ಯಾದಗಿರಿ : ಬೊಲೆರೋ ಢಿಕ್ಕಿಯಾಗಿ ಬೈಕ್ನಲ್ಲಿದ್ದ 3 ಯುವಕರ ದುರ್ಮರಣ
Team Udayavani, Jul 28, 2018, 3:28 PM IST
ಯಾದಗಿರಿ: ತಾಲೂಕಿನ ಮುಂಡರಗಿ ಬಳಿ ಬೊಲೆರೋವೊಂದು ಢಿಕ್ಕಿಯಾಗಿ ಒಂದೇ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಭೀಕರ ಅವಘಡ ಶನಿವಾರ ನಡೆದಿದೆ.
ಚಾಲಕ ಢಿಕ್ಕಿ ಹೊಡೆದ ಬಳಿಕ ಬೊಲೆರೋ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತ ದುರ್ದೈವಿಗಳು ಅಂಬರೀಶ(23), ರವಿ (21)ಮತ್ತು ಅಯ್ಯಪ್ಪ(24) ಎಂದು ತಿಳಿದು ಬಂದಿದೆ.
ಯಾದಗಿರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.