ಕ್ಯಾನ್ಸರ್‌ ಕೇಂದ್ರದ ಲಾಭ ಪಡೆಯಿರಿ

Team Udayavani, Nov 16, 2018, 10:45 AM IST

gul-3.jpg

ಕಲಬುರಗಿ: ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗೆ ಬೇಕಾದ ಆತ್ಯಾಧುನಿಕ ಸೌಲಭ್ಯಗಳನ್ನು ನಗರದ ವಿಟಿಎಸ್‌ಎಂ ಪೆರಿಫೆರಲ್‌ ಕ್ಯಾನ್ಸರ್‌ ಕೇಂದ್ರಒಳಗೊಂಡಿದ್ದು, ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಒದಗಿಸುವ ಸೌಕರ್ಯಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್‌ ಆಸ್ಪತ್ರೆ ನಿರ್ದೇಶಕ ಡಾ| ಸಿ. ರಾಮಚಂದ್ರ ಹೇಳಿದರು. ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಕಟ್ಟಡದ ಹಿಂಭಾಗದಲ್ಲಿರುವ ವಿಠ್ಠಲರಾವ ತುಕಾರಾಂ ಮೆಮೋರಿಯಲ್‌ ಪೆರಿಫೆರಲ್‌ ಕ್ಯಾನ್ಸರ್‌ ಕೇಂದ್ರದ ಆವರಣದಲ್ಲಿ ಗುರುವಾರ ಇನ್ಫೋಸಿಸ್‌ ಫೌಂಡೇಶನ್‌ನಿಂದ ಕ್ಯಾನ್ಸರ್‌ ರೋಗಿಗಳು ಮತ್ತವರ ಸಂಬಂಧಿಕರು ತಂಗಲು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ “ಧರ್ಮಶಾಲೆ’ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. 

ಕ್ಯಾನ್ಸರ್‌ ಕಾಯಿಲೆ ಗುಣಪಡಿಸುವ ಎಲ್ಲ ತರಹದ ಆತ್ಯಾಧುನಿಕ ಯಂತ್ರಗಳು, ಲ್ಯಾಬ್‌ಗಳನ್ನೊಗೊಂಡ ಸುಸಜ್ಜಿತ ಕ್ಯಾನ್ಸರ್‌ ಕೇಂದ್ರ ಇದಾಗಿದೆ. ಹೈ-ಕದಲ್ಲಿ ಬಡವರೇ ಹೆಚ್ಚಾಗಿದ್ದು, ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಪಯೋಗವಾಗಲಿ
ಎಂಬ ಮುತುವರ್ಜಿಯಿಂದಲೇ ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು. 

ಒಳ ರೋಗಿಗಳ 80 ಹಾಸಿಗೆ ಹೊಂದಿರುವ ಪೆರಿಫೆರಲ್‌ ಕ್ಯಾನ್ಸರ್‌ ಕೇಂದ್ರಕ್ಕೆ ಲೀನಿಯರ್‌ ಅಕ್ಷಲೇಟರ್‌ ಚಿಕಿತ್ಸೆ, ಸರ್ಜಿಕಲ್‌ ಅಂಕಾಲಾಜಿಸ್ಟ್‌ ವಿಭಾಗ, ಶಸ್ತ್ರಚಿಕಿತ್ಸೆ ವಿಭಾಗ, ವಿಕಿರಣ ವಿಭಾಗ ಮತ್ತು ತಜ್ಞ ವೈದ್ಯರು ಮತ್ತು ಸಿಬ್ಬಂದಿ ಒದಗಿಸಲಾಗಿದೆ. ಆದರೆ, ನಿರೀಕ್ಷಿಸಿದ ಮಟ್ಟದಲ್ಲಿ ಜನರು ಕೇಂದ್ರ ಉಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮತ್ತಷ್ಟು ಸೌಲಭ್ಯಗಳನ್ನು ಕೇಂದ್ರಕ್ಕೆ ಕೊಡಿಸುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಕೇಂದ್ರದ ಸಿಬ್ಬಂದಿ ಜವಾಬಾರಿ ಯಿಂದ ಬಡವರಿಗೆ ಉಪಯೋಗವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಡಾ| ಸಿ.ರಾಮಚಂದ್ರ ತಾಕೀತು ಮಾಡಿದರು.

ಇನ್ಫೋಸಿಸ್‌ ಫೌಂಡೇಶನ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಿನೋದ ಹಂಪಪುರ ಮಾತನಾಡಿ, ಪೆರಿಫೆರಲ್‌ ಕ್ಯಾನ್ಸರ್‌ ಕೇಂದ್ರಕ್ಕೆ ಬರುವ ರೋಗಿಗಳು ಮತ್ತು ಸಂಬಂಧಿಕರು ಉಳಿದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ 14 ತಿಂಗಳಲ್ಲಿ “ಧರ್ಮಶಾಲೆ’ ನಿರ್ಮಾಣ ಮಾಡಲಾಗಿದೆ. ಕ್ಯಾನ್ಸರ್‌ ರೋಗಿಗಳು ಹೆಚ್ಚಾಗಲಿ ಎಂಬ ಉದ್ದೇಶದಿಂದ ಕಟ್ಟಲಾಗಿಲ್ಲ. ಚಿಕಿತ್ಸೆ ಗೆ ಬರುವ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಎಲ್ಲರೂ ಈ “ಧರ್ಮಶಾಲೆ’ಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ವಿಟಿಎಸ್‌ ಎಂ ಪೆರಿಫೆರಲ್‌ ಕ್ಯಾನ್ಸರ್‌ ಕೇಂದ್ರದ ಉಸ್ತುವಾರಿ ಡಾ| ಗುರುರಾಜ ದೇಶಪಾಂಡೆ, ಜಿಮ್ಸ್‌ ನಿರ್ದೇಶಕ ಡಾ| ಉಮೇಶ ಎಸ್‌.ಆರ್‌., ಇನ್ಫೋಸಿಸ್‌ ಫೌಂಡೇಶನ್‌ ಖರೀದಿ ವಿಭಾಗದ ಮುಖ್ಯಸ್ಥ ಸಂಜಯ ಭಟ್‌, ಬೆಂಗಳೂರಿನ ಎಂಇ ನಿರ್ಮಾಣ ಸಂಸ್ಥೆಯ ರಮೇಶ, ಡಾ| ವಸಂತ ಹರಸೂರ, ಡಾ| ನವೀನ್‌ ಇದ್ದರು.

ವಿಟಿಎಸ್‌ಎಂ ಪೆರಿಫೆರಲ್‌ ಕ್ಯಾನ್ಸರ್‌ ಕೇಂದ್ರದ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಲಿ. ಅನ್ನ ನೀಡುವ ಸಂಸ್ಥೆ ಹೆತ್ತ ತಾಯಿಗೆ ಸಮಾನ. ಸೇವೆಯಲ್ಲಿ ಬದ್ಧತೆ ಕಳೆದುಕೊಂಡು ತಾಯಿಗೆ ಮೋಸ ಮಾಡಬೇಡಿ. ನಿಮಗೆ ಎಲ್ಲವೂ ಸರಿಯಾಗಿ ಸಿಗುತ್ತಿರುವಾಗ ಕಡಿಮೆಯಾಗಿದ್ದೇನು? ಬಡವರು ನಿಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಬರುತ್ತಾರೆ. ಅವರ ನಂಬಿಕೆ ಕಳೆದುಕೊಳ್ಳಬೇಡಿ.
 ಡಾ| ಸಿ. ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್‌ ಆಸ್ಪತೆ

ಟಾಪ್ ನ್ಯೂಸ್

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Minchu

Madikeri: ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಮೃತ್ಯು

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.