ಭತ್ತದ ಬೆಳೆಗೆ ದುಂಡಾಣು ರೋಗ: ರೈತರಲ್ಲಿ ಆತಂಕ

Team Udayavani, Sep 10, 2018, 5:10 PM IST

secptember-22.jpg

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿ ಕಾರ್ಯವು ಪೂರ್ಣಗೊಂಡಿದ್ದು, ಭತ್ತದ ಬೆಳೆ 45 ರಿಂದ 60 ದಿನದ ಬೆಳವಣಿಗೆ ಹಂತದಲ್ಲಿದೆ. ಈ ಹಂತದಲ್ಲಿ ಭತ್ತಕ್ಕೆ ಸಾಮಾನ್ಯವಾಗಿ ದುಂಡಾಣು ಅಂಗಮಾರಿ ರೋಗ ಮತ್ತು ಕಂದು ಜಿಗಿಹುಳು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಆತಂಕದಲ್ಲಿದ್ದಾರೆ.

ದುಂಡಾಣು ಅಂಗಮಾರಿ ರೋಗವು ಸಾಮಾನ್ಯವಾಗಿ ಭತ್ತದ ಎಲೆಗಳ ಅಂಚು ಮತ್ತು ತುದಿಗಳಲ್ಲಿ ಕಂಡುಬರುತ್ತದೆ. ಮೊದಲು ರೋಗವು ಹಳದಿ ಬಣ್ಣದ ಮಚ್ಚೆಯಂತೆ ಇರುತ್ತದೆ. ಎಲೆಯ ತುದಿಯಿಂದ ಬುಡದ ಕಡೆಗೆ ಪಸರಿಸುತ್ತದೆ. ಕೊನೆಗೆ ಎಲೆಯು ಸಂಪೂರ್ಣ ವಾಗಿ ಒಣಗಿ ಬೆಳೆಯು ನಾಶ ವಾಗುತ್ತದೆ. ಮೋಡ ಕವಿದ ವಾತಾವರಣ ಇರುವುದರಿಂದ ದುಂಡಾಣು ರೋಗ ತೀವ್ರವಾಗಿ ಹರಡಿ ಅತೀ ವೇಗವಾಗಿ ಗದ್ದೆಯಿಂದ ಗದ್ದೆಗೆ ಹರಡುತ್ತದೆ.

ಕೃಷಿ ವಿಜ್ಞಾನಿಗಳ ಸಲಹೆ ಪಡೆಯದೇ ಅತೀಯಾದ ರಸಗೊಬ್ಬರ ಮತ್ತು ನೀರಿನ ಬಳಕೆಯಿಂದಾಗಿ ದುಂಡಾಣು ರೋಗ ಹರಡುತ್ತದೆ. ಭತ್ತದ ಕಾಂಡ ಅತೀಯಾದ ಸಿಹಿಯಿಂದ ಕೂಡಿರುವುದರಿದ ರೋಗಾಣುಗಳು ತಿನ್ನಲು ಅನುಕೂಲವಾಗಿರುವ ಕಾರಣ ಅಂಗಮಾರಿ ಅಥವಾ ದುಂಡಾಣು ಹರಡುತ್ತದೆ. ಭತ್ತದ ಬೆಳೆಗೆ ವೈಜ್ಞಾನಿಕವಾಗಿ ನೀರು ಮತ್ತು ಗೊಬ್ಬರ ನಿರ್ವಹಣೆ ಮಾಡಬೇಕು. ಇದರಿಂದ ಹಣ ಮತ್ತು ನೀರಿನ ಮಿತ ಬಳಕೆಯಾಗುತ್ತದೆ. ಶ್ರಮವೂ ಕಡಿಮೆಯಾಗುತ್ತದೆ.

ದುಂಡಾಣು ಕಂದು ಜಿಗಿ ರೋಗದ ಲಕ್ಷಣಗಳು: ಪ್ರೌಢ ಮತ್ತು ಮರಿ ಹುಳುಗಳು ಕಾಂಡವನ್ನು ನೀರಿನ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಅಧಿ ಕ ಸಂಖ್ಯೆಯಲ್ಲಿ ಆವರಿಸಿ ರಸವನ್ನು ಹೀರುವುದರಿಂದ ಪೈರಿನ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಅಲ್ಲಲ್ಲಿ ಸುಟ್ಟಂತೆ ಕಂಡು ಬೆಳೆಯೇ ನಾಶವಾಗುತ್ತದೆ. ಇದರ ಬಾಧೆಯು ತೆನೆ ಬರುವ ಸಮಯದಲ್ಲಿ ತೀವ್ರವಾಗಿ ಕಂಡುಬರುತ್ತವೆ .

ಅತೀಯಾದ ರಸಗೊಬ್ಬರ ಮತ್ತು ನೀರಿನ ಬಳಕೆಯಿಂದ ಭತ್ತದ ಬೆಳೆಗೆ ದುಂಡಾಣು ರೋಗ ಬರುತ್ತದೆ. ನಿರ್ವಹಣೆಗಾಗಿ ರೋಗದ 0.05 ಗ್ರಾಂ. ಸ್ಟ್ರೆಪೊràಸೈಕ್ಲಿನ್‌ ಮತ್ತು 0.05 ಗ್ರಾಂ. ಮೈಲು ತುತ್ತೆ (ಸಿಒಸಿ) ಯನ್ನು ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆ ಸುಮಾರು 250 ಲೀ. ಸಿಂಪರಣಾ ದ್ರಾವಣ ಬಳಸಬೇಕು. ಪರೋಪಕಾರಿ ಕೀಟಗಳಾದ ಮಿರಿಡ್‌ತಿಗಣೆ, ಜೇಡಗಳ ಸಂಖ್ಯೆ ಜಾಸ್ತಿಯಿದ್ದಾಗ ಕೀಟನಾಶಕಗಳನ್ನು ಬಳಸಬಾರದು. ನೀರು ಹಾಯಿಸುವುದು. ಅವಶ್ಯಕತೆಗಣುಗುಣವಾಗಿ ಶೇ.5ರ ಬೇವಿನ ಕಷಾಯವನ್ನು ಪರ್ಯಾಯ ಸಿಂಪಡಿಸಬೇಕು. ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬಹುದು. 9008709050, 8217440909.
ರಾಘವೇಂದ್ರ ಎಲಿಗಾರ,
ವಿಜ್ಞಾನಿಗಳು (ಕೃಷಿ ಕೀಟಶಾಸ್ತ್ರ),  ಕೃಷಿ ವಿಜ್ಞಾನ ಕೇಂದ್ರ

ಕೆ.ನಿಂಗಜ್ಜ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.