ಐಸಿಯು ಸೇರುವ ಸ್ಥಿತಿಯಲ್ಲಿದೆ ರಂಗಭೂಮಿ


Team Udayavani, Nov 30, 2018, 5:23 PM IST

shiv-2.jpg

ಶಿವಮೊಗ್ಗ: ಅನುದಾನಕ್ಕಾಗಿ ಹುಟ್ಟಿಕೊಳ್ಳುವ ಕಲಾ ತಂಡಗಳನ್ನು ಸ್ಥಳೀಯ ಕಲಾವಿದರು ವಿರೋಧಿಸಿದ್ದರೆ ಇಂದು ಈ ಸ್ಥಿತಿಯೇ ಬರುತ್ತಿರಲಿಲ್ಲ. ಕಲಾವಿದರು ಪ್ರತಿಭಟನಾ ನೆಲೆ ಕಳೆದುಕೊಂಡಿರುವುದರಿಂದ “ರಂಗಭೂಮಿ’ ತೀವ್ರ ನಿಗಾ ಘಟಕ (ಐಸಿಯು) ಸೇರುವ ಸ್ಥಿತಿಗೆ ತಲುಪಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಕಳವಳ ವ್ಯಕ್ತಪಡಿಸಿದರು.

 ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ರಂಗ ಉತ್ಸವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲಾವಿದರ ಅನುಕೂಲಕ್ಕಾಗಿ ಸರಕಾರ “ಅನುದಾನ’ ಯೋಜನೆ ಜಾರಿಗೆ ತಂದಿದೆ. ಆದರೆ, ಅನುದಾನಕ್ಕೋಸ್ಕರವೆಂದೇ ಹಲವು ಕಲಾತಂಡಗಳು ಹುಟ್ಟಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಏತನ್ಮಧ್ಯೆ ನಿಸ್ವಾರ್ಥ, ಲಾಭದ ಉದ್ದೇಶವಿಲ್ಲದೇ ಹಲವು ಕಲಾವಿದರು ದುಡಿಯುತ್ತಿದ್ದಾರೆ. ಅವರಿಂದಾಗಿಯೇ ರಂಗಭೂಮಿ ಚಟುವಟಿಕೆಗಳು ಇನ್ನೂ ನಡೆಯುತ್ತಿವೆ ಎಂದರು.

ಕಲಾವಿದರು ಮತ್ತು ಪ್ರೇಕ್ಷರಿಗೆ ಜಡತ್ವ ಆವರಿಸಿದೆ. ಒಂದು ವೇಳೆ, ನಾಟಕ, ಲೇಖಕರ ವಿಚಾರಧಾರೆಗಳನ್ನು ತೀಕ್ಷ್ಣವಾಗಿ ಯೋಚಿಸಿ, ವಿಮರ್ಶಿಸಿದಲ್ಲಿ ಈ ಜಡತ್ವ ಕಣ್ಮರೆಯಾಗಲು ಸಾಧ್ಯ. ಕೇವಲ ವೈಭವೀಕರಣಕ್ಕೆ ಮಾತ್ರ ಆದ್ಯತೆ ನೀಡದೇ ಪ್ರತಿಯೊಬ್ಬರಲ್ಲಿ ಜಿಜ್ಞಾಸೆ ಹುಟ್ಟಬೇಕು ಎಂದು ಸಲಹೆ ನೀಡಿದರು. 

ರಂಗಭೂಮಿ ರಾಜಾಶ್ರಯದಲ್ಲಿ ಬೆಳೆದು ಬಂದಿಲ್ಲ. ಇದು ಜನಾಶ್ರಯದಲ್ಲಿ ಬೆಳೆದಿದೆ. ಆದರಿಂದು, ರಾಜಾಶ್ರಯದಲ್ಲೂ ಬೆಳೆಯುತ್ತಿರುವ ಕೆಲ ತಂಡಗಳಿವೆ. ಈ “ಜಡತ್ವ’ ಹೋಗಲಾಡಿಸುವುದಕ್ಕಾಗಿ ಭ್ರಷ್ಟಾಚಾರ ಕಿತ್ತೆಸೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಂಜಾವೂರು ಸೌತ್‌ಜೋನ್‌ ಕಲ್ಚರಲ್‌ ಸೆಂಟರ್‌ನ ಸದಸ್ಯ ತೊಟ್ಟವಾಡಿ ನಂಜುಂಡಸ್ವಾಮಿ ಮಾತನಾಡಿ, ರಂಗ ಚಟುವಟಿಕೆಗಳು ನಗರ ಕೇಂದ್ರಿತವಾದಲ್ಲಿ ರಂಗಭೂಮಿ ಬೆಳೆಯುವುದಿಲ್ಲ. ಹೀಗಾಗಿ, ಹೆಚ್ಚು ಪ್ರೇಕ್ಷಕರು, ಕಲಾ ತಂಡ ಹಾಗೂ ಕಲಾವಿದರಿರುವ ಗ್ರಾಮೀಣ ಪ್ರದೇಶದಲ್ಲಿ ಇಂತಹ ಉತ್ಸವಗಳನ್ನು ಆಯೋಜಿಸಬೇಕು ಎಂದರು.
 
ಎಲ್ಲಿ ರಂಗಭೂಮಿಗೆ ಬೆಲೆ ಇದೆಯೋ ಅಂತಹ ಕಡೆಗಳಲ್ಲಿ ಉತ್ಸವಗಳನ್ನು ಆಯೋಜಿಸಿ. ರಂಗಭೂಮಿಗೋಸ್ಕರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿಯುವ ಸುಮಾರು ಜನ ಕಲಾವಿದರು ಹಳ್ಳಿಗಳಲ್ಲಿದ್ದಾರೆ. ಆದರೆ, ಅಂತಹವರ್ಯಾರೂ ಪ್ರಶಸ್ತಿ ಮತ್ತು ಅನುದಾನಕ್ಕೆ ಆಯ್ಕೆಯಾಗಲ್ಲ. ತಮ್ಮಷ್ಟಕ್ಕೆ ತಾವೇ ನಿರ್ಲಿಪ್ತರಾಗಿ ಅವರು ರಂಗಭೂಮಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ರಾಜ್ಯ ಸರಕಾರ ರಂಗಭೂಮಿ ಬಲಪಡಿಸುವುದಕ್ಕಾಗಿಯೇ ಹಲವು ಯೋಜನೆ ಜಾರಿಗೆ ತಂದಿದೆ. ಆದರೆ, ಎಲ್ಲೂ ಪೂರ್ಣ ಲಾಭ ಪಡೆಯಲಾಗುತ್ತಿಲ್ಲ. “ರಂಗಭೂಮಿ’ ಕುರಿತು ವಿಚಾರ ಸಂಕಿರಣ ಆಯೋಜಿಸುವುದಕ್ಕಾಗಿ ಯಾವ ವಿಶ್ವವಿದ್ಯಾಲಯಗಳು ಮುಂದೆ ಬರುತ್ತಿಲ್ಲ. ಬರುವ ದಿನಗಳಲ್ಲಿ ಭರತನಾಟ್ಯ, ಮಕ್ಕಳ ಉತ್ಸವ ಆಯೋಜಿಸುವಂತೆ ತಿಳಿಸಿದರು. 

ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ ಉತ್ಸವಕ್ಕೆ ಚಾಲನೆ ನೀಡಿ ಎಲ್ಲ ಕಲಾ ತಂಡಗಳಿಗೆ ಶುಭ ಕೋರಿದರು. ನಾಟಕ ಅಕಾಡೆಮಿ ರಿಜಿಸ್ಟರ್‌ ಡಾ| ಕೆ.ಶೈಲಜಾ ಉಪಸ್ಥಿತರಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಎಂ.ವಿ. ಪ್ರತಿಭಾ ನಿರೂಪಿಸಿದರು.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.