ಮಿಲ್ಖಾ ಬದಲಿಗೆ ಫರ್ಹಾನ್!
Team Udayavani, Aug 20, 2018, 6:00 AM IST
ಮುಂಬೈ: ಅಥ್ಲೆಟಿಕ್ಸ್ನ ದಂತಕತೆ ಮಿಲ್ಖಾ ಸಿಂಗ್ ಅವರ ಕುರಿತ ಪಠ್ಯದಲ್ಲಿ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರ ಫೊಟೋ ಮುದ್ರಿಸಿ ಪಶ್ಚಿಮ ಬಂಗಾಳ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಮಿಲ್ಖಾ ಸಿಂಗ್ ಅವರ ಯಶೋಗಾಥೆಯ ಕುರಿತ ಭಾಗ್ ಮಿಲ್ಖಾ ಭಾಗ್ ಚಿತ್ರದಲ್ಲಿ ಫರ್ಹಾನ್ ಅಖ್ತರ್ ಅಭಿನಯಿಸಿದ್ದರು. ಆ ಚಿತ್ರ ಹಿಟ್ ಆಗಿ ಮಿಲ್ಖಾ ವೇಷದ ಫರ್ಹಾನ್ ಫೊಟೋ ಭಾರೀ ಜನಪ್ರಿಯವಾಗಿತ್ತು.
ಬಂಗಾಳದಲ್ಲಿ ಶಾಲಾ ಮಕ್ಕಳ ಪಠ್ಯಪುಸ್ತಕ ರಚನೆಯ ವೇಳೆ ಮಿಲ್ಖಾ ಅವರ ಚಿತ್ರದ ಬದಲಾಗಿ ಗೂಗಲ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಣಸಿಗುವ ಭಾಗ್ ಮಿಲ್ಖಾ ಭಾಗ್ನ ಸ್ಟಿಲ್ ಅನ್ನು ತಪ್ಪಾಗಿ ಬಳಸಲಾಗಿದೆ. ಸರ್ಕಾರದ ಈ ಎಡವಟ್ಟು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸ್ವತಃ ನಟ ಫರ್ಹಾನ್ ಅವರೇ, ಎದ್ದುಕಾಣುವ ಈ ಲೋಪವನ್ನು ಸರಿಪಡಿಸುವಂತೆ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.