ದಾಖಲೆ ಸಲ್ಲಿಸಲು ಮುಗಿಬಿದ್ದ ರೈತರು

Team Udayavani, Oct 7, 2018, 3:54 PM IST

7-october-17.gif

ತೇರದಾಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ಗಳಿಗೆ ಸಾಲ ಮನ್ನಾಕ್ಕೆ ಅಗತ್ಯ ದಾಖಲಾತಿ ಸಲ್ಲಿಸಲು ರೈತರು ಸರದಿಯಲ್ಲಿ ನಿಂತು ಪರದಾಡುತ್ತ, ದುಂಬಾಲು ಬಿದ್ದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದಾರೆ. ಆದರೆ ಹಲವಾರು ಕಾಗದ ಪತ್ರಗಳನ್ನು ನಿಗದಿತ ಅವಧಿಯೊಳಗೆ ಫಲಾನುಭವಿ ರೈತರು ಪಿಕೆಪಿಎಸ್‌ ಗಳಿಗೆ ತಲುಪಿಸಬೇಕು. ಅದಕ್ಕಾಗಿ ಪಟ್ಟಣದ ಮೂರು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ ಗಳಿಗೆ ಸಾಲ ಮನ್ನಾಕ್ಕೆ ಬೇಕಾದ ದಾಖಲಾತಿ ಕೊಟ್ಟು, ನಿಗದಿತ ನಮೂನೆಯ ಫಾರಂಗೆ ಸಹಿ ಮಾಡಲು ರೈತರು ಮುಗಿಬಿದ್ದಿದ್ದಾರೆ.

ಬಸ್‌ ನಿಲ್ದಾಣ ಸಮೀಪದ ಪಿಕೆಪಿಎಸ್‌ ನಲ್ಲಿ 1400ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸಾಲಗಾರರಿದ್ದಾರೆ. ಅವರಲ್ಲಿ 1,039 ರೈತರು ಸಾಲ ಮನ್ನಾ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಅವರ ಒಟ್ಟು 5.78ಕೋಟಿ ರೂ.ಗಿಂತ ಹೆಚ್ಚು ಸಾಲ ಮನ್ನಾ ಆಗಲಿದೆ.

ಪಶ್ಚಿಮ ಭಾಗದ ಪಿಕೆಪಿಎಸ್‌ನಲ್ಲಿ ಒಟ್ಟು ಸಾಲಗಾರರ ರೈತರು 304 ಇದ್ದಾರೆ. ಅವರಲ್ಲಿ 221 ರೈತರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ ಒಟ್ಟು 1.09 ಕೋಟಿಯಷ್ಟು ಹಣ ಮನ್ನಾ ಆಗಲಿದೆ. ಕಲ್ಲಟ್ಟಿ ಗಲ್ಲಿಯ ಪಿಕೆಪಿಎಸ್‌ನಲ್ಲಿ 734 ರೈತರಿಗೆ ಸಾಲ ಮನ್ನಾದ ಲಾಭ ದೊರಕಲಿದೆ. ಇನ್ನುಳಿದ 192 ರೈತರಿಗೆ ಸಾಲ ಮನ್ನಾದ ಲಾಭ ಬರುವುದಿಲ್ಲ. ಹೀಗಾಗಿ ಒಟ್ಟು 4.18 ಕೋಟಿ ರೂ. ಸಾಲ ಮನ್ನಾ ರೈತರಿಗೆ ಸಿಗಲಿದೆ. ದಾಖಲೆ ಪಡೆದುಕೊಳ್ಳಲು ಹರಸಾಹಸ ಪಡುವಂತಾಗಿದೆ.

ಸಾಲಗಾರ ರೈತರು ಅವಶ್ಯಕ ಎಲ್ಲ ದಾಖಲಾತಿ ಕೊಡುತ್ತಿದ್ದಾರೆ. ನಮ್ಮ ಸಿಬ್ಬಂದಿಯೂ ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾಖಲಾತಿ ಸ್ವೀಕಾರಕ್ಕೆ ನಮಗೆ ಅಧಿಕೃತ ಆದೇಶ ಬಂದಿಲ್ಲವಾದರೂ ಅ.15 ಕೊನೆಯ ದಿನವಾಗಬಹುದು. ಅರ್ಹ ರೈತರಿಗೆ ಫೋನ್‌ ಮಾಡಿ ಬೇಗ ದಾಖಲಾತಿ ಒಪ್ಪಿಸುವಂತೆ ಸೂಚಿಸಲಾಗುತ್ತಿದೆ.
ಭರಮಪ್ಪ ಕಾಲತಿಪ್ಪಿ
ವ್ಯವಸ್ಥಾಪಕ, ಪಿಕೆಪಿಎಸ್‌ ಕಲ್ಲಟ್ಟಿ

ಸಾಲ ಮನ್ನಾದ ಅರ್ಹ ಫಲಾನುಭವಿ ರೈತರು ಪಡಿತರ ಕಾರ್ಡಿನ ಛಾಯಾಪ್ರತಿಯೊಂದಿಗೆ ಕಾರ್ಡಿನಲ್ಲಿರುವ ಎಲ್ಲ ಸದಸ್ಯರ ಆಧಾರ್‌ ಕಾರ್ಡ್‌, ಜಮೀನು ಉತಾರ, ಪಾನ್‌ಕಾರ್ಡ್‌ ಪ್ರತಿ, ಮತದಾನ ಗುರುತಿನ ಪತ್ರ, ಭಾವಚಿತ್ರ ಪ್ರತಿಗಳು ಸೇರಿ ಅವಶ್ಯಕ ದಾಖಲೆಗಳೊಂದಿಗೆ ನಿಗದಿತ ಫಾರ್ಮ್ ತುಂಬಿ ಸಹಿ ಮಾಡುವುದಿದೆ. ಕೊನೆಯ ದಿನಾಂಕದ ಬಗ್ಗೆ ಗೊಂದಲವಿದ್ದು, ಪತ್ರಿಕೆಗಳ ಸುದ್ದಿ ಪ್ರಕಾರ ಅ.15 ಎಂಬುದಾಗಿದೆ. ರೈತರು ಆದಷ್ಟು ಬೇಗ ದಾಖಲಾತಿ ಒಪ್ಪಿಸಬೇಕು.
 ವಿಜಯ ಕಡಹಟ್ಟಿ
ಅಧ್ಯಕ್ಷರು, ಪಿಕೆಪಿಎಸ್‌ ತೇರದಾಳ 

ಟಾಪ್ ನ್ಯೂಸ್

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.