ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ


Team Udayavani, Oct 12, 2018, 3:27 PM IST

12-october-18.gif

ಬಾಗಲಕೋಟೆ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಕೈಕೊಟ್ಟರೂ ಈರುಳ್ಳಿ ಬೆಳೆಯಲ್ಲಿ ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ಕೇಳುವವರಿಲ್ಲ. ಕಾರಣ ಬೆಲೆ ಕುಸಿತಗೊಂಡಿದೆ.

ಮಾರುಕಟ್ಟೆಯಲ್ಲಿ ಉತ್ತಮ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ರೂ. 800 ರಿಂದ 1000ರವರೆಗೆ ಮಾರಾಟವಾಗುತ್ತಿದೆ. ದೀಪಾವಳಿ ನಂತರ ಮಾರುಕಟ್ಟೆಗೆ ಈರುಳ್ಳಿ ಹೆಚ್ಚು ಬರುವುದರಿಂದ ಬೆಲೆಯಲ್ಲಿ ಇನ್ನೂ ಕಡಿಮೆಯಾಗುತ್ತದೆ ಎನ್ನುವ ಆತಂಕ ರೈತರಲ್ಲಿ ಮೂಡಿದೆ. ಕಳೆದ ವರ್ಷವು ಸಹ ಈರುಳ್ಳಿ ಬೆಳೆದ ರೈತರು ಕೈ ಸುಟ್ಟುಕೊಂಡಿದ್ದರು. ಅಧಿಕ ಮಾಸ ಬಂದ ಹಿನ್ನೆಲೆಯಲ್ಲಿ ಲಾಭ ಪಡೆಯಬಹುದು ಎಂದು ರೈತರು ಈರುಳ್ಳಿ ಬಿತ್ತನೆ ಮಾಡಿದರೆ, ಮತ್ತೆ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.

ಲಾಭ ಮಾಡುವ ರೈತನ ಕನಸಿಗೆ ಬೆಲೆಯ ಕುಸಿತ ರೈತನಿಗೆ ಆಘಾತ ನೀಡಿದೆ. ಈಗಿನ ಬೆಲೆಯಲ್ಲಿ ಮುಂದೆ ಮಾರಾಟವಾದರೆ ರೈತರು ಪ್ರತಿ ಎಕರೆ ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಸಹ ವಾಪಸು ಬರುವ ಲಕ್ಷಣಗಳಿಲ್ಲ. ರೈತರು ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಅಲ್ಲದೇ ಈರುಳ್ಳಿಯನ್ನು ಜಮೀನಿನಿಂದ ಮಾರುಕಟ್ಟೆಗೆ ತರಲು ವಾಹನದ ಬಾಡಿಗೆ ಸಹ ಕೆಲ ರೈತರಿಗೆ ಬಂದಿಲ್ಲ.

ಜಿಲ್ಲೆಯಲ್ಲಿ ಒಟ್ಟು 20,380 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ: ಜಿಲ್ಲೆಯಲ್ಲಿ 2018ರ ಮುಂಗಾರು ಹಂಗಾಮಿನಲ್ಲಿ 22,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಒಟ್ಟು 20,380 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.ಬಾಗಲಕೋಟೆ ತಾಲೂಕಿನಲ್ಲಿ 1700 ಹೆಕ್ಟೇರ್‌, ಬಾದಾಮಿಯಲ್ಲಿ 7780 ಹೆಕ್ಟೇರ್‌, ಹುನಗುಂದದಲ್ಲಿ 7926 ಹೆಕ್ಟೇರ್‌, ಮುಧೋಳದಲ್ಲಿ  2000 ಹೆಕ್ಟೇರ್‌, ಜಮಖಂಡಿಯಲ್ಲಿ ಕೇವಲ 114 ಹೆಕ್ಟೇರ್‌, ಬೀಳಗಿಯಲ್ಲಿ 860 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ನಾನು 3 ಎಕರೆ ಪ್ರದೇಶದಲ್ಲಿ ಈರುಳಿ ಬಿತ್ತನೆ ಮಾಡಿದ್ದೆ. ಉತ್ತಮ ಬೆಳೆ ಬಂದರೂ ಮಾರು ಕಟ್ಟೆಯಲ್ಲಿ ಯೋಗ್ಯ ಬೆಲೆಯಿಲ್ಲ. ಅಂದಾಜು 80 ಸಾವಿರ ಖರ್ಚು ಮಾಡಿದ್ದೇನೆ. ಮಾರಾಟದಿಂದ ನನಗೆ ಸಿಕ್ಕಿದ್ದು ಕೇವಲ 28 ಸಾವಿರ ರೂ. ಮಾತ್ರ. ಲಾಭಕ್ಕಿಂತ ನಷ್ಟ ಹೆಚ್ಚಾಗಿದೆ.
ತವರಪ್ಪ ಶಂಕ್ರಪ್ಪ ನಾಯಕ,
ಮುಂಚಖಂಡಿ ತಾಂಡಾ ರೈತ.

ಉಳ್ಳಾಗಡ್ಡಿ ಬೆಲೆ ಕುಸಿಯಲು ಅನೇಕ ಕಾರಣಗಳಿವೆ. ತೇವಾಂಶ ಹೆಚ್ಚಾಗಿರುವುದರಿಂದ ಹೆಚ್ಚು ದಿನ ಸ್ಟೊರೇಜ್‌ ಮಾಡಲು ಬರುವುದಿಲ್ಲ. ಕೊಯ್ಲು ಆದ ವಾರದೊಳಗೆ ಮಾರುಕಟ್ಟೆಗೆ ತರಲೇಬೇಕು. ಜಿಲ್ಲೆಯಲ್ಲಿ ಅವಶ್ಯಕ್ಕಿಂತ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದಾರೆ. ಹಿಂಗಾರು ಈರುಳ್ಳಿ ಬೆಳೆ ರೈತರಿಗೆ ಸ್ಟೋರೇಜ್‌ ಮಾಡಲು ಹುನಗುಂದದಲ್ಲಿ 12 ಸ್ಟೋರೇಜ್‌ ಯುನಿಟ್‌ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಟೋರೇಜ್‌ ಯುನಿಟ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
 ಪ್ರಭುರಾಜ ಹಿರೇಮಠ, ಜಿಲ್ಲಾ
ತೋಟಗಾರಿಕೆ ಉಪನಿರ್ದೇಶಕ,

„ವಿಠ್ಠಲ ಮೂಲಿಮನಿ

ಟಾಪ್ ನ್ಯೂಸ್

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.