ಭಾರತ ಕ್ರಿಕೆಟಿಗರ ಔತಣಕೂಟದಲ್ಲಿ ಅನುಷ್ಕಾ: ವಿವಾದ
Team Udayavani, Aug 9, 2018, 6:45 AM IST
ಲಂಡನ್: ಪತ್ನಿ ಅನುಷ್ಕಾ ಶರ್ಮರನ್ನು ಹೋದಲ್ಲೆಲ್ಲ ಜೊತೆಗೊಯ್ಯುವ ಚಾಳಿಯಿಂದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಗಾಗ ಟೀಕೆಗೊಳಗಾಗುತ್ತಾರೆ. ಇದೀಗ ಅನುಷ್ಕಾ ಮತ್ತೂಂದು ವಿವಾದಕ್ಕೆ ಸಿಲುಕಿದ್ದಾರೆ.
ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮಂಗಳವಾರ ಔತಣಕೂಟ ನೀಡಿದೆ. ಇದು ಭಾರತೀಯ ತಂಡಕ್ಕೆ ಮಾತ್ರ ನೀಡುವ ಔತಣ. ಆದರೆ ಇದರಲ್ಲಿ ಅನುಷ್ಕಾ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಿಸಿಸಿಐ ಪ್ರಕಟಿಸಿದ ಸಾಮೂಹಿಕ ಚಿತ್ರದಲ್ಲೂ ಅವರಿದ್ದರು. ಇದು ಅಭಿಮಾನಿಗಳನ್ನು ಕೆರಳಿಸಿದೆ. ಅನುಷ್ಕಾ ಭಾರತ ಕ್ರಿಕೆಟ್ ತಂಡದ ಪರ ಆಡ್ತಾರಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ತಂಡದ ಉಳಿದ ಯಾವುದೇ ಆಟಗಾರನ ಪತ್ನಿಯೂ ಇಲ್ಲದಿರುವಾಗ ಅನುಷ್ಕಾಗೊಂದು ಮಾತ್ರ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವುದು ಇಲ್ಲಿನ ಪ್ರಶ್ನೆ. ಈ ರೀತಿಯ ಕೂಟದಲ್ಲಿ ಕ್ರಿಕೆಟೇತರರಿಗೆ ಅವಕಾಶವೂ ಇರುವುದಿಲ್ಲ. ಆ ಶಿಷ್ಟಾಚಾರ ಮೀರಿದ ಬಗ್ಗೆಯೂ ಪ್ರಶ್ನೆಗಳೆದ್ದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್