23 ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ


Team Udayavani, Nov 19, 2018, 12:08 PM IST

bid-2.jpg

ಹುಮನಾಬಾದ: ಮಳೆ ಅಭಾವದಿಂದ ಅಂತರ್ಜಲ ಪ್ರಮಾಣ ಬಹುತೇಕ ಕುಸಿದಿರುವ ಈ ಸಂದರ್ಭದಲ್ಲಿ ಕೆರೆ, ಬಾವಿಗಳು ಸಂಪೂರ್ಣ ಬತ್ತಿವೆ. ಈ ಮಧ್ಯೆ ಬೇಸಿಗೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ತಾಲೂಕಿನ 23 ಗಾಪಂ ವ್ಯಾಪ್ತಿಯ 130 ಕಡೆ ವಿವಿಧ ಕಾರಣಗಳಿಂದ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ತಾಲೂಕಿನ 23 ಗ್ರಾಮ ಪಂಚಾಯಿತಿ ಪೈಕಿ ತಾಳಮಡಗಿ ಗ್ರಾಪಂ ವ್ಯಾಪ್ತಿಯ ಪಜಾ-ಪಪಂ ಓಣಿ, ವಡ್ಡರ ಓಣಿ, ಹೊಸ ಪ್ರೌಢ ಶಾಲೆ, ಹೊಸ ಬಡಾವಣೆ ಹಾಗೂ ಕಂದಗೂಳ ಗ್ರಾಮದ ಪಶು ಆಸ್ಪತ್ರೆ ಪಕ್ಕದಲ್ಲಿರುವ ಓಣಿ, ಗಾಂಧಿ ನಗರ ಮತ್ತಿತರ ಕಡೆ ನೀರಿನ ಸಮಸ್ಯೆ ಕಾರಣ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. 

ಬೆಮಳಖೇಡಾ ಗ್ರಾಮದ ಬಸವ ಮಂಟಪ, ಪಿಕೆಪಿಎಸ್‌ ಬ್ಯಾಂಕ್‌, ಎಸ್ಸಿ ಓಣಿ, ಗೊಲ್ಲರ ಓಣಿ, ಜಾಗಡಿ ಹತ್ತಿರ, ಬೀರಪ್ಪ ಬ್ಯಾಲ್ಹಳ್ಳಿ ಓಣಿ ಉರ್ದು ಶಾಲೆ, ವಿಠಲಪುರ ಚಿಂಚೋಳಿ ಮಾರ್ಗದ ಓಣಿ, ಆದರ್ಶ ಶಾಲೆ, ಇನ್ನೂ ಮುಸ್ತರಿ ಗ್ರಾಮದ ಹೊಸ ಬಡಾವಣೆ, ಚಿಟಗುಪ್ಪ ರಸ್ತೆ, ಕುಂಬಾರ ಹೊಟೇಲ್‌ ಪ್ರದೇಶ, ಮುಲ್ಲಾನೋರ್‌ ಅಂಗಡಿ
ವ್ಯಾಪ್ತಿ ಪ್ರದೇಶ, ಫಕೀರ್‌ ಓಣಿ ಇನ್ನೂ ಹಲವೆಡೆ ನೀರಿನ ಸಮಸ್ಯೆ ಕಾಡುತ್ತಿದೆ.

ಧುಮ್ಮನಸೂರ ಗ್ರಾಮದ ಭೀಮಶಾ, ಪ್ರಭಾಕರ ಭೋಲಾ, ಶಾಹು ಹುಸೇನ್‌, ವಿಠೊಬಾ ಮಂದಿರ, ಮಾರುತಿ ಸಿಂದಬಂದಗಿ ಭಾಗ, ಲಕ್ಷ್ಮೀ ಮಂದಿರ ದುಕಾಂದೋರ, ಸಿದ್ಧಾರೂಢ ಶಾಲಾ ಪ್ರದೇಶ ಮತ್ತಿತರ ಕಡೆ ನೀರಿನ ಸಮಸ್ಯೆ ಉಲ್ಬಣವಾಗಿದೆ. ನಿರ್ಣಾ ಗ್ರಾಮದ ಹೇಮರೆಡ್ಡಿ ಮಲ್ಲಮ್ಮ ಓಣಿ, ನಂದಗಾಂವ್‌ ಗ್ರಾಮದ ಮಸೀದಿ
ಪ್ರದೇಶ, ಚರ್ಚ್‌, ಕಪ್ಪರಗಾಂವ್‌ ಹನುಮಾನ ಮಂದಿರ ಬಳಿ ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಉಡಬಾಳ ಗ್ರಾಮದ ಮಸ್ತಾನ್‌ ಖಾದ್ರಿ ದರ್ಗಾ, ನಿರ್ಣಾ ರಸ್ತೆ, ವಜೀರ್‌ಸಾಬ್‌ ಓಣಿ, ಮರಗೆಮ್ಮ ಮಂದಿರ ಇನ್ನೂ ಹಲವು ಕಡೆ ಸಮಸ್ಯೆ ಉಲ್ಬಣಗೊಂಡಿದೆ.

ಜಲಸಂಗವಿ ಗ್ರಾಮದ ಸಂಗಮೇಶ್ವರ ದೇವಸ್ಥಾನ, ಬೀರಾದೇವರ ಮಂದಿರ, ಹುಡಗಿ ಗ್ರಾಮದ ಹಲವು ಓಣಿಗಳ ಜನ ಪೈಪ್‌ಲೈನ್‌ ಅಳವಡಿಕೆ ಇತ್ಯಾದಿ ಕಾರಣ ಸಮರ್ಪಕ ನೀರು ಪೂರೈಕೆ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಲ್ಕಾಪುರ, ಅಲ್ಲೂರಾ, ಹಿಪ್ಪರಗಾಂವ್‌, ಕಲ್ಲೂರ ಸರ್ಕಾರಿ ಪ್ರೌಢಶಾಲೆ, ಬಸವತೀರ್ಥ ದೇವಸ್ಥಾನ, ಲಾಲಧರಿ ತಾಂಡಾ ಬೋರಂಪಳ್ಳಿ ಗ್ರಾಮಗಳ ಕೆಲ ಓಣಿಗಳಿಗೆ ಮೋಟರ್‌ ಕೆಟ್ಟಿರುವುದು, ಪೈಪ್‌ಲೈನ್‌ ಕೆಟ್ಟಿರುವುದು ಇತ್ಯಾದಿ ಕಾರಣದಿಂದ ನೀರು ಪೂರೈಕೆ ಆಗುತ್ತಿಲ್ಲ.

ಇಟಗಾ, ಗ್ರಾಪಂ ವ್ಯಾಪ್ತಿಯ ಮುದನಾಳ, ರಾಂಪುರ, ವಳಖೀಂಡಿ, ಘೋಡವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಘೋಡವಾಡಿ ಮತ್ತು ಹಂದೀಕೇರಾ, ಘಾಟಬೋರಾಳ ಗ್ರಾಪಂ ವ್ಯಾಪ್ತಿ ಶಿವನಗರ ತಾಂಡಾ ಇತ್ಯಾದಿಕಡೆ ಪೈಪ್‌ಲೈನ್‌ ದೋಷ ಕಾರಣದಿಂದ ನೀರು ಬರುತ್ತಿಲ್ಲ. ಕೊಡಂಬಲ್‌ ಗ್ರಾಮದ ವಿದ್ಯಾರ್ಥಿ ವಸತಿ ನಿಲಯ,
ರಾಣಾ ಪ್ರತಾಪ ಚೌಕ್‌, ಗಣೇಶ ನಗರದಲ್ಲಿ ಸಮಸ್ಯೆ ಕಾಡುತ್ತಿದೆ. ಸೇಡೋಳ ಗ್ರಾಪಂ ವ್ಯಾಪ್ತಿಗೊಳಪಡುವ ಚೀನಕೇರಾ, ಡಾಕುಳಗಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಡಾಕುಳಗಿ, ಹಿಲಾಲಪುರ, ಅತಿವಾಳ, ಅಮೀರಾಬಾದವಾಡಿ, ಅತಿವಾಳ, ಸಿಂದಬಂದಗಿಯಲ್ಲೂ ಸಮಸ್ಯೆ ಇದೆ.

ಬೆಳಕೇರಾ ಗ್ರಾಪಂ ವ್ಯಾಪ್ತಿಯ ಬನ್ನಳ್ಳಿ, ಚಾಂಗ್ಲೆರಾ ಗ್ರಾಪಂ ವ್ಯಾಪ್ತಿಯ ದೇವಗಿರಿ ತಾಂಡಾ, ಅಲ್ಲಿಪುರ ತಾಂಡಾ, ಬೇನಚಿಂಚೋಳಿ ಗ್ರಾಪಂ ವ್ಯಾಪ್ತಿಯ ಕಬೀರಾಬಾದವಾಡಿ, ನಾಮದಾಪುರಗಳಲ್ಲಿ ಸಮಸ್ಯೆ ಕಾಡುತ್ತಿದೆ. ಸಿಂಧನಕೇರಾ ಗ್ರಾಪಂ ವ್ಯಾಪ್ತಿಯ ಸಿಂಧನಕೇರಾ ಗ್ರಾಮ ಮತ್ತು ಹಣುಕುಣಿ ಹಲವು ಓಣಿಗಳಲ್ಲಿ ನೀರಿನ ಸಮಸ್ಯೆ ಇದೆ.
ಹಳ್ಳಿಖೇಡ(ಕೆ) ಗ್ರಾಪಂ ವ್ಯಾಪ್ತಿಯ ಮುಸ್ತಾಪುರನಲ್ಲಿ ಸಮಸ್ಯೆ ಇದೆ. ನಿರ್ಣಾ ಗ್ರಾಮದಲ್ಲಿ ಹಲವೆಡೆ ನೀರಿನ ಸಮಸ್ಯೆ ಉಲ್ಬಣಗೊಂಡ ಕಾರಣ ಜನರು ಕೊಡ ನೀರಿಗಾಗಿ ಗಂಟೆಗಟ್ಟಲೇ ಸಾಲಲ್ಲಿ ನೀಲ್ಲಬೇಕು. ಇಲ್ಲವೇ ದೂರದ ತೋಟಗಳಿಗೆ ಕಿ.ಮೀ. ಗಟ್ಟಲೇ ಕಾಲ್ನಡಿಗೆಯಲ್ಲಿ ತೆರಳಿ ನೀರು ಸಂಗ್ರಹ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಈ ಎಲ್ಲದರ ಜೊತೆ ಅಂತರ್ಜಲ ಕುಸಿತ ಕಾರಣದಿಂದ ಬಾವಿ ನೀರು ಬತ್ತಿ ಹೊಲದಲ್ಲಿನ ಕಬ್ಬು ಸಂಪೂರ್ಣವಾಗಿ ಒಣಗುತ್ತಿದೆ. ಸಕಾಲಕ್ಕೆ ಕಬ್ಬಿನ ಬೆಲೆ ನಿಗದಿ ಮಾಡಿ, ಕಟಾವು ಮಾಡಿದರೆ ಇಳುವರಿ ಜೊತೆಗೆ ಸೂಕ್ತ ಬೆಲೆ ಸಿಗುತ್ತದೆ. ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಕಬ್ಬು ಪೂರೈಸುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ ರೈತರು.

ಪರಿಹಾರ ಕ್ರಮ: ಸಚಿವ ರಾಜಶೇಖರ ಪಾಟೀಲ ಈಚೆಗಷ್ಟೇ ಅಧಿಕಾರಿಗಳ ವಿಶೇಷ ಸಭೆ ನಡೆಸಿ, ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ, ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದರಿಂದ ತಾಲೂಕಿನಾದ್ಯಂತ ಸಂಚರಿಸಿ ಪರಿಶೀಲಿಸಿದಾಗ ತಾಲೂಕಿನ 23ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ಅವಶ್ಯಕತೆ ಮನಗಂಡು 55 ಕಡೆ
ಹೊಸದಾಗಿ ಕೊಳವೆ ಬಾವಿ, 23 ಕಡೆಗೆ ಕೊಳವೆ ಬಾವಿ ರಿಬೋರ್‌ ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿಧ ಗ್ರಾಮಗಳಲ್ಲಿನ ಸಣ್ಣಪುಟ್ಟ ದೋಷ ಸರಿಪಡಿಸಲು ಸಮರ್ಪಕ ನೀರು ಪೂರೈಕೆ ಉದ್ದೇಶದಿಂದ 41ಗ್ರಾಮಗಳಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. 11ಕಡೆ ಮೋಟರ್‌ ಅಳವಡಿಸಲಾಗುತ್ತಿದೆ. ಸಂಬಂಧಪಟ್ಟ
ಅಧಿಕಾರಿಗಳು ನೀರಿನ ಸಮಸ್ಯೆ ನಿರ್ಲಕ್ಷಿಸದೇ ಗಂಭೀರ ಪರಿಗಣಿಸಿ, ತುರ್ತು ಕ್ರಮಕ್ಕೆ ಮುಂದಾಗಿ ಜನರ ಸಮಸ್ಯೆ ಪರಿಹರಿಸಬೇಕು.

ನಮ್ಮ ತಾಲೂಕಿನಲ್ಲಿ ಸದ್ಯದ ಮಟ್ಟಿಗೆ ನೀರಿನ ಸಮಸ್ಯೆ ಅಷ್ಟಾಗಿ ಗಂಭೀರವಿಲ್ಲ. ತೀವ್ರ ಸಮಸ್ಯೆ ಇರುವ ಲಾಲಧರಿ ತಾಂಡಾದಂತಹ ಕೆಲವೆಡೆ ಕ್ರಮ ಕೈಗೊಳ್ಳಲಾಗಿದೆ. ಅಂತರ್ಜಲ ಕುಸಿತ ಕಾರಣ ನೀರಿನ ಅಭಾವ ಉಲ್ಬಣಗೊಳ್ಳುವುದು ಸಹಜ. ಮಳೆಗಾಲದಂತೆ ನೀರು ವ್ಯರ್ಥ ವ್ಯಯಿಸದೇ ಹಿತಮಿತವಾಗಿ ಬಳಸಬೇಕು. ಜನ ತಮ್ಮ ಓಣಿಯಲ್ಲೇ ನೀರು ಲಭ್ಯವಾಗಬೇಕೆಂದು ನಿರೀಕ್ಷಿಸುತ್ತಾರೆ. ಕೆಲವು ಕಡೆ ಪಕ್ಕದ ಓಣಿಯಲ್ಲಿ ನೀರು ಲಭ್ಯವಿದ್ದರೂ ಬಳಸದೇ ಸೋಮಾರಿತನ ಪ್ರದರ್ಶಿಸುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಜನ ಸಣ್ಣ ಸಮಸ್ಯೆಯನ್ನೇ ದೊಡ್ಡ ಸಮಸ್ಯೆಯಾಗಿ ಬಿಂಬಿಸದೇ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
 ಡಿ.ಎಂ. ಪಾಣಿ, ತಹಶೀಲ್ದಾರ್‌

ನಮ್ಮ ಹೊಸ ಬಡಾವಣೆಯಲ್ಲಿ ನೀರಿನ ಸಮರ್ಪಕ ಸೌಲಭ್ಯವಿಲ್ಲ. ಪಕ್ಕದ ಓಣಿಯಲ್ಲಿ ನೀರು ಸಂಗ್ರಹಿಸುವಂತೆ ಅಧಿಕಾರಿಗಳು ಅತ್ಯಂತ ಸರಳವಾಗಿ ಹೇಳುತ್ತಾರೆ. ಆದರೆ ಆ ಓಣಿ ಜನ ತಾವು ತುಂಬಿಕೊಂಡ ನಂತರವೇ ನಮಗೆ ಬಿಡುತ್ತಾರೆ. ಅದಕ್ಕಾಗಿ ಗಂಟೆಗಟ್ಟಲೇ ನಿಲ್ಲಬೇಕು. ಇದ್ದರೆ ಸರಿ, ಬಂದ್‌ ಆದರೆ ಆ ದಿನ ನೀರೇ ಸಿಗುವುದಿಲ್ಲ. ನೀರಿಗಾಗಿ ಗಂಟೆಗಟ್ಟಲೇ ನಿಲ್ಲುತ್ತಿರುವ ಕಾರಣ ಆ ದಿನ ಕೂಲಿ ಇಲ್ಲದೇ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಪಂಚಾಯಿತಿ ಅಧಿಕಾರಿ, ಚುನಾಯಿತ ಪ್ರತಿನಿಧಿಗಳು ನೆಪ ಹೇಳಿಕೊಳಂಡು ಜಾರಿಕೊಳ್ಳದೇ ನೀರು ಪೂರೈಸಬೇಕು.
 ಸುಶೀಲಾಬಾಯಿ, ಕನಕಟ್ಟಾ ಹೊಸ ಬಡಾವಣೆ ನಿವಾಸಿ

„ಶಶಿಕಾಂತ ಕೆ.ಭಗೋಜಿ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.