Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್‌ ರಾಯಲ್ಸ್‌ ಸವಾಲು

Team Udayavani, May 7, 2024, 6:45 AM IST

1-ewqqwewq

ಹೊಸದಿಲ್ಲಿ: ಐಪಿಎಲ್‌ನ ಪ್ಲೇ ಆಫ್ ತೇರ್ಗಡೆಯ ಹೋರಾಟ ಪಂದ್ಯದಿಂದ ಪಂದ್ಯಕ್ಕೆ ತೀವ್ರಗೊಳ್ಳು ತ್ತಿದೆ. ಮಂಗಳವಾರದ ಪಂದ್ಯದಲ್ಲಿ ಅಂಕಪಟ್ಟಿಯ ದ್ವಿತೀಯ ಸ್ಥಾನಿ ರಾಜಸ್ಥಾನ್‌ ರಾಯಲ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಡೆಲ್ಲಿಯ ಪ್ಲೇ ಆಫ್ ತೇರ್ಗಡೆಯ ಆಸೆ ಜೀವಂತವಾಗಿ ಇರಲಿದೆ.

ಇಷ್ಟರವರೆಗಿನ ಪಂದ್ಯಗಳಲ್ಲಿ ಡೆಲ್ಲಿಯ ನಿರ್ವಹಣೆ ಸ್ಥಿರವಾಗಿರಲಿಲ್ಲ. ಆಡಿದ 11 ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿರುವ ಡೆಲ್ಲಿ 10 ಅಂಕ ಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವಿದೆ. ಸದ್ಯ 16 ಅಂಕ ಹೊಂದಿರುವ ಕೆಕೆಆರ್‌ ಮತ್ತು ರಾಜಸ್ಥಾನ್‌ ಪ್ಲೇ ಆಫ್ಗೆ ತೇರ್ಗಡೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಳಿದ ಎರಡು ಸ್ಥಾನಗಳಿಗಾಗಿ ಸದ್ಯ 12 ಅಂಕ ಹೊಂದಿರುವ ಚೆನ್ನೈ, ಹೈದರಾಬಾದ್‌, ಲಕ್ನೋ ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಯಿದೆ. ಇದರ ನಡುವೆ ಡೆಲ್ಲಿ ಮತ್ತು ಆರ್‌ಸಿಬಿ ಕೂಡ ಪ್ಲೇ ಆಫ್ಗೆ ತೇರ್ಗಡೆಯಾಗುವ ನಿರೀಕ್ಷೆ ಇಟ್ಟು ಕೊಂಡಿದೆ. ಹೀಗಾಗಿ ಮುಂದಿನ ಎಲ್ಲ ಪಂದ್ಯಗಳು ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ.

ಆಲ್‌ರೌಂಡ್‌ ನಿರ್ವಹಣೆ
ಈ ಪಂದ್ಯದಲ್ಲಿ ರಾಜಸ್ಥಾನ್‌ ತಂಡದ ನಾಗಲೋಟಕ್ಕೆ ಕಡಿವಾಣ ಹಾಕಬೇಕಾದರೆ ಡೆಲ್ಲಿ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡುವುದು ಅತ್ಯಗತ್ಯವಾಗಿದೆ. ಉತ್ತಮ ಫಾರ್ಮ್ನಲ್ಲಿರುವ ರಿಷಭ್‌ ಪಂತ್‌, ಆಸ್ಟ್ರೇಲಿಯದ ಸ್ಫೋಟಕ ಆಟಗಾರ ಜೇಕ್‌ ಫ್ರೆàಸರ್‌ ಮೆಕ್‌ಗರ್ಕ್‌, ಡೇವಿಡ್‌ ವಾರ್ನರ್‌, ಶೈ ಹೋಪ್‌, ಪೃಥ್ವಿ ಶಾ ಮತ್ತೆ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಬೇಕಾಗಿದೆ. ಬೌಲರ್‌ಗಳು ಎದುರಾಳಿ ತಂಡದ ಯಶಸ್ವಿ ಜೈಸ್ವಾಲ್‌, ಸ್ಯಾಮ್ಸನ್‌, ರಿಯಾನ್‌ ಪರಾಗ್‌ ಅವರ ಬಿರುಸಿನ ಆಟಕ್ಕೆ ಕಡಿವಾಣ ಹಾಕಲು ಯೋಜನೆ ರೂಪಿಸಬೇಕಾಗಿದೆ. ಅಕ್ಷರ್‌ ಪಟೇಲ್‌ ಅವರನ್ನು ಹೊರತುಪಡಿಸಿ ಡೆಲ್ಲಿಯ ಇನ್ನುಳಿದ ಬೌಲರ್‌ಗಳು ಪರಿಣಾಮಕಾರಿ ದಾಳಿ ಸಂಘಟಿಸಲು ವಿಫ‌ಲರಾಗಿದ್ದಾರೆ. ಖಲೀಲ್‌, ಮುಕೇಶ್‌ ಕಮಾರ್‌ ಇನ್ನಷ್ಟು ಸ್ಥಿರ ನಿರ್ವಹಣೆ ನೀಡಲು ಪ್ರಯತ್ನಿಸಬೇಕಾಗಿದೆ.

ರಾಜಸ್ಥಾನ್‌ ಬಲಿಷ್ಠ
ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ನಾಯಕ ಸಂಜು ಸ್ಯಾಮ್ಸನ್‌, ಬಟ್ಲರ್‌, ಜೈಸ್ವಾಲ್‌, ರಿಯಾನ್‌ ಪರಾಗ್‌ ಅದ್ಭುತ ನಿರ್ವಹಣೆ ನೀಡುತ್ತ ಬಂದಿದ್ದಾರೆ. ತಂಡದ ಬೌಲಿಂಗ್‌ ಕೂಡ ತೀಕ್ಷ್ಣವಾಗಿದೆ. ಸಂದೀಪ್‌ ಶರ್ಮ, ಯಜುವೇಂದ್ರ ಚಹಲ್‌, ಆವೇಶ್‌ ಖಾನ್‌, ಆರ್‌. ಅಶ್ವಿ‌ನ್‌ ಅಮೋಘ ದಾಳಿ ಸಂಘಟಿಸಿ ಎದು ರಾಳಿಗೆ ರನ್‌ವೇಗಕ್ಕೆ ಕಡಿವಾಣ ಹಾಕಿದ್ದಾರೆ.

ಜೈಪುರದಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವು ಡೆಲ್ಲಿ ತಂಡವನ್ನು 12 ರನ್ನುಗಳಿಂದ ಸೋಲಿಸಿತ್ತು. ರಾಜ ಸ್ಥಾನದ ನಿಖರ ದಾಳಿಗೆ ರನ್‌ ಗಳಿಸಲು ಒದ್ದಾಡಿದ ಡೆಲ್ಲಿ ಆಟಗಾರರು ಅಂತಿಮವಾಗಿ 12 ರನ್ನಿನಿಂದ ಸೋತಿದ್ದರು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ರಾಜಸ್ಥಾನದ ರಿಯಾನ್‌ ಪರಾಗ್‌ 45 ಎಸೆತಗಳಿಂದ 84 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು.

ಟಾಪ್ ನ್ಯೂಸ್

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

5

Riyan Parag ಯೂಟ್ಯೂಬ್‌ ಹಿಸ್ಟರಿ ಲೀಕ್:‌ ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್‌ʼ ಎಂದು ಸರ್ಚ್

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ಕುಂಭಕೋಡು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Pune Porsche Car Crash: ರಕ್ತದ ಮಾದರಿ ಬದಲಾಯಿಸಲು 3 ಲಕ್ಷ ರೂ. ಪಡೆದ ವೈದ್ಯರು

Pune Porsche Car Crash: ರಕ್ತದ ಮಾದರಿ ಬದಲಾಯಿಸಲು 3 ಲಕ್ಷ ರೂ. ಪಡೆದಿದ್ದ ವೈದ್ಯರು

4

Arrested: ಲಿವ್‌ ಇನ್‌ ಸಂಗಾತಿ ಆತ್ಮಹತ್ಯೆ; ಐಆರ್‌ಎಸ್‌ ಅಧಿಕಾರಿ ಬಂಧನ

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Riyan Parag ಯೂಟ್ಯೂಬ್‌ ಹಿಸ್ಟರಿ ಲೀಕ್:‌ ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್‌ʼ ಎಂದು ಸರ್ಚ್

1-qweewqewqe

Coach;ಕುತೂಹಲ ಮೂಡಿಸಿದ ಗೌತಮ್‌ ಗಂಭೀರ್‌-ಜಯ್‌ ಶಾ ಭೇಟಿ

1-qewqwewq

IPL 2024; ಮೈದಾನದ ಸಿಬಂದಿಗೆ ಬಹುಮಾನ

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

1-wwqewewq

French Open-2024: ರಫೆಲ್‌ ನಡಾಲ್‌, ಮರ್ರೆ ಮನೆಗೆ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Mizoram: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿತ; ಕನಿಷ್ಠ 10 ಮಂದಿ ಮೃತ್ಯು, ಹಲವರು ನಾಪತ್ತೆ

Mizoram: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿತ; ಕನಿಷ್ಠ 10 ಮಂದಿ ಮೃತ್ಯು, ಹಲವರು ನಾಪತ್ತೆ

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

5

Riyan Parag ಯೂಟ್ಯೂಬ್‌ ಹಿಸ್ಟರಿ ಲೀಕ್:‌ ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್‌ʼ ಎಂದು ಸರ್ಚ್

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ಕುಂಭಕೋಡು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.