ತಿಲಕ್‌ ನಗರ ಪೆಸ್ತಮ್‌ ಸಾಗರ್‌ ಕರ್ನಾಟಕ ಸಂಘ: 12ನೇ ವಾರ್ಷಿಕ ಮಹಾಸಭೆ


Team Udayavani, Jul 20, 2018, 5:46 PM IST

1907mum08.jpg

ಮುಂಬಯಿ: ಮಾನವೀಯ ನೆಲೆಯಲ್ಲಿ ಸ್ಥಾಪಿಸಲ್ಪಟ್ಟಿರುವ ನಮ್ಮ ಸಂಸ್ಥೆಯು ಇಂದು ಪರಿಸರದ ತುಳು- ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ, ಅವರ ಸುಖ-ದು:ಖಗಳಲ್ಲಿ ಭಾಗಿಯಾಗುತ್ತ ಬಲಾಡ್ಯವಾಗಿ ಬೆಳೆದು ನಿಂತಿದೆ. ಐಕ್ಯ ಮತದಿಂದ ಯಾವುದೇ ಜಾತಿ, ಮತ- ಭೇದವಿಲ್ಲದೆ ಇಂದು  ಸಂಘಟನೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ತುಳು- ಕನ್ನಡಿಗರು ಸಂಘಟಿತರಾದಾಗ ಸಮಾಜ ಬಲಿಷ್ಠವಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಸಂಸ್ಥೆಯ ಸ್ವಂತ ಕಚೇರಿಯನ್ನು ಶೀಘ್ರದಲ್ಲಿ ಪಡೆಯುವಂತಾಗಲಿ. ಈಗಾಗಲೇ ನೂತನ ಕಚೇರಿಯ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಗಿದ್ದು, ಸಂಸ್ಥೆಯ ಯೋಜನೆಗೆ ಎಲ್ಲರ ಸಹಾಯ,  ಅಗತ್ಯ ಇದೆ ಎಂದು ತಿಲಕ್‌ ನಗರ ಪೆಸ್ತಮ್‌ ಸಾಗರ್‌ ಕರ್ನಾಟಕ ಸಂಘದ ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ  ಅವರು ನುಡಿದರು.

ತಿಲಕ್‌ ನಗರ ಪೆಸ್ತಮ್‌ ಸಾಗರ್‌ ಕರ್ನಾಟಕ ಸಂಘ ಇದರ 12 ನೇ ವಾರ್ಷಿಕ ಮಹಾಸಭೆಯು ತಿಲಕ್‌ ನಗರದ  ಆಮಿc ಶಾಲಾ  ಮತ್ತು ಸಹಕಾರ್‌ ಸಿನೆಮಾ ಹತ್ತಿರದ ರಘುವಂಶಿ ಸಭಾಗೃಹದಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾರ್ಷಿಕ ವರದಿಯ ಬಗ್ಗೆ ಕೆಲವು ತಿದ್ದುಪಡಿಗಳನ್ನು ಗುಣಕರ ಹೆಗ್ಡೆ ಇವರು ನೀಡಿದರು. ಜಯ ಎ. ಶೆಟ್ಟಿ ಹಾಗೂ ಶ್ರೀಧರ ಶೆಟ್ಟಿ ಅವರು ಸೂಚಿಸಿ ಅನುಮೋದಿಸಿದರು. ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ಟಿ. ಆರ್‌. ಶೆಟ್ಟಿ ಅವರು ಮಂಡಿಸಿದರು. ಶರತ್‌ ವಿ. ಶೆಟ್ಟಿ ಮತ್ತು ಸ್ಥಾಪಕಾಧ್ಯಕ್ಷ ಶೇಖರ್‌ ಶೆಟ್ಟಿ ಅವರು ಸೂಚಿಸಿ, ಅನುಮೋದಿಸಿದರು. ವಾರ್ಷಿಕ ಲೆಕ್ಕಪತ್ರಗಳನ್ನು ಗೌರವ ಕೋಶಾಧಿಕಾರಿ ಅರುಣ್‌ಕುಮಾರ್‌ ಶೆಟ್ಟಿ ಮಂಡಿಸಿದರು. ರಘು ಮೊಲಿ ಮತ್ತು ದಿನೇಶ್‌ ಸಾಲ್ಯಾನ್‌ ಅವರು ಸೂಚಿಸಿ ಅನುಮೋದಿಸಿದರು.

2018-2019 ನೇ ಸಾಲಿಗೆ ಬಾಹ್ಯ ಲೆಕ್ಕಪರಿಶೋಧಕರಾಗಿ ಸಿಎ ವಿಶ್ವನಾಥ್‌ ಶೆಟ್ಟಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ದಯಾನಂದ ದೇವಾಡಿಗ ಇವರನ್ನು ಆಯ್ಕೆಮಾಡಲಾಯಿತು. ಸ್ವಂತ ಕಚೇರಿಯ ಬಗ್ಗೆ ಮನವಿ ಪತ್ರವನ್ನು ಕಟ್ಟಡ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಜಯ ಎ. ಶೆಟ್ಟಿ, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಕೆ. ಶೆಟ್ಟಿ, ಗೌರವ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ, ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ, ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ನಿತ್ಯಾನಂದ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಟಿ. ಆರ್‌. ಶೆಟ್ಟಿ, ಹಿರಿಯ ಸಲಹೆಗಾರ ಹರಿಶ್ಚಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ್‌ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ನ್ಯಾಯವಾದಿ ನಿತ್ಯಾನಂದ ಶೆಟ್ಟಿ ಅವರು ಮಾತನಾಡಿ, ನಮಗೆ ಸ್ವಂತ ಕಚೇರಿ ಅತೀ ಮುಖ್ಯವಾಗಿದೆ. ಈಗಾಗಲೇ ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲರು ಒಂದಾಗಿ ಇದರ ಬಗ್ಗೆ ಚರ್ಚಿಸುವ ಅನಿವಾರ್ಯತೆ ಇದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಉದ್ಯಮಿ ಸತೀಶ್‌ ಶೆಟ್ಟಿ ಇವರು ಮಾತನಾಡಿ, ನಾವೆಲ್ಲರು ಒಂದು ಕುಟುಂಬವಿದ್ದಂತೆ. ಸದಸ್ಯ ಬಾಂಧವರ ಸುಖ- ದುಃಖಗಳಲ್ಲಿ ನಾವೆಲ್ಲರು ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು. ಪ್ರೀತಿ, ವಿಶ್ವಾಸದಿಂದ ಕೈಗೊಂಡ ಯೋಜನೆಯ ಯಶಸ್ಸಿಗೆ ಮುಂದಾಗೋಣ. ಅಲ್ಲದೆ ನೂತನ ಕಚೇರಿಗಾಗಿ ತಾನು 1 ಲಕ್ಷ ರೂ. ಗಳನ್ನು ನೀಡುತ್ತಿದ್ದೇನೆ. ಎಲ್ಲರು ಸೇರಿ ಆದಷ್ಟು ಬೇಗ ಸ್ವಂತ ಕಚೇರಿ  ಸ್ಥಾಪಿಸೋಣ ಎಂದರು.

ರಾಧಾ ಭಂಡಾರಿ, ಸುಗಂಧಿ ಶೆಟ್ಟಿ, ಜಯಂತಿ ಆರ್‌. ಮೊಲಿ, ಹೀಮಾ ಸಂಪತ್‌ ಶೆಟ್ಟಿ, ಅನಿತಾ ಶೆಟ್ಟಿ, ಶಿಲ್ಪಾ ಶರತ್‌ ಶೆಟ್ಟಿ, ದಯಾನಂದ ಎಂ. ದೇವಾಡಿಗ, ಅಮರೇಶ್‌ ಶೆಟ್ಟಿ, ಜಯಂತಿ ಎಂ. ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಮಾಲತಿ ಜೆ. ಮೊಲಿ, ಕೋಶಾಧಿಕಾರಿ ಸಂಗೀತಾ ಸಿ. ಶೆಟ್ಟಿ ಅವರು ನೂತನ ಕಚೇರಿ ಸ್ಥಾಪನೆಗೆ ತಲಾ 50 ಸಾವಿರ ರೂ. ಗಳಿಗಿಂತ ಅಧಿಕ ದೇಣಿಗೆ ನೀಡುವುದಾಗಿ ಘೋಷಿಸಿದರು.
ಸಂಸ್ಥಾಪಕಾಧ್ಯಕ್ಷ ಶೇಖರ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಶ್ರೀಧರ ಶೆಟ್ಟಿ, ಶಾಲಿನಿ ಶೆಟ್ಟಿ, ಜಯಂತಿ ಮೊಲಿ, ಜಯಂತಿ ದೇವಾಡಿಗ, ಗುಣಕರ ಹೆಗ್ಡೆ, ದಯಾನಂದ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕೌಡೂರು ಸುಶೀರ್‌ ಶೆಟ್ಟಿ, ವೈದ್ಯಕೀಯ ವಿಭಾಗದ ಕಾರ್ಯಾಧ್ಯಕ್ಷ ಸುಧಾಕರ ಸಫಲಿಗ, ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಎನ್‌. ಶೆಟ್ಟಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಸೇನೆಯಿಂದ ನಿವೃತ್ತಗೊಂಡ ಸಂಪತ್‌ ಶೆಟ್ಟಿ ದಂಪತಿಯನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಟಿ. ಆರ್‌. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸಂಪತ್‌ ಶೆಟ್ಟಿ ವಂದಿಸಿದರು. ಸುದೇಶ್‌ ಶೆಟ್ಟಿ ಪ್ರಾರ್ಥನೆಗೈದರು. ಸಂಪತ್‌ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಸಂಘವು ಎಲ್ಲ  ಸಮಾಜದ ಹಾಗೂ ಇನ್ನಿತರರೊಂದಿಗೆ ಸಹಬಾಳ್ವೆಯನ್ನು ಹೊಂದಿದ್ದು, ನಮ್ಮ ಸ್ವಂತ ಕಚೇರಿಯ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಿದ್ದೀರಿ. ಖಂಡಿತವಾಗಿಯೂ ನಾನು ಹಿಂದೆ ನೋಡದೆ, ದಿಟ್ಟತನದಿಂದ ಯೋಜನೆಯ ಸಫಲತೆಗೆ ಮುಂದಾಗುತ್ತೇನೆ. ನಾವೆಲ್ಲರೂ ಒಮ್ಮತದಿಂದ ಸ್ವಂತ ಕಚೇರಿಯ ಬಗ್ಗೆ  ಕಾರ್ಯನಿರ್ವಹಿಸಬೇಕು.  ನಮ್ಮ 13ನೇ ವಾರ್ಷಿಕೋತ್ಸವವನ್ನು    2019 ನೇ, ಫೆ. 23ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆಯೋಜಿಸಲಾಗಿದೆ. ಅದಕ್ಕಿಂತ ಮೊದಲು ನಮ್ಮ ಯೋಜನೆ ಕೈಗೂಡಬೇಕು. ಎಲ್ಲರೂ ಸಹಾಯ, ಸಹಕಾರ ನೀಡಿ ಯೋಜನೆಯ ಕನಸನ್ನು ನನಸಾಗಿಸಬೇಕು 
– ಜಯ ಎ. ಶೆಟ್ಟಿ   (ಕಾರ್ಯಾಧ್ಯಕ್ಷರು, ಕಟ್ಟಡ ಸಮಿತಿ ಪೆಸ್ತಮ್‌ ಸಾಗರ್‌ ಕರ್ನಾಟಕ ಸಂಘ ತಿಲಕ್‌ನಗರ).

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.