ಅಂಡಮಾನ್ ನಿಷೇಧಿತ ಪ್ರದೇಶ: ಬುಡಕಟ್ಟು ಜನರ ಬಾಣಕ್ಕೆ ಪ್ರವಾಸಿಗ ಬಲಿ!
Team Udayavani, Nov 21, 2018, 3:29 PM IST
ಹೊಸದಿಲ್ಲಿ : 27ರ ಹರೆಯದ ಜಾನ್ ಆ್ಯಲನ್ ಚೌ ಎಂಬ ಅಮೆರಿಕನ್ ಪ್ರವಾಸಿಗನೋರ್ವನನ್ನು ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿನ ಸಂರಕ್ಷಿತ ಬುಡಕಟ್ಟು ಜನಾಂಗದವರು ಕೊಂದಿರುವುದಾಗಿ ಮೂಲಗಳು ತಿಳಿಸಿವೆ. ಆದರೆ ಅಮೆರಿಕದ ಕಾನ್ಸುಲೇಟ್ ತನ್ನ ಪ್ರವಾಸಿ ಪ್ರಜೆ ನಾಪತ್ತೆಯಾಗಿದ್ದಾನೆ ಎಂದೇ ಹೇಳಿದೆ.
ಪೊಲೀಸರು ನರ ಹತ್ಯೆ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಜಾನ್ ಆ್ಯಲನ್ ನನ್ನು ದ್ವೀಪಕ್ಕೆ ಒಯ್ದ ಮೀನುಗಾರನನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.