ಕುಸಿಯುವ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ

Team Udayavani, Oct 12, 2018, 4:41 PM IST

ram-1.jpg

ಕುದೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಕಟ್ಟಣದ ಚಾವಣಿ ಯಾವಾಗ ಕುಸಿಯುತ್ತದೆಯೋ ಎಂದು ಜೀವಭಯದಲ್ಲಿ ವಿದ್ಯಾರ್ಥಿಗಳು ಪಾಠಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

2008ರಲ್ಲಿ ಕಾಲೇಜಿಗೆ ಸೇರಿದಂತೆ ಎಂಟು ಕೊಠಡಿಯುಳ್ಳ ಕಟ್ಟಡ ನಿರ್ಮಿಸಲಾಗಿದ್ದು, ಪ್ರಸ್ತುತ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಸುಮಾರು 448 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 8 ಕೊಠಡಿಗಳಲ್ಲಿ 6 ಕೊಠಡಿಗಳನ್ನು ವಿದ್ಯಾರ್ಥಿಗಳ ಬೋಧನೆಗೆಗಾಗಿ ಬಳಸುತ್ತಿದ್ದಾರೆ, ಇನ್ನುಳಿದ 2 ಕೊಠಡಿಯನ್ನು ಕಾಲೇಜು ಸಿಬ್ಬಂದಿ ಹಾಗೂ ವಿಜ್ಞಾನದ ಪ್ರಯೋಗಲಾಯಕ್ಕೆ ಬಳಸಲಾಗಿದೆ. 

ಪ್ರಾಣ ಭಯದ ಭೀತಿ:ಈ ಹಿಂದೆ ಇದ್ದ ಕಲ್ಯಾಣಿಯನ್ನು ಮುಚ್ಚಿ ಆ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲಾಗಿದ್ದು, ಕಟ್ಟಡ ಮತ್ತು ಒಳಗಿನ ಆವರಣದ ನೆಲ ಕೆಲವುದಿನಗಳ ಹಿಂದೆ ಕುಸಿದಿದೆ, ಕೊಠಡಿಗಳ ಗೋಡೆಗಳು ಸಹ ಬಿರುಕು ಬಿಟ್ಟಿದೆ, ಪಾಠ ಮಾಡುವ ಉಪನ್ಯಾಸಕರು ಒಳಗೆ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದು ಬರುತ್ತಾರೆ. ಕೊಠಡಿಗಳ ಒಳಗೆ ಕುಳಿತು ಪಾಠ ಕೇಳುವಾಗ ಯಾವುದೇ ಕ್ಷಣದಲ್ಲಿ ಮೇಲ್ಚಾವಣಿ ಕುಸಿದು ಬೀಳುವ ಭೀತಿ ಎದುರಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು. 

ಕಟ್ಟಡದ ಮೇಲ್ಚಾವಣಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಇಳಿಜಾರು ಮಾಡಿಲ್ಲ, ಮಳೆ ನೀರೆಲ್ಲಾ ಮೇಲ್ಛಾವಣಿ ಮೇಲೆ ನಿಂತು ನಿತ್ಯ ಕಟ್ಟಡ ಸೋರುತ್ತಿದೆ. ಸೋರುವ ನೀರಿನ ಕೆಳೆಗೆ ಕುಳಿತು ಪಾಠ ಕೇಳುವುದು ತುಂಬಾ ಕಷ್ಟವಾಗಿದೆ ಎಂದು ವಿದ್ಯಾರ್ಥಿಯೊಬ್ಬ ಉದಯವಾಣಿಗೆ ತಿಳಿಸಿದ್ದಾನೆ.

ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಮಳೆಗಾಲದಲ್ಲಂತೂ ಕಾಲೇಜಿನ ಕಟ್ಟಡ ಸಂಪೂರ್ಣ ಜಲಾವೃತ್ತವಾಗುತ್ತದೆ. ಕಾಲೇಜಿನ ಆವರಣದಲ್ಲಿ ನಿಂತ ನೀರಿನಲ್ಲಿ ಜಡ ಸಸ್ಯಗಳು ಬೆಳೆದು ಕಸ ಕಡ್ಡಿ ಕೊಳೆತು ದುರ್ನಾತ ಬೀರುತ್ತಿದೆ, ಚಾವಣಿಯಲ್ಲಿ ನಿಲ್ಲುವ ನೀರನ್ನು ವಿದ್ಯಾರ್ಥಿಗಳು ಸ್ವತ್ಛಗೊಳಿಸುವ ಪರಿಸ್ಥಿತಿ ಎದುರಾಗಿದೆ ಮತ್ತು ವಿಷ ಜಂತುಗಳ ಕಾಟವು ಹೆಚ್ಚಾಗಿದೆ.

ಗ್ರಾಪಂ ಗಮನಕ್ಕೆ: ಉಪನ್ಯಾಸಕರು ತಮ್ಮ ಕೈಲಾಗುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ಆದರೆ ಕಟ್ಟಡ ಬಿರುಕು, ಮೈದಾನ ಸಮತಟ್ಟು , ಚರಂಡಿ ಸಮಸ್ಯೆ ಮುಂತಾದವು ಉನ್ನತ ಮಟ್ಟದಲ್ಲಿ ಕೈಗೊಳ್ಳುವ ಕಾರ್ಯಗಳಾಗಿದ್ದು ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿ ಕೊಡಲೇ ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಲೇಜು ಸಿಬ್ಬಂದಿ ಮನವಿ ಮಾಡಿದ್ದಾರೆ.

ಕ್ರೀಡೆಗೂ ಹಿನ್ನಡೆ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕ್ರೀಡಾಪಟ್ಟುಗಳಿದ್ದು ಅವರಿಗೆ ಸೂಕ್ತ ತರಬೇತಿ ಅವಶ್ಯ ಕತೆಯಿದೆ. ಸರಿಯಾಗಿ ನಿರ್ವಹಣೆ ಕಾಣದ ಮೈದಾ ನದಿಂದ ಕ್ರೀಡಾ ಚಟುವಟಿಕೆಗಳು ತೀವ್ರ ಹಿನ್ನಡೆ ಯಾಗಿದೆ. ಗ್ರಾಮೀಣ ಪ್ರತಿಭೆಗಳು ಸರಿಯಾಗಿ ತರ ಬೇತಿ ಪಡೆಯಲು ಸಾಧ್ಯವಾಗದೆ ಕಮರಿ ಹೋಗು ತ್ತಿದ್ದಾರೆ. ಮಳೆ ಬಂದರೆ ನೀರು ತುಂಬಿ ಕೆರೆಯಂತಾಗಿ ಮಾರ್ಪಾಡಾಗುವ ಮೈದಾನದಲ್ಲಿ ಕ್ರೀಡಾಭ್ಯಾಸ ಹೇಗೆ ಸಾಧ್ಯ ಎಂಬುದು ಕ್ರೀಡಾಭಿಮಾನಿಗಳ ಪ್ರಶ್ನೆ ?

ಕಾಲೇಜಿನ ಆವರಣದಲ್ಲಿ ಮಳೆ ಬಂದರೆ ನೀರು ನಿಂತುಕೊಳ್ಳುವ ಬಗ್ಗೆ ಇಲಾಖೆಗೆ ಲಿಖೀತ ರೂಪದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಜಿಪಂ ಸಭೆಯಲ್ಲೂ ಸಹ ಹಲವು ಬಾರಿ ತಿಳಿಸಿದ್ದೇವೆ ಹಾಗೂ ಗ್ರಾಪಂ ಅಧ್ಯಕ್ಷ, ಸದಸ್ಯರಿಗೂ
ವಸ್ತುಸ್ಥಿತಿ ಬಗ್ಗೆ ತಿಳಿದಿದೆ. ಆದರೂ ಜನಪ್ರತಿನಿಧಿಗಳು ಮಾತ್ರ ಈ ಕಾಲೇಜಿಗೂ ನಮಗೆ ಸಂಬಂಧವೇ ಇಲ್ಲ ಎಂಬುವ ರೀತಿ ವರ್ತಿಸುತ್ತಿದ್ದಾರೆ. ಇದು ಹೀಗೆ ಮೂಮದುವರಿದರೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವೆ.
 ಕಾಂತರಾಜು, ಪ್ರಾಂಶುಪಾಲ

ಶಾಸಕ ಮಂಜುನಾಥ್‌ ಪ್ರತಿನಿಧಿಸಿದ್ದ  ಕೇತ್ರ ಶಾಸಕ ಎ.ಮಂಜುನಾಥ್‌ ಜಿಪಂನಲ್ಲಿ ಗೆಲುವು ನೀಡಿ ರಾಜಕೀಯವಾಗಿ ಪುನಜನ್ಮ ನೀಡಿದ ಕ್ಷೇತ್ರ ಕುದೂರು, ಹೋಬಳಿ ಕೇಂದ್ರದ ಸರ್ಕಾರಿ ಕಾಲೇಜು ಇಂತಹ ಪರಿಸ್ಥಿತಿಯಿದ್ದರೂ ಜನಪ್ರತಿ ನಿಧಿಗಳು ಮಾತ್ರ ಕಣ್ಮುಚ್ಚಿಕೊಳಿತ್ತಿದ್ದಾರೆ. ಮಳೆ ಬಂದರೆ ಕಾಲೇಜಿಗೆ ಬರಲು ಮುಜುಗರ ವಾಗುತ್ತದೆ. ಈ ಕಾಲೇಜಿಗೆ
ಯಾಕಾದರೂ ಸೇರಿ ಕೊಂಡೆವೋ ಎಂಬ ಮನೋಭಾವನೆ ವಿದ್ಯಾರ್ಥಿ ಗಳಲ್ಲಿ ಮೂಡುತ್ತದೆ. ಅತ್ತ ಇಲಾಖೆಯೂ ತಲೆಕಡೆಸಿಕೊಳ್ಳುತ್ತಿಲ್ಲ ಇತ್ತ ಗ್ರಾಪಂ ಸಹ ಚರಂಡಿ ನಿರ್ಮಾಣದ ವಿಷಯದಲ್ಲಿ ಜಾಣಕುರುಡು ಪ್ರದರ್ಶಿಸುತ್ತಿದೆ, ಶಾಸಕರು ನಮ್ಮ ಕಾಲೇಜಿನ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯ ಲ್ಲಿದ್ದೇವೆ ಎಂದು ವಿದ್ಯಾರ್ಥಿಗಳು ಉದಯವಾಣಿ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ.

ಕೆ.ಎಸ್‌.ಮಂಜುನಾಥ್‌ ಕುದೂರು

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.