ಫ್ರಿಜ್ ಇದ್ದರೆ ಸಿಗದು ಆಯುಷ್ಮಾನ್
Team Udayavani, Oct 12, 2018, 6:00 AM IST
ನವದೆಹಲಿ: ಮಾಸಿಕ 10,000 ರೂ.ಗಳಿಗಿಂತ ಹೆಚ್ಚು ವರಮಾನವಿರುವ ಹಾಗೂ ಮನೆಯಲ್ಲಿ ದ್ವಿಚಕ್ರ ವಾಹನ, ಫ್ರಿಜ್ ಹೊಂದಿರುವಂಥ ಫಲಾನುಭವಿಗಳನ್ನು ಆಯುಷ್ಮಾನ್ ಭಾರತ ಹೊರಗಿ ಡಲಾಗುತ್ತದೆ ಎಂದು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ. ಇದಲ್ಲದೆ, 2.5 ಎಕರೆಯಷ್ಟು ಕೃಷಿ ಭೂಮಿ ಹೊಂದಿರುವವರು ಅಥವಾ ವರ್ಷ ಕ್ಕೆರಡು ಇಳುವರಿ ತೆಗೆಯಬಹುದಾದ 5 ಎಕರೆ ಹಾಗೂ ಅದಕ್ಕಿಂತ ಹೆಚ್ಚು ಕೃಷಿ ಭೂಮಿಯನ್ನು ಹೊಂದಿರುವವರು ಅಥವಾ 7.5 ಎಕರೆ ಹೊಲವನ್ನು ಉಳಲು ಸಾಕಾಗುವಷ್ಟು ಕೃಷಿ ಸಲಕರಣೆಗಳನ್ನು ಹೊಂದಿರುವವರನ್ನೂ ಆಯುಷ್ಮಾನ್ ಭಾರತ ಯೋಜನೆ ಯಿಂದ ಹೊರಗಿಡಲಾಗುವುದು ಎಂದು ಎನ್ಎಚ್ಎ ಹೇಳಿದೆ.