ಶಿಕ್ಷಕನ ಮೇಲೆ ಹಲ್ಲೆ : ಕಾಲೇಜು ವಿದ್ಯಾರ್ಥಿ, 3 ಸಹಚರರು ಅರೆಸ್ಟ್
Team Udayavani, Oct 30, 2018, 11:52 AM IST
ಮುಜಫರನಗರ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಕಾಂದ್ಲಾ ಪಟ್ಟಣದಲ್ಲಿ ಶಿಕ್ಷಕರೋರ್ವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಕಾಲೇಜು ವಿದ್ಯಾರ್ಥಿ ಹಾಗೂ ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ.
ತನ್ವೀರ್ ಎಂಬ ವಿದ್ಯಾರ್ಥಿಯು ತನ್ನ ಮೂವರು ಸಹಚರರೊಂದಿಗೆ ತರಗತಿ ಕೋಣೆಗೆ ನುಗ್ಗಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದ ಎಂದು ಎಸ್ಎಚ್ಓ ಸುನೀಲ್ ದತ್ ತಿಳಿಸಿದ್ದಾರೆ. ಘಟನೆಯನ್ನು ಅನುಸರಿಸಿ ತನ್ವೀರ್ನನ್ನು ಕಾಲೇಜಿನಿಂದ ವಜಾ ಮಾಡಲಾಗಿದೆ. ಎಂದು ದತ್ ತಿಳಿಸಿದರು.