ತುಳುವಿನಲ್ಲಿ ಖಡಕ್ ಡೈಲಾಗ್ ಹೇಳಿದ ಕಿಂಗ್!
Team Udayavani, Aug 16, 2018, 1:13 PM IST
ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ರಮಾನಂದ್ ನಾಯಕ್ ಜೋಡುರಸ್ತೆ (ರಾಮ್ ಜೊ) ಅವರ “ಗೋಲ್ಮಾಲ್’ ಚಿತ್ರದ ಫಸ್ಟ್ಲುಕ್ ಇತ್ತೀಚೆಗೆ ರಿಲೀಸ್ ಆಗಿದೆ. ತುಳುನಾಡಿನ ಜನರ ಅಭಿರುಚಿಗೆ ತಕ್ಕಂತೆ ಚಿತ್ರ ರೆಡಿಯಾಗಿದೆ. ಚಿತ್ರದಲ್ಲಿ ಹಾಸ್ಯ ದಿಗ್ಗಜರ ಸಮಾಗಮವೇ ಇರಲಿದೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ, ಉಮೇಶ್ ಮಿಜಾರ್, ಸುನೀಲ್ ನೆಲ್ಲಿಗುಡ್ಡೆ, ಸುಂದರ್ ರೈ ಮಂದಾರ, ವಸಂತ ಮುನಿಯಾಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹೀಗೆ ಹಾಸ್ಯ ಚಕ್ರವರ್ತಿಗಳ ಮೂಲಕವೇ ಗೋಲ್ ಮಾಲ್ ಸಿದ್ಧಗೊಂಡಿದೆ. ವಿಶೇಷವೆಂದರೆ, ಖಡಕ್ ಪಂಚಿಂಗ್ ಡೈಲಾಗ್ ಮೂಲಕ ಸಿನಿರಸಿಕರ ಮನ ಗೆದ್ದಿರುವ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಈ ಚಿತ್ರದಲ್ಲಿ ಪೊಲೀಸ್ ಗೆಟಪ್ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ, ಅವರದು ಪೊಲೀಸ್ ಐಜಿ ಪಾತ್ರ. ಇಲ್ಲೂ ಖಡಕ್ ಡೈಲಾಗ್ ಇರಲಿದೆ. ಮತ್ತೊಂದು ವಿಶೇಷವೆಂದರೆ ತುಳುವಿನಲ್ಲಿ ಸಾಯಿಕುಮಾರ್ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’