರೆದುಕೊಂಡು ಹೋಗಿ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡಿಸಲಾಯಿತು. ಅಲ್ಲಿ ಗೋಪಿಚಂದನವನ್ನು ಹಚ್ಚಿ ಹೊಸ ಕಾವಿಶಾಟಿಯನ್ನು ಉಡಿಸಲಾಯಿತು. ದೇವರಿಗೆ ಸಮರ್ಪಿಸಿದ ತುಳಸೀ ದಳದ ಮಾಲೆಯನ್ನು ಹಾಕಿ ವೇದೋಕ್ತ ವಿಧಿವಿಧಾನಗಳೊಂದಿಗೆ ಕಲಶಾಭಿಷೇಕ ನಡೆಸಲಾಯಿತು. ವಿರಜಾ ಮಂತ್ರ (ಸನ್ಯಾಸ ತೆಗೆದುಕೊಳ್ಳುವ ವಿಶೇಷ ಮಂತ್ರ), ಪವಮಾನ ಸೂಕ್ತ ಮೊದಲಾದ ವೇದೋಕ್ತ ಮಂತ್ರಗಳನ್ನು ಪಠಿಸುತ್ತ ಸಾಲಿಗ್ರಾಮದಿಂದ ತೀರ್ಥವನ್ನೂ ಸಮರ್ಪಿಸಲಾಯಿತು. ಬಳಿಕ ವಾದ್ಯಘೋಷದೊಂದಿಗೆ ಪಾರ್ಥಿವ ಶರೀರವನ್ನು ಮಠದೊಳಗೆ ತಂದು ದೇವರಿಗೆ ಸ್ವಾಮೀಜಿಯವರಿಂದ ಪೂಜೆ ಸಲ್ಲಿಸಲಾಯಿತು.

ಧಾರ್ಮಿಕ ವಿಧಿ ವಿಧಾನ

ಶೀರೂರು ಮೂಲ ಮಠದ ಮುಖ್ಯಪ್ರಾಣ ದೇವರ ಗುಡಿಯ ಹೊರಗೆ ಇರುವ ಜಾಗದಲ್ಲಿ ವೃಂದಾವನ ನಿರ್ಮಿಸಲು ಕುಣಿಯನ್ನು ತೆಗೆದಿಡಲಾಗಿತ್ತು. ಹೊಂಡದ ಎದುರು ಸಣ್ಣ ಕಿಂಡಿಯನ್ನು ನಿರ್ಮಿಸಲಾಗಿತ್ತು. ಕಿಂಡಿಯಲ್ಲಿ ದೇವರ ವಿಗ್ರಹ, ಶಂಖ, ಘಂಟಾಮಣಿಯನ್ನು ಇರಿಸಲಾಯಿತು. ಸ್ವಾಮೀಜಿಯವರನ್ನು ಕುಣಿಯಲ್ಲಿರಿಸಿ ಅಲ್ಲಿ ಜಪಮಾಲೆ, ಕಮಂಡಲು, ಗಿಂಡಿಯನ್ನು ಇರಿಸಲಾಯಿತು.

ಬಲಬದಿ ದಂಡವನ್ನು (ಸನ್ಯಾಸ ಸ್ವೀಕರಿಸುವಾಗ ನೀಡಿದ್ದು) ಇರಿಸಲಾಯಿತು. ಈ ಹೊತ್ತಿಗೆ ಪುರುಷ ಸೂಕ್ತವೇ ಮೊದಲಾದ ಮಂತ್ರಗಳನ್ನು ಪಠಿಸಲಾಯಿತು. ತಲೆಯ ಮೇಲಿಂದ ಸಾಂಕೇತಿಕವಾಗಿ ತೆಂಗಿನಕಾಯಿ ಒಡೆಯಲಾಯಿತು. ಪಾರ್ಥಿವ ಶರೀರದ ಸುತ್ತಲೂ ಸುಮಾರು 15 ಕೆ.ಜಿ. ಹತ್ತಿಯನ್ನು ಹಾಕಿ ಅದರ ಹೊರಭಾಗ ಉಪ್ಪು, ಸಾಸಿವೆ, ಪಚ್ಚ ಕರ್ಪೂರ, ಕಾಳುಮೆಣಸುಗಳನ್ನು ತಲಾ ಸುಮಾರು 1.5 ಕ್ವಿಂಟಾಲ್‌ನಷ್ಟು ಸುರಿಯಲಾಯಿತು. ಮೇಲ್ಭಾಗ ಕಲ್ಲು ಚಪ್ಪಡಿಯನ್ನು ಹಾಸಿ ಅದರ ಮೇಲೆ ತುಳಸಿ ಗಿಡವನ್ನು ನೆಟ್ಟರು.

ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ವೇ|ಮೂ| ಹೆರ್ಗ ವೇದವ್ಯಾಸ ಭಟ್‌ ಅವರ ನೇತೃತ್ವದಲ್ಲಿ ಜರಗಿದವು.

ಉತ್ತರಾಧಿಕಾರಿ ಆಯ್ಕೆ ಸೋದೆ ಶ್ರೀ ಹೆಗಲಿಗೆ
ಸೋದೆ ಮತ್ತು ಶೀರೂರು ದ್ವಂದ್ವ ಮಠಗಳ ಪರಂಪರೆ ವಿಶಿಷ್ಟವಾದುದು. ಸೋದೆ ಮಠದ ಪರಂಪರೆಯಲ್ಲಿ ಪ್ರತಿಯೊಬ್ಬ ಶಿಷ್ಯರನ್ನು ಅವರ ಮಠದ ಹಿರಿಯ ಸ್ವಾಮೀಜಿಯವರೇ ನೀಡಿದ್ದರು. ಶೀರೂರು ಮಠದ ಪ್ರತಿಯೊಬ್ಬ ಸ್ವಾಮೀಜಿಯವರನ್ನು ದ್ವಂದ್ವ ಮಠವಾದ ಸೋದೆ ಮಠಾಧೀಶರೇ ನೇಮಿಸಿದ್ದರು. ಈಗಲೂ ಶೀರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಹೊಣೆ ಸೋದೆ ಮಠಾಧೀಶರ ಹೆಗಲೇರಿದೆ.

ಶೀರೂರು ಮಠಕ್ಕೆ ಯಾವಾಗ ಉತ್ತರಾಧಿಕಾರಿಯನ್ನು ನೇಮಿಸುತ್ತೀರಿ ಎಂದು ಪತ್ರಕರ್ತರು ಸೋದೆ ಮಠಾಧೀಶರನ್ನು ಕೇಳಿದಾಗ, ‘ಜಾತಕ ಪರಿಶೀಲನೆ ಮಾಡಿ ನೇಮಿಸಬೇಕಾಗುತ್ತದೆ’ ಎಂದರು. ಈಗ ಆಷಾಢ ಮಾಸವಾದ ಕಾರಣ ಶಿಷ್ಯ ಸ್ವೀಕಾರ ನಡೆಸುವಂತಿಲ್ಲ, ಚಾತುರ್ಮಾಸ್ಯ ವ್ರತ ಸದ್ಯವೇ ಆರಂಭವಾಗುವ ಕಾರಣ ಬಳಿಕವೂ ನೇಮಿಸಬಹುದಾಗಿದೆ ಎಂದು ತಿಳಿದುಬಂದಿದೆ. ಸದ್ಯ ಶೀರೂರು ಮಠದ ಪಟ್ಟದ ದೇವರು ಶ್ರೀಕೃಷ್ಣ ಮಠದಲ್ಲಿ ಪೂಜೆಗೊಳ್ಳುತ್ತಿರುವುದರಿಂದ ಪೂಜೆಯ ಸಮಸ್ಯೆ ಇಲ್ಲ.

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.