ಕಬಡ್ಡಿಗೆ ರೆಡಿಯಾಗಿದೆ ಕೋಸ್ಟಲ್‌ವುಡ್‌!

Team Udayavani, Aug 30, 2018, 12:05 PM IST

30-agust-10.jpg

ಕೆಮರಾ, ರೋಲಿಂಗ್‌, ಆ್ಯಕ್ಷನ್‌ ಎನ್ನುತ್ತ ಸಿನೆಮಾದಲ್ಲೇ ಬ್ಯುಸಿಯಾಗಿದ್ದ ತುಳು ಸಿನೆಮಾ ಕಲಾವಿದರು ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಒಂದಿಷ್ಟು ಕೂಲ್‌ ಆಗಲು ಕಬಡ್ಡಿ ಆಡಲು ರೆಡಿಯಾಗಿದ್ದಾರೆ. ತುಳು ಕಲಾವಿದರನ್ನು ಜತೆಯಾಗಿಸಿಕೊಂಡು ಮಂಗಳೂರಿನಲ್ಲಿಯೇ ಕಬಡ್ಡಿ ಆಡುವ ಪ್ಲ್ಯಾನ್‌ ಮಾಡಲಾಗಿದೆ. ಈಗಾಗಲೇ ಮಂಗಳೂರಿನಲ್ಲಿ ತುಳು ಚಲನಚಿತ್ರ ಕಲಾವಿದರಿಗಾಗಿ ಕ್ರಿಕೆಟ್‌ ಪಂದ್ಯ ನಡೆದಿತ್ತು. ಕೆಲವು ಟೀಮ್‌ ಮಾಡಿ ನೆಹರೂ ಮೈದಾನದಲ್ಲಿ ಕ್ರಿಕೆಟ್‌ ಆಯೋಜಿಸಲಾಗಿತ್ತು. ಜತೆಗೆ ಕೆಸರಿನಲ್ಲಿಯೂ ಕೆಲವು ಕ್ರೀಡಾಕೂಟಗಳು ನಡೆದಿತ್ತು. ಆದರೆ, ಈ ಬಾರಿ ಕಬಡ್ಡಿ ಪಂದ್ಯಾಟಕ್ಕೆ ಕೋಸ್ಟಲ್‌ವುಡ್‌ನ‌ಲ್ಲಿ ಸಿದ್ಧತೆ ನಡೆಸಲಾಗಿದೆ. ರಾಜೇಶ್‌ ಬ್ರಹ್ಮಾವರ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳ ಸಹಯೋಗ ದೊಂದಿಗೆ ಕಬಡ್ಡಿ ಆಯೋಜಿಸಲಾಗಿದೆ.

ಹೀರೋ/ ಹೀರೋಯಿನ್‌ ಎಂಬಂತೆ ಎರಡು ಪ್ರತ್ಯೇಕ ವಿಭಾಗದಲ್ಲಿ ತಂಡಗಳ ಆಯ್ಕೆ ಈಗಾಗಲೇ ನಡೆದಿದೆ. ಕೋಸ್ಟಲ್‌ವುಡ್‌ನ‌ ಖ್ಯಾತ ಕಲಾವಿದರಾದ ಅರ್ಜುನ್‌ ಕಾಪಿಕಾಡ್‌, ಸೌರಭ್‌ ಭಂಡಾರಿ, ಉದಯ್‌ ಪೂಜಾರಿ, ಪೃಥ್ವಿ ಅಂಬರ್‌, ರೂಪೇಶ್‌ ಶೆಟ್ಟಿ, ಸಂದೀಪ್‌ ಭಕ್ತ, ಅನೂಪ್‌ ಸಾಗರ್‌, ಪ್ರತೀಕ್‌ ಶೆಟ್ಟಿ, ವೀರೇಂದ್ರ ಶೆಟ್ಟಿ ನೇತೃತ್ವದಲ್ಲಿ ತಂಡಗಳು ಸಿದ್ಧವಾಗಿದೆ. ಜತೆಗೆ ಶ್ರೇಯಾ ಅಂಚನ್‌, ಕರಿಷ್ಮಾ ಅಮೀನ್‌, ಪೂಜಾ ಶೆಟ್ಟಿ, ರೇಶ್ಮಾ ಶೆಟ್ಟಿ, ಲಲಿತಾಶ್ರೀ ಹಾಗೂ ಅನ್ವಿತಾ ಸಾಗರ್‌ ನೇತೃತ್ವದಲ್ಲಿ ಹೀರೋಯಿನ್‌ ಟೀಮ್‌ ಸಿದ್ಧಗೊಂಡಿದೆ. ಹೆಚ್ಚಾ ಕಡಿಮೆ ಅಕ್ಟೋಬರ್‌ 6 ಹಾಗೂ 7ರಂದು ಮಂಗಳೂರು ನೆಹರೂ ಮೈದಾನ ಅಥವಾ ಇತರ ಭಾಗದಲ್ಲಿ ಈ ಸ್ಪರ್ಧೆ ಆಯೋಜನೆಗೆ ಉದ್ದೇಶಿಸಲಾಗಿದೆ.

ಮಂಗಳೂರಿನ ಓಶಿಯನ್‌ ಪರ್ಲ್ ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಮಂಗಳೂರು ಹಾಗೂ ಬೆಂಗಳೂರಿನ ಉದ್ಯಮಿಗಳು ತಂಡಗಳನ್ನು ಖರೀದಿ ನಡೆಸಿದ್ದಾರೆ. ಆ ಬಳಿಕ ಕಲಾವಿದರು ಅರ್ಥಾತ್‌ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಒಂದೊಂದು ತಂಡದಲ್ಲಿ ಕಲಾವಿದರ ಜತೆಗೆ, ನಾಲ್ಕು ಜನ ಕಬಡ್ಡಿ ಆಟಗಾರರನ್ನೇ ಬಳಸಲಾಗುತ್ತದೆ. ಅದರಲ್ಲೂ ಅವರು ಕಾಲೇಜು ಹುಡುಗರಾಗಿರುತ್ತಾರೆ. ಇದಕ್ಕಾಗಿ ಕರಾವಳಿಯ 13 ಕಾಲೇಜಿನ ಕಬಡ್ಡಿ ಆಟಗಾರರನ್ನು ಕರೆಸಲಾಗಿದೆ.

ತುಳುವಿನಲ್ಲಿ ಸೆಲೆಬ್ರಿಟಿ ಕಬಡ್ಡಿ ಹೊಸ ಕಾನ್ಸೆಪ್ಟ್. ಚಲನಚಿತ್ರ ಕಲಾವಿದರು ಹಾಗೂ ತಂತ್ರಜ್ಞರಿಗೆ ದುಡಿಮೆಯ ಜತೆಗೆ ಒಂದಷ್ಟು ಮನರಂಜನೆ ಸಿಗಬೇಕು ಎನ್ನುವ ಉದ್ದೇಶದಿಂದ ಕಬಡ್ಡಿ ಆಯೋಜಿಸಲಾಗಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಆಯಾಯ ಕಲಾವಿದರಿಗೆ ಬೇರೆ ಬೇರೆ ರೀತಿಯ ಆಟೋಟ ಸ್ಪರ್ಧೆಗಳನ್ನು ಅಥವಾ ಇತರ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಂತಹ ಪ್ರಕ್ರಿಯೆ ಕೋಸ್ಟಲ್‌ ವುಡ್‌ನ‌ಲ್ಲೂ ಜಾರಿಯಾಗಬೇಕು ಎಂಬ ನೆಲೆಯಿಂದ ಈಗ ಈ ಬಾರಿ ಕಬಡ್ಡಿ ಆಯೋಜಿಸಲಾಗಿದೆ. ಕೋಸ್ಟಲ್‌ ವುಡ್‌ ಕಲಾವಿದರನ್ನು ಇದರಲ್ಲಿ ಜೋಡಿಸುವ ಮೂಲಕ ಹೊಸತನ ಮೂಡುವಂತೆ ಮಾಡುವಲ್ಲಿ ಇದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ರಾಜೇಶ್‌ ಬ್ರಹ್ಮಾವರ. 

ದಿನೇಶ್‌ ಇರಾ

ಟಾಪ್ ನ್ಯೂಸ್

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.