ಒಂದೇ ಹೆಸರಿನ ಇನ್ನೊಂದು ಖಾತೆಗೆ ಹಣ !

Team Udayavani, Aug 6, 2018, 3:23 PM IST

net-bank.jpg

ಪುತ್ತೂರು: ಅವರಿಬ್ಬರ ಹೆಸರು ಒಂದೇ. ಹೀಗಾಗಿ ಪತ್ನಿಯ ಖಾತೆಗೆ ಜಮೆಯಾಗಬೇಕಿದ್ದ 3 ಲಕ್ಷ ರೂ. ಇನ್ನೊಬ್ಬ ಮಹಿಳೆಯ ಖಾತೆಗೆ ಹೋಗಿದೆ. ಆದರೆ ಅದು ತನಗೇ ಸೇರಿದ್ದೆಂದು ಆ ಮಹಿಳೆ ಹೇಳುತ್ತಿದ್ದಾರೆ. ಈ ಹಣವನ್ನು ಬಿಡುಗಡೆ ಮಾಡಬೇಡಿ ಎಂದು ನ್ಯಾಯಾಲಯ ಈಗ ಬ್ಯಾಂಕಿಗೆ ಆದೇಶ ನೀಡಿದೆ.

ಇದು ನೆಟ್‌ಬ್ಯಾಂಕಿಂಗ್‌ ಅವಾಂತರದ ಒಂದು ಪ್ರಕರಣ. ತಪ್ಪಾಗಿ ಜಮೆಯಾದ ಈ ಹಣವನ್ನು ಬಿಡುಗಡೆ ಮಾಡದಂತೆ ಹರಿಯಾಣದ ಬ್ಯಾಂಕ್‌ ಶಾಖೆಯೊಂದಕ್ಕೆ ಪುತ್ತೂರು ಪ್ರಧಾನ ಸಿವಿಲ್‌ ನ್ಯಾಯಾಲಯ ಆದೇಶಿಸಿದೆ. ಡಾ| ಪೃಥ್ವಿನಾರಾಯಣ ಪಿ. ಅವರು ನೆಟ್‌ ಬ್ಯಾಂಕಿಂಗ್‌ ಮೂಲಕ ತನ್ನ ಪತ್ನಿಯ ಖಾತೆಗೆ 3 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಆದರೆ ಕಣ್ತಪ್ಪಿನಿಂದಾಗಿ ಈ ಹಣ ಹರಿಯಾಣದ ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ನ ಬಿವಾನಿ ಶಾಖೆಯ ಖಾತೆಯೊಂದಕ್ಕೆ ಜಮೆಯಾಗಿತ್ತು. ಮೂರು ದಿನಗಳ ಬಳಿಕ ಈ ವಿಷಯ ಅವರ ಗಮನಕ್ಕೆ ಬಂದಿದ್ದು, ಹಣ ಬಿಡುಗಡೆ ಮಾಡದಂತೆ ಬಿವಾನಿ ಶಾಖೆಗೆ ಮನವಿ ಮಾಡಲಾಗಿತ್ತು. ಅಷ್ಟರಲ್ಲಿ ಈ ಹಣ ತನಗೆ ಸೇರಿದ್ದು ಎಂದು ಬಿವಾನಿ ಶಾಖೆಯ ಗ್ರಾಹಕಿ ಕೂಡ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಹಣ ಬಿಡುಗಡೆ ಮಾಡದಂತೆ ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ನ ಬಿವಾನಿ ಶಾಖಾ ಪ್ರಬಂಧಕರಿಗೆ ಮಧ್ಯಾಂತರ ತಡೆಯಾಜ್ಞೆ ನೀಡಿದೆ. ಪ್ರಕರಣದಲ್ಲಿ ನ್ಯಾಯವಾದಿ ಗಿರೀಶ ಮಳಿ ವಾದಿಸಿದ್ದರು.

ಹೆಸರು ಹೋಲಿಕೆಯಿಂದ ಪ್ರಮಾದ
ಮಾಣಿ ಸಮೀಪದ ಬರಿಮಾರ್‌ ನಿವಾಸಿ ಡಾ| ಪೃಥ್ವಿನಾರಾಯಣ ಪಿ. ಅವರು ಪಾಲಕ್ಕಾಡ್‌ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕ. ಇಸ್ರೇಲ್‌ನಲ್ಲಿದ್ದ ಸಂದರ್ಭ ಪುತ್ತೂರಿನ ಕರ್ಣಾಟಕ ಬ್ಯಾಂಕ್‌ನಲ್ಲಿ ಎನ್‌ಆರ್‌ಐ ಖಾತೆ ತೆರೆದಿದ್ದರು. ಇದರ ಮೂಲಕ ಹರಿಯಾಣದ ಕರೂರ್‌ ವೈಶ್ಯ ಬ್ಯಾಂಕ್‌ನ ಸೋನೆಪತ್‌ ಶಾಖೆಯಲ್ಲಿರುವ ಪತ್ನಿ ಕುಸುಮ್‌ ಅವರ ಖಾತೆಗೆ 3 ಲಕ್ಷ ರೂ.ಗಳನ್ನು ಜು. 27ರಂದು ವರ್ಗಾವಣೆ ಮಾಡಿದ್ದರು. ಮೂರು ದಿನವಾದರೂ ಹಣ ಬಾರದ್ದನ್ನು ಗಮನಿಸಿದ ಕುಸುಮ್‌, ಪತಿಗೆ ವಿಷಯ ತಿಳಿಸಿದ್ದರು. ಪರಿಶೀಲಿಸಿದಾಗ ಹಣ ಕಣ್ತಪ್ಪಿನಿಂದ ಹರಿಯಾಣದ ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ನ ಬಿವಾನಿ ಶಾಖೆಯ ಕುಸುಮ್‌ ಎಂಬವರ ಖಾತೆಗೆ ವರ್ಗಾವಣೆಗೊಂಡಿತ್ತು. ಈರ್ವರ ಹೆಸರು ಒಂದೇ ಆಗಿರುವುದು ಸಮಸ್ಯೆಗೆ ಕಾರಣವಾಗಿತ್ತು.

ತತ್‌ಕ್ಷಣ ಬಿವಾನಿ ಶಾಖಾ ಪ್ರಬಂಧಕರಿಗೆ ವಿಷಯ ತಿಳಿಸಲಾಯಿತು. ಅಷ್ಟರಲ್ಲಿ ಹರಿಯಾಣದ ಕುಸುಮ್‌ಗೂ ವಿಷಯ ತಿಳಿದು, ಆಕೆ ಹಣ ತನ್ನದೆಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜು. 31ರಂದು ಪುತ್ತೂರು ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಮಧ್ಯಾಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಟಾಪ್ ನ್ಯೂಸ್

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.