ಕಿರಿಕ್ ಪಾರ್ಟಿ ಹಿಂದಿ ರೀಮೇಕ್ನಲ್ಲಿ ಕಾರ್ತಿಕ್
Team Udayavani, Jul 21, 2018, 3:36 PM IST
ರಕ್ಷಿತ್ ಶೆಟ್ಟಿ ಅಭಿನಯದ “ಕಿರಿಕ್ ಪಾರ್ಟಿ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಬೇರೆ ಬೇರೆ ಭಾಷೆಗಳಿಗೆ ರೀಮೇಕ್ ರೈಟ್ಸ್ ಮಾರಾಟವಾಗಿರೋದು ಗೊತ್ತೇ ಇದೆ. ಈಗಾಗಲೇ ತೆಲುಗಿನಲ್ಲಿ “ಕಿರಿಕ್ ಪಾರ್ಟಿ’ ರೀಮೇಕ್ ಬಿಡುಗಡೆಯಾಗಿ ಬಿಟ್ಟಿದೆ. ಈಗ ಹಿಂದಿ ಸರದಿ. ಹಾಗಂತ ಹಿಂದಿಯಲ್ಲಿ ಸಿನಿಮಾ ಇನ್ನಷ್ಟೇ ಆರಂಭವಾಗಬೇಕಿದ್ದು, ಸದ್ಯ ತಾರಾಗಣದ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
ಆರಂಭದಲ್ಲಿ ಹಿಂದಿ ಅವತರಣಿಕೆಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಟಿಸುತ್ತಾರೆಂದು ಹೇಳಲಾಗಿತ್ತು. ಆ ನಂತರ ಅದೇನಾಯಿತೋ ಗೊತ್ತಿಲ್ಲ, ಸಿದ್ಧಾರ್ಥ್ ಬದಲಾಗಿದ್ದಾರೆ. ಅವರ ಜಾಗಕ್ಕೆ ಕಾರ್ತಿಕ್ ಆರ್ಯನ್ ಬಂದಿದ್ದಾರೆ. ಈ ಮೂಲಕ ಕಾರ್ತಿಕ್ “ಕಿರಿಕ್ ಪಾರ್ಟಿ’ ಚಿತ್ರದಲ್ಲಿ ರಕ್ಷಿತ್ ಮಾಡಿದ ಕರ್ಣ ಮಾತ್ರವನ್ನು ಮಾಡಲಿದ್ದಾರೆ. ಕಾರ್ತಿಕ್ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುವ ಜೊತೆಗೆ ಈ ಪಾತ್ರಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತಾರೆಂಬ ವಿಶ್ವಾಸ ಚಿತ್ರತಂಡದ್ದು.
“ಕಿರಿಕ್ ಪಾರ್ಟಿ’ಯ ಹಿಂದಿ ಅವತರಣಿಕೆಯನ್ನು ಅಭಿಷೇಕ್ ಜೈನ್ ನಿರ್ದೇಶಿಸಲಿದ್ದಾರೆ. ಅಕ್ಟೋಬರ್ನಿಂದ ಚಿತ್ರೀಕರಣ ಆರಂಭವಾಗಲಿದೆ. ಅಂದಹಾಗೆ, “ಕಿರಿಕ್ ಪಾರ್ಟಿ’ ಚಿತ್ರ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಮೂಲಕ ಒಂದಷ್ಟು ಮಂದಿ ಹೊಸಬರು ಚಿತ್ರರಂಗಕ್ಕೆ ಬಂದರು. ಈಗ ಈ ಚಿತ್ರ ಬೇರೆ ಭಾಷೆಗಳಲ್ಲೂ ರೀಮೇಕ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !