“ವಿಕ್ಟರಿ’ಗೆ ಧ್ರುವ ಧ್ವನಿ
Team Udayavani, Oct 24, 2018, 11:33 AM IST
ಶರಣ್ ನಾಯಕರಾಗಿರುವ “ವಿಕ್ಟರಿ-2′ ಚಿತ್ರ ನಾನಾ ಕಾರಣಗಳಿಂದಾಗಿ ಸದ್ದು ಮಾಡುತ್ತಲೇ ಇದೆ. “ಮನೆಗೆ ಬಂದಿಲ್ಲ ಅಂತಾ ಬೈಬೇಡಿ ನೀವು …’ ಹಾಡು ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಚಿತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಈ ಮೂಲಕ “ವಿಕ್ಟರಿ-2′ ತಂಡವನ್ನು ಪ್ರೋತ್ಸಾಹಿಸಿದ್ದಾರೆ. ಇಡೀ ಸಿನಿಮಾದ ನಿರೂಪಣೆಯನ್ನು ಧ್ರುವ ಸರ್ಜಾ ಅವರು ಮಾಡಿದ್ದಾರೆ.
“ವಿಕ್ಟರಿ’ ಚಿತ್ರಕ್ಕೆ ನಟ ಜಗ್ಗೇಶ್ ಅವರು ಧ್ವನಿ ನೀಡಿದ್ದರು. ಈಗ “ವಿಕ್ಟರಿ-2’ಗೆ ಧ್ರುವ. ಧ್ರುವ ಧ್ವನಿ ನೀಡಿರುವ ಬಗ್ಗೆ ಮಾತನಾಡುವ ನಿರ್ದೇಶಕ ಸಂತು, “ಇಡೀ ಚಿತ್ರ ಧ್ರುವ ಅವರ ವಾಯ್ಸ ಓವರ್ನಲ್ಲಿ ಸಾಗುತ್ತದೆ. ಚಿತ್ರದ ಕಥೆಯನ್ನು ನಿರೂಪಿಸುತ್ತಾ, ಪಾತ್ರವನ್ನು ಪರಿಚಯಿಸುತ್ತಾ ಧ್ರುವ ಧ್ವನಿ ಬರುತ್ತದೆ. ಮಧ್ಯೆ ಮಧ್ಯೆ ಬರುವ ಕನ್ಫ್ಯೂಶನ್ಗಳಿಗೂ ಧ್ರುವ ಉತ್ತರ ನೀಡುತ್ತಾ ಬರುತ್ತಾರೆ.
ಚಿತ್ರದ ಟೈಟಲ್ ಕಾರ್ಡ್ನಿಂದ ಆರಂಭವಾಗುವ ಅವರ ಧ್ವನಿ, ಸಿನಿಮಾ ಮುಗಿಯುವವರೆಗೆ ಬರುತ್ತಲೇ ಇರುತ್ತದೆ’ ಎನ್ನುತ್ತಾರೆ. ಎಲ್ಲಾ ಓಕೆ ಧ್ರುವ ಸರ್ಜಾ ಅವರಿಂದಲೇ ಧ್ವನಿ ಕೊಡಿಸಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಯೂತ್ ಟಚ್. “ಚಿತ್ರ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್.
ಈ ಸಿನಿಮಾಕ್ಕೆ ಯೂತ್ ಟಚ್ ಕೊಡಿಸುವ ಕಾರಣದಿಂದ ಧ್ರುವ ಅವರಿಂದ ಧ್ವನಿ ಕೊಡಿಸಲಾಗಿದೆ. ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ’ ಎಂಬುದು ಸಂತು ಮಾತು. ಶರಣ್ ನಾಯಕರಾಗಿರುವ ಈ ಚಿತ್ರದಲ್ಲಿ ಅಪೂರ್ವ ಹಾಗೂ ಅಸ್ಮಿತಾ ಸೂದ್ ನಾಯಕಿಯರು. ತರುಣ್ ಶಿವಪ್ಪ ಈ ಚಿತ್ರದ ನಿರ್ಮಾಪಕರು. ಚಿತ್ರ ನವೆಂಬರ್ 1 ರಂದು ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…