ಸಾರ್ಲೋರ್ಲಕ್ಸ್ ಓಪನ್ ಶುಭಂಕರ್ ಚಾಂಪಿಯನ್
Team Udayavani, Nov 6, 2018, 6:00 AM IST
ಸಾರ್ಬ್ರುಕೆನ್ (ಜರ್ಮನಿ): ಭಾರತದ ಶುಭಂಕರ್ ಡೇ 5ನೇ ಶ್ರೇಯಾಂಕಿತ ರಾಜೀವ್ ಔಸೆಫ್ಗೆ ಅಘಾತವಿಕ್ಕಿ
“ಸಾರ್ಲೋರ್ಲಕ್ಸ್ ಓಪನ್’ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಜಯಿಸಿದ್ದಾರೆ.
ರವಿವಾರ ನಡೆದ ಫೈನಲ್ನಲ್ಲಿ ಶ್ರೇಯಾಂಕ ರಹಿತ ಶುಭಂಕರ್ ಇಂಗ್ಲೆಂಡ್ನ ರಾಜೀವ್ ಔಸೆಫ್ ಅವರನ್ನು 21-11, 21-14 ಗೇಮ್ಗಳಿಂದ ಸೋಲಿಸಿದರು. ಅಂತಾರಾಷ್ಟ್ರೀಯ ಕೂಟದಲ್ಲಿ ಮೊದಲ ಬಾರಿಗೆ ರಾಜೀವ್ ಅವರನ್ನು ಎದುರಿಸಿದ ಶುಭಂಕರ್ ಆರಂಭಿಕ ಹಂತದಲ್ಲಿ ತುಸು ವಿಚಲಿತರಾದಂತೆ ಕಂಡುಬಂದರೂ ಅನಂತರ ಸತತ 7 ಅಂಕಗಳನ್ನು ಪಡೆದು 21-11 ಅಂತರದಿಂದ ಗೆದ್ದರು.
2ನೇ ಗೇಮ್ನಲ್ಲಿ ರಾಜೀವ್ ಅಲ್ಪ ಮಟ್ಟಿಗೆ ಪೈಪೋಟಿ ನೀಡಿದರಾದರೂ ಶುಭಂಕರ್ ಸತತ 5 ಅಂಕಗಳನ್ನು ಪಡೆದು ಹಿಡಿತ ಸಾಧಿಸಿದರು.
“ನನ್ನ ಜೀವನದಲ್ಲಿ ಇದು ಬಹುದೊಡ್ಡ ಸಾಧನೆ. ಇಲ್ಲಿ ನಾನು ನೀಡಿದ ಪ್ರದರ್ಶನ ತೃಪ್ತಿ ತಂದಿದೆ. ಫೈನಲ್ಗಾಗಿ ನಾನು ಸಾಕಷ್ಟು ತಯಾರಿ ನಡೆಸಿದ್ದೆ. ಪ್ರತಿಸ್ಪರ್ಧಿಯ ಆಟವನ್ನು ಸೂಕ್ಷ್ಮವಾಗಿ ಗಮನಿಸಿದೆ. ಯಾವುದೇ ಒತ್ತಡವಿಲ್ಲದೆ ಶಾಂತಚಿತ್ತದಿಂದ ಆಡಿದೆ’ ಎಂದು ಶುಭಂಕರ್ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್