ಸಿಎಸ್ಕೆ ಅಭಿಮಾನಿಯಿಂದ ವಿಶೇಷ ಮದುವೆ ಆಮಂತ್ರಣ
Team Udayavani, Sep 13, 2018, 6:55 AM IST
ಚೆನ್ನೈ: ಮದುವೆಯ ಅಪರೂಪದ ಸವಿ ಕ್ಷಣಗಳನ್ನು ಅಚ್ಚಳಿಯದಂತೆ ಹಿಡಿದಿಡಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿರುತ್ತಾರೆ. ಹಾಗೆಯೇ ಇಲ್ಲೊಬ್ಬ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅಭಿಮಾನಿ ವಿಭಿನ್ನವಾಗಿ ಚಿಂತಿಸಿ ತವರಿನ ಮ್ಯಾಚ್ ಟಿಕೆಟ್ನಂತೆ ತನ್ನ ಮದುವೆ ಆಮಂತ್ರಣ ಪತ್ರವನ್ನು ಮುದ್ರಿಸಿ ಸುದ್ದಿಯಾಗಿದ್ದಾರೆ.
ಹೌದು, ಚೆನ್ನೈನ ಕೆ.ವಿನೋದ್ ಸಿಎಸ್ಕೆ ತಂಡದ ಕಟ್ಟಾಭಿಮಾನಿ. ಅವರು ಸೆ. 11ರಂದು ಸದಾನ ಎಂಬ ಯುವತಿಯ ಜತೆ ಸಪ್ತಪದಿ ತುಳಿದಿದ್ದಾರೆ. ಮದುವೆ ಆಮಂತ್ರಣ ಪತ್ರದಲ್ಲಿ “ಚೆನ್ನೈ ಸೂಪರ್ ಕಿಂಗ್ ವೆಡ್ಸ್ – ಚೆನ್ನೈ ಸೂಪರ್ ಕ್ವೀನ್’ ಎಂದು ಬರೆದು ಅದರ ಮೇಲೆ ಸಿಎಸ್ಕೆ ತಂಡದ ಅಧಿಕೃತ ಲೋಗೊ ಬಳಸಿಕೊಳ್ಳಲಾಗಿದೆ. ಜತೆಗೆ ಚೆನ್ನೈ ತಂಡದ ನಾಯಕ ಧೋನಿಯ ಕಾಟೂìನ್ ಒಂದನ್ನು ಚಿತ್ರಿಸಲಾಗಿದೆ.
ಹಳದಿ ಬಣ್ಣದ ಕಾರ್ಡ್ ಬಳಕೆ ಮಾಡಲಾಗಿದ್ದು ಟ್ವಿಟರ್ನಲ್ಲಿ ಆಮಂತ್ರಣ ಪತ್ರ ವೈರಲ್ ಆಗಿದೆ. ಅಭಿಮಾನಿ ಪ್ರೀತಿಯನ್ನು ಸಿಎಸ್ಕೆ ತನ್ನ ಅಧಿಕೃತ ಟ್ವಿಟರ್ನಲ್ಲಿ ಪ್ರಕಟಿಸಿ ಶುಭಾಶಯ ತಿಳಿಸಿದೆ. ವಿನೋದ್ ಹಿಂದೆ ತವರಿನಲ್ಲಿ ನಡೆದ ಪಂದ್ಯದ ವೇಳೆ ಧೋನಿ ಹಸ್ತಾಕ್ಷರವಿದ್ಧ ಚೆನ್ನೈ ಸೂಪರ್ ಫ್ಯಾನ್ ಬ್ಯಾಟ್ ಅನ್ನು ಧೋನಿ ಕೈಯಿಂದಲೇ ಪಡೆದುಕೊಂಡಿದ್ದರು.