ಗಡೀಲಿ ಆಕಾಶವಾಣಿ ಎಫ್ಎಂ ಸ್ಟೇಷನ್
Team Udayavani, Sep 25, 2018, 8:40 AM IST
ಹೊಸದಿಲ್ಲಿ: ಗಡಿಯಲ್ಲಿ ಪಾಕಿಸ್ತಾನ ನಡೆಸುವ ಭಾರತ ವಿರುದ್ಧದ ಪ್ರಚಾರಕ್ಕೆ ಪ್ರತಿಯಾಗಿ ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಗಡಿಯಲ್ಲಿ ಎಫ್ಎಂ ಸ್ಟೇಷನ್ ಆರಂಭಿಸಿದೆ. ಅಮೃತಸರದಲ್ಲಿ ಸ್ಥಾಪಿಸಲಾಗಿರುವ ಈ ಸ್ಟೇಷನ್ನಿಂದ ಪ್ರಸಾರ ವಾಗುವ ಕಾರ್ಯಕ್ರಮಗಳು ಪಾಕ್ ಪ್ರದೇಶದಲ್ಲಿ 50 ಕಿ.ಮೀ. ವರೆಗೂ ಕೇಳಲಿದೆ. ಈ ಸ್ಟೇಷನ್ ಅನ್ನು ಕೇಂದ್ರ ಸಚಿವ ವಿಜಯ್ ಸಂಪ್ಲಾ ಸೋಮವಾರ ಉದ್ಘಾಟಿಸಿದ್ದಾರೆ. ಈ ಕೇಂದ್ರವು ವಿವಿಧ ಸ್ಟೇಷನ್ಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಜಲಂಧರದ ಎಫ್ಎಮ್ ರೇನ್ಬೋ ಕಾರ್ಯಕ್ರಮಗಳು, ಸಾರೈಕಿ ಹಾಗೂ ಉರ್ದು ಭಾಷೆಯ ಕಾರ್ಯಕ್ರಮಗಳನ್ನು ಇದು ಪ್ರಸಾರ ಮಾಡಲಿದೆ. ಮೀಡಿಯಂ ವೇವ್ನಲ್ಲಿ ಪ್ರಸಾರವಾಗುತ್ತಿರುವ ದೇಸ್ ಪಂಜಾಬಿ ಹಾಗೂ ಸಾರೈಕಿ ಭಾಷೆಯ ಕಾರ್ಯಕ್ರಮಗಳು ಈಗಾಗಲೇ ಪಾಕಿಸ್ತಾನದಲ್ಲಿ ಭಾರಿ ಜನಪ್ರಿಯತೆ ಪಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು