ಬಿಷಪ್ಗೆ ಮೇಡಂ ಗ್ರೇಸ್ ಪಿಂಟೋ ಅಭಿನಂದನೆ
Team Udayavani, Oct 4, 2018, 3:48 PM IST
ಮುಂಬಯಿ: ಮಂಗಳೂರು ರೋಮನ್ ಕೆಥೋಲಿಕ್ ಧರ್ಮಪ್ರಾಂತ್ಯದ 14ನೇ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡು ಇತ್ತೀಚೆಗೆ ದೀಕ್ಷೆ ಸ್ವೀಕರಿಸಿರುವ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ರಾಯನ್ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು.
ಇತ್ತೀಚೆಗೆ ಖಾಸಗಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ರೋಮ್ಗೆ ತೆರಳುವ ಮುನ್ನ ನಗರದ ಮಾಹಿಮ್ ಪಶ್ಚಿಮದಲ್ಲಿನ ಸೈಂಟ್ ಕ್ಸೇವಿಯರ್ ಎಂಜಿನಿಯರಿಂಗ್ ಕಾಲೇಜು ಸಮಾಲೋಚನ ಸಭಾಗೃಹದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪಾಲ್ಗೊಂಡ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರೊಂದಿಗೆ ಕುಶಲೋಪರಿ ವಿಚಾರಿಸಿದ ಮೇಡಂ ಪಿಂಟೋ ಧರ್ಮಾಧ್ಯಕ್ಷರ ಆಯ್ಕೆ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮೋಡೆಲ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಆಲ್ಬರ್ಟ್ w.ಡಿ’ಸೋಜಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಮಾಜಿ ಉಪ ಕಾರ್ಯಾ ಧ್ಯಕ್ಷ ಮತ್ತು ನಿರ್ದೇಶಕ ವಿನ್ಸೆಂಟ್ ಮಥಾಯಸ್, ಸ್ಥಾಪಕಾ ಧ್ಯಕ್ಷ ಜೋನ್ ಡಿ’ಸಿಲ್ವಾ, ಬೃಹನ್ಮುಂ ಬಯಿಯ ಮಾಜಿ ಪೊಲೀಸ್ ಆಯುಕ್ತ ರೊನಾಲ್ಡ್ ಎಚ್. ಮೆಂಡೋನ್ಸಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ