ವನಿತಾ ಸ್ಕ್ವಾಷ್‌: ಫೈನಲ್‌ಗೆ ನೆಗೆದ ಭಾರತ


Team Udayavani, Sep 1, 2018, 6:00 AM IST

z-25.jpg

ಜಕಾರ್ತಾ: ಹಾಲಿ ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಮಲೇಶ್ಯಕ್ಕೆ 2-0 ಆಘಾತವಿಕ್ಕಿದ ಭಾರತದ ವನಿತಾ ತಂಡ ಫೈನಲ್‌ಗೆ ಲಗ್ಗೆ ಇರಿಸಿದೆ. ಈ ಮೂಲಕ ಜೋಶ್ನಾ ಚಿನ್ನಪ್ಪ, ದೀಪಿಕಾ ಪಳ್ಳಿಕಲ್‌ ಕಾರ್ತಿಕ್‌, ಸುನಯನಾ ಕುರುವಿಲ್ಲ ಮತ್ತು ತನ್ವಿ ಖನ್ನಾ ಅವರನ್ನೊಳಗೊಂಡ ಸ್ಕ್ವಾಷ್‌ ತಂಡ ದೊಡ್ಡ ಪದಕವೊಂದನ್ನು ಖಾತ್ರಿಗೊಳಿಸಿದೆ. 

ಶುಕ್ರವಾರ ಮಲೇಶ್ಯ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದ ವಿಶೇಷವೆಂದರೆ, ವಿಶ್ವದ 16ನೇ ರ್‍ಯಾಂಕಿಂಗ್‌ ಆಟಗಾರ್ತಿ ಜೋಶ್ನಾ ಚಿನ್ನಪ್ಪ 8 ಬಾರಿಯ ವಿಶ್ವ ಚಾಂಪಿಯನ್‌ ನಿಕೋಲ್‌ ಡೇವಿಡ್‌ ಅವರಿಗೆ ಸೋಲುಣಿಸಿದ್ದು. ಹಾಂಕಾಂಗ್‌ ವಿರುದ್ಧದ ಅಂತಿಮ ಲೀಗ್‌ ಪಂದ್ಯದಲ್ಲಿ ಆ್ಯನಿ ಯು ವಿರುದ್ಧ ಆಘಾತಕಾರಿ ಸೋಲುಂಡಿದ್ದ ಜೋಶ್ನಾ, ಶುಕ್ರವಾರದ ದೊಡ್ಡ ಬೇಟೆಯೊಂದಿಗೆ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರು. ಹಾಂಕಾಂಗ್‌ ಎದುರಿನ ಪಂದ್ಯವನ್ನು ಭಾರತ 1-2ರಿಂದ ಕಳೆದುಕೊಂಡಿತ್ತು. ಹೀಗಾಗಿ ಗ್ರೂಪ್‌ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿ ಬಲಾಡ್ಯ ಮಲೇಶ್ಯ ವಿರುದ್ಧ ಆಡುವ ಅವಕಾಶ ಪಡೆದಿತ್ತು.

5 ಸಲ ಏಶ್ಯನ್‌ ಗೇಮ್ಸ್‌ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಿಕೋಲ್‌ ಡೇವಿಡ್‌ ಅವರನ್ನು ಜೋಶ್ನಾ ಚಿನ್ನಪ್ಪ 12-10, 11-9, 6-11, 10-12, 11-9 ಅಂತರದಿಂದ ಮಣಿಸಿದರು. ಬಳಿಕ ಅವರಿಂದ ಶಾಭಾಸ್‌ಗಿರಿಯನ್ನೂ ಪಡೆದರು. “ಜೋಶ್ನಾ ನಿಜಕ್ಕೂ ಅಮೋಘ ಪ್ರದರ್ಶನ ನೀಡಿದರು. ಇದೊಂದು ಅತ್ಯುತ್ತಮ ಪಂದ್ಯವಾಗಿತ್ತು. ಆದರೆ ನನ್ನಿಂದ ಎ ದರ್ಜೆಯ ಪಂದ್ಯವನ್ನು ಆಡಲಾಗಲಿಲ್ಲ’ ಎಂದು ನಿಕೋಲ್‌ ಡೇವಿಡ್‌ ಹೇಳಿದರು.

ಇನ್ನೊಂದು ಪಂದ್ಯದಲ್ಲಿ ವಿಶ್ವದ 19ನೇ ರ್‍ಯಾಂಕಿಂಗ್‌ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ವಿಶ್ವದ ಮಾಜಿ ನಂ.5 ಆಟಕಾರ್ತಿ ಲೋ ವೀ ವೆರ್ನ್ ವಿರುದ್ಧ 11-2, 11-9, 11-7 ನೇರ ಗೇಮ್‌ಗಳ ಜಯ ಸಾಧಿಸಿದರು. ಹಿಂದಿನ ಪಂದ್ಯದಲ್ಲಿ ಹಾಂಕಾಂಗ್‌ನ ಜೋಯ್‌ ಚಾನ್‌ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗಿದ್ದ ದೀಪಿಕಾ, ವೀ ವೆರ್ನ್ ವಿರುದ್ಧ ತಮ್ಮ ಸಾಮರ್ಥ್ಯವನ್ನೆಲ್ಲ ತೆರೆದಿಟ್ಟರು. 

 ಇಂದು ಹಾಂಕಾಂಗ್‌ ಎದುರಾಳಿ
ಭಾರತ ಶನಿವಾರದ ಫೈನಲ್‌ನಲ್ಲಿ ಮತ್ತೆ ಹಾಂಕಾಂಗ್‌ ವಿರುದ್ಧ ಆಡಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅದು ಜಪಾನ್‌ ವಿರುದ್ಧ 2-0 ಜಯ ಸಾಧಿಸಿತು. 

“ಹಾಂಕಾಂಗ್‌ ಮಲೇಶ್ಯದಷ್ಟೇ ಕಠಿನ ಎದುರಾಳಿ. ಅದು ಬಲಿಷ್ಠ ಆಟಗಾರರನ್ನು ಹೊಂದಿದೆ. ಸೋಲಿಸುವುದು ಬಹಳ ಕಷ್ಟ. ಆದರೆ ನಾವು ತುಂಬು ಆತ್ಮವಿಶ್ವಾಸದಲ್ಲಿದ್ದೇವೆ’ ಎಂದಿದ್ದಾರೆ ದೀಪಿಕಾ. ಭಾರತ ಕಳೆದ ಏಶ್ಯಾಡ್‌ನ‌ಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಇದು ವನಿತಾ ಸ್ಕ್ವಾಷ್‌ ತಂಡದ ಅತ್ಯುತ್ತಮ ಸಾಧನೆಯಾಗಿದೆ.

ಪುರುಷರಿಗೆ ಕಂಚಿನ ಪದಕ
ಕಳೆದ ಬಾರಿಯ ಚಾಂಪಿಯನ್‌ ಆಗಿರುವ ಭಾರತದ ಪುರುಷರ ಸ್ಕ್ವಾಷ್‌ ತಂಡ ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಶುಕ್ರವಾರದ ಸೆಮಿಫೈನಲ್‌ನಲ್ಲಿ ಹಾಂಕಾಂಗ್‌ ವಿರುದ್ಧ ಭಾರತ 0-2 ಅಂತರದ ಸೋಲನುಭವಿಸಿ ತೃತೀಯ ಸ್ಥಾನಿಯಾಯಿತು. 

ಭಾರತ ತಂಡ ಸೌರವ್‌ ಘೋಷಾಲ್‌, ಹರೀಂದರ್‌ ಪಾಲ್‌ ಸಿಂಗ್‌ ಸಂಧು, ರಮಿತ್‌ ಟಂಡನ್‌ ಮತ್ತು ಮಹೇಶ್‌ ಮಂಗಾಂವ್ಕರ್‌ ಅವರನ್ನೊಳಗೊಂಡಿತ್ತು. ಸೆಮಿಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಘೋಷಾಲ್‌ ಮತ್ತು ಸಂಧು ಸೋಲನುಭವಿಸಿದರು.

ವೀ ವೆರ್ನ್ ಓರ್ವ ಅಗ್ರಮಾನ್ಯ ಆಟಗಾರ್ತಿ. ಹೀಗಾಗಿ ನನ್ನ ಸಾಮರ್ಥ್ಯವನ್ನೆಲ್ಲ ಪಣಕ್ಕಿಡ ಬೇಕಿತ್ತು. ಇದರಲ್ಲಿ ನಾನು ಯಶಸ್ವಿಯಾದೆ. 
ದೀಪಿಕಾ ಪಳ್ಳಿಕಲ್‌

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.