ಭಜನೆ ತರಬೇತಿ ಪಡೆದವರ ಜವಾಬ್ದಾರಿ ಹೆಚ್ಚು: ಡಾ|ಡಿ. ವೀರೇಂದ್ರ ಹೆಗ್ಗಡೆ


Team Udayavani, Oct 1, 2018, 11:07 AM IST

bhajane.jpg

ಬೆಳ್ತಂಗಡಿ: ಆಧುನಿಕ ಆಕರ್ಷಣೆಗಳು ಯುವಕರ ಶಕ್ತಿ ಗುಂದಿಸುತ್ತಿದ್ದು, ಭಜನೆಯಲ್ಲಿ ತೊಡಗಿದಾಗ ಅವರಿಗೆ ತಮ್ಮ ಶಕ್ತಿಯ ಅರಿವಾಗುತ್ತದೆ. ಭಜನೆ ತರಬೇತಿ ಪಡೆದ ಯುವಜನಾಂಗಕ್ಕೆ ದುಶ್ಚಟಮುಕ್ತ ಸಮಾಜ ನಿರ್ಮಾಣದ ಜತೆಗೆ ಗ್ರಾಮದ ಅಭಿವೃದ್ಧಿಯ ಜವಾಬ್ದಾರಿಯೂ ಇರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ರವಿವಾರ ಕ್ಷೇತ್ರದ ಅಮೃತ ವರ್ಷಿಣಿ ಸಭಾಭವನದಲ್ಲಿ ಭಜನೋತ್ಸವ ಹಾಗೂ 20ನೇ ವರ್ಷದ ಭಜನ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಜನೆಗೆ ವ್ಯಕ್ತಿತ್ವವನ್ನು ಪರಿವರ್ತಿಸುವ ಶಕ್ತಿಯಿದ್ದು, ಅದು ಆತನ ಶುದ್ಧೀಕರಣವನ್ನೂ ಮಾಡುತ್ತದೆ. ಇದು ಅಪಾರ ವಾದ ಶಕ್ತಿ ಹಾಗೂ ತೇಜಸ್ಸನ್ನೂ ಹೊಂದಿರುತ್ತದೆ ಎಂದರು.

ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಯುವಜನಾಂಗ ದೊಡ್ಡ ಸಂಖ್ಯೆ ಯಲ್ಲಿ ಭಜನೆಯಲ್ಲಿ ತೊಡಗುವು ದೆಂದರೆ ಅದು ಭಕ್ತಿಯ ಜಾಗತಿಕ ಲೋಕ ಸೃಷ್ಟಿಗೆ ಸಮನಾಗಿರುತ್ತದೆ. ಈ ಕಾರ್ಯದ ಮೂಲಕ ಸಹಸ್ರ ಕಂಠ ದಿಂದ ದಾಸವಾಣಿ ಕೇಳುವ ಭಾಗ್ಯ ಲಭಿಸಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಶ್ರೀಧಾಮ ಮಾಣಿಲ ಶ್ರೀ ಮೋಹನ ದಾಸ ಸ್ವಾಮೀಜಿ, ಶಾಸಕ ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಹೇಮಾವತಿ ವಿ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಕುಮಾರ್‌, ಡಾ| ಯಶೋವರ್ಮ, ಸೋನಿ ಯಶೋ ವರ್ಮ ವೇದಿಕೆಯಲ್ಲಿದ್ದರು.

ಭಜನ ಕಮ್ಮಟದ ಕಾರ್ಯದರ್ಶಿ ಮಮತಾ ರಾವ್‌ ವರದಿ ಮಂಡಿಸಿದರು. ಭಜನ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿದರು. ಬಿ. ಜಯರಾಮ ನೆಲ್ಲಿತ್ತಾಯ ವಂದಿ ಸಿದರು. ಶ್ರೀನಿವಾಸ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದ ಆರಂಭದಲ್ಲಿ ಸುಮಾರು 3,000 ಭಜನಪಟುಗಳಿಂದ ಆಕರ್ಷಕ ಶೋಭಾ ಯಾತ್ರೆ ನಡೆಯಿತು.

ಹಾಡಿದ ಪುನೀತ್‌!

ಚಿತ್ರನಟ ಪುನೀತ್‌ರಾಜ್‌ಕುಮಾರ್‌ ಮಾತನಾಡಿ, ಧರ್ಮಸ್ಥಳವೆಂಬ ಹೆಸರಿನಲ್ಲೇ ವಿಶೇಷವಾದ ಶಕ್ತಿಯಿದೆ. ಹಿಂದಿನಿಂದಲೂ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆಯುತ್ತಿದ್ದೇನೆ. ತಂದೆಯವರ ಜತೆ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದೇನೆ ಎಂದರು. ಡಾ| ಹೆಗ್ಗಡೆಯವರು ಹಾಗೂ ಗಣ್ಯರ ಆಗ್ರಹದ ಮೇರೆಗೆ ಪುನೀತ್‌, “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ’ ಹಾಡನ್ನು ಹಾಡಿ ರಂಜಿಸಿದರು.

ಟಾಪ್ ನ್ಯೂಸ್

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Benjana Padavu: ನೇಣು ಬಿಗಿದು ಆತ್ಮಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.