ಪ್ರಚಾರಕ್ಕೆ ಕುಟುಂಬ ಸದಸ್ಯರ ಸಾಥ್‌


Team Udayavani, Aug 30, 2018, 4:20 PM IST

30-agust-21.jpg

ಹಾವೇರಿ: ನಗರಸಭೆ ಚುನಾವಣೆ ಬಹಿರಂಗ ಪ್ರಚಾರ ಕೊನೆಗೊಂಡ ಹಿನ್ನೆಲೆಯಲ್ಲಿ ಬುಧವಾರ ಅಭ್ಯರ್ಥಿಗಳು, ತಮ್ಮ ನಾಯಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮನೆ ಮನೆ ಭೇಟಿ ನೀಡಿ ಮತಯಾಚಿಸಿದರು. ಮನೆಮನೆ ಭೇಟಿ ಪ್ರಚಾರ ಎಲ್ಲೆಡೆ ನಡೆದಿದ್ದರಿಂದ ನಗರದ ಎಲ್ಲ 31 ವಾರ್ಡ್‌ಗಳಲ್ಲಿ ಜನಸಂಚಾರ, ಜನದಟ್ಟಣೆ ಹೆಚ್ಚಾಗಿತ್ತು. ಎಲ್ಲೆಡೆ ಮತಯಾಚನೆಯ ದೃಶ್ಯ ಕಂಡು ಬಂದಿತು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಮುಖಂಡರು, ಕಾರ್ಯಕರ್ತರೊಂದಿಗೆ ಮನೆ ಮನೆ ಮತಯಾಚಿಸಿದರೆ, ಮತ್ತೆ ಕೆಲ ಪಕ್ಷೇತರರು ವಿವಿಧ ಜಾತಿ, ಸಮುದಾಯಗಳ ನಾಯಕರನ್ನು ಕರೆಸಿ ಅವರೊಂದಿಗೆ ಮತಯಾಚಿಸಿದರು.

ಕೆಲ ಅಭ್ಯರ್ಥಿಗಳಂತೂ ತಮ್ಮ ಮನೆಯ ಎಲ್ಲ ಸದಸ್ಯರನ್ನು ಮತಯಾಚನೆಗೆ ಬಳಸಿಕೊಂಡಿದ್ದು ಕಂಡು ಬಂದಿತು. ಹೆಂಡತಿ, ಮಕ್ಕಳು, ಸಹೋದರ, ಸಹೋದರಿಯರು, ಅತ್ತಿಗೆ, ನಾದಿನಿ ಎಲ್ಲರೂ ತಮ್ಮ ಸಂಬಂಧಿ  ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮತದಾರರಲ್ಲಿ ತಮ್ಮದೇ ಆದ ಆತ್ಮೀಯ ಶೈಲಿಯಲ್ಲಿ ಕೋರಿದರು.

ಅಭ್ಯರ್ಥಿಗಳು ಮುಂಜಾನೆ ಏಳು ಗಂಟೆಯಿಂದಲೇ ಮನೆ ಮನೆಗೆ ಹೋಗಿ ಮತದಾರರನ್ನು ಭೇಟಿಯಾಗಿ ಮತಯಾಚಿಸಿದರು. ರಾತ್ರಿ 9ಗಂಟೆವರೆಗೂ ಮನೆ ಭೇಟಿ ನೀಡಿದರು. ಕೆಲ ವಾರ್ಡ್‌ಗಳಲ್ಲಿ ರಾಜಕೀಯ ಪಕ್ಷಗಳು, ಕೆಲ ಪಕ್ಷೇತರ ಅಭ್ಯರ್ಥಿಗಳು ಈ ಸ್ಪರ್ಧೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಮತದಾರರಿಗೆ ಹಣದ ಆಮಿಷಯೊಡ್ಡಲು ಸಹ ಮುಂದಾಗಿದ್ದಾರೆ.

ಮಳೆ ಸಹಕಾರ: ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದು ಇಡೀ ದಿನ ಬಿಸಿಲು ಬೀಳುತ್ತಿರುವುದರಿಂದ ಮತ ಪ್ರಚಾರಕ್ಕೆ ಮಳೆರಾಯ ಭಾರಿ ಅನುಕೂಲ ಮಾಡಿಕೊಟ್ಟಂತಾಗಿದೆ. ಆದರೆ, ಈ ಹಿಂದೆ ಸುರಿದ ಮಳೆಯಿಂದ ಕೆಸರುಗದ್ದೆಯಂತಾದ ರಸ್ತೆಗಳು ನಗರಸಭೆ ಅಭ್ಯರ್ಥಿಗಳನ್ನು ಅಣಕಿಸುತ್ತಿದ್ದು ಹೊಸ ಅಭ್ಯರ್ಥಿಗಳು ಇಂಥ ರಸ್ತೆಗಳಿಗೆ ಕಾಯಕಲ್ಪ ಮಾಡುವುದಾಗಿ ಭರವಸೆ ನೀಡಿದರೆ, ಈ ಹಿಂದೆ ಸದಸ್ಯರಾಗಿ ಈ ಬಾರಿ ಮತ್ತೆ ಅಭ್ಯರ್ಥಿಗಳಾದವರು ಈ ರಸ್ತೆ ಅಭಿವೃದ್ಧಿ ಪಟ್ಟಿಯಲ್ಲಿ ಸೇರಿಕೊಂಡಿದ್ದು ಶೀಘ್ರದಲ್ಲಿಯೇ ಸರಿಪಡಿಸಲಾಗುತ್ತದೆ ಎಂಬ ಪೊಳ್ಳು ಭರವಸೆ ನೀಡುತ್ತ ಮುಜುಗರದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು.

ಬಾರ್‌, ಹೋಟೆಲ್‌ಗ‌ಳಿಗೆ ಶುಕ್ರದೆಸೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಆರಂಭವಾದಾಗಿನಿಂದ ಹೋಟೆಲ್‌ಗ‌ಳಲ್ಲಿ ಕಾರ್ಯಕರ್ತರಿಗೆ ಅಭ್ಯರ್ಥಿಗಳಿಂದ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗುತ್ತಿದ್ದು, ಹೊಟೆಲ್‌ ಗಳಿಗೆ ಶುಕ್ರದೆಸೆ ಶುರುವಾಗಿದೆ. ರಾತ್ರಿ 8 ಗಂಟೆ ಆಗುತ್ತಿದ್ದಂತೆ ಬಾರ್‌ ಮತ್ತು ಹೊಟೆಲ್‌ಗ‌ಳು ಹೌಸ್‌ಫುಲ್‌. ಅಭ್ಯರ್ಥಿಗಳಿಂದ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಮದ್ಯ, ಊಟದ ವ್ಯವಸ್ಥೆ ಮಾಡುವುದು ಮಾಮೂಲು ಆಗಿದೆ.

ಪತ್ನಿ ಪರ ಪತಿ ಪ್ರಚಾರ 
ಇನ್ನು ಸ್ಪರ್ಧೆಯಲ್ಲಿ ಶೇ. 50ರಷ್ಟು ಮಹಿಳಾ ಮೀಸಲಾತಿ ಇರುವುದರಿಂದ ಅನೇಕ ಮಹಿಳಾ ಅಭ್ಯರ್ಥಿಗಳ ಪರವಾಗಿ ಅವರ ಪತಿ, ಸಹೋದರರು, ಸಂಬಂಧಿ ಕರೇ ಮತಯಾಚನೆಗೆ ತೊಡಗಿದರು. ಕೆಲ ಪತಿ ಮಹಾಶಯರಂತೂ ತಮ್ಮನ್ನು ನೋಡಿಯೇ ಮತ ಹಾಕಿ. ಮುಂದೆ ತಾವೇ ಪತ್ನಿಯ ಪರವಾಗಿ ಅಧಿಕಾರ ಚಲಾಯಿಸುವವರು ಎನ್ನುವ ರೀತಿಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ವರಸೆ ಪ್ರಯೋಗಿಸುತ್ತಿರುವ ದೃಶ್ಯ ಹಲವೆಡೆ ಕಂಡು ಬಂದಿತು. 

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.