ಹಾಲಿ, ಮಾಜಿ ಸಂಸದರು, ಶಾಸಕರ ವಿರುದ್ಧ 4,122 ಕೇಸುಗಳು ಬಾಕಿ
Team Udayavani, Dec 4, 2018, 12:16 PM IST
ಹೊಸದಿಲ್ಲಿ : ಹಾಲಿ ಹಾಗೂ ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ 4,122 ಕ್ರಿಮಿನಲ್ ಕೇಸುಗಳು ಇತ್ಯರ್ಥಕ್ಕೆ ಬಾಕಿ ಇವೆ; ಇವುಗಳಲ್ಲಿ ಕೆಲವು ಕೇಸುಗಳು ಮೂರು ದಶಕಗಳಿಂದಲೂ ಬಾಕಿ ಉಳಿದಿವೆ ಎಂದು ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟಿಗೆ ತಿಳಿಸಿತು.
ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಬಿಹಾರ ಮತ್ತು ಕೇರಳದ ಸಂಸದರು ಮತ್ತು ಶಾಸಕರ ವಿರುದ್ಧ ಜೀವಾವಧಿ ಕೇಸುಗಳನ್ನು ಆದ್ಯತೆಯ ನೆಲೆಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.
ಇದಕ್ಕೆ ಮೊದಲು ಸುಪ್ರೀಂ ಕೋರ್ಟ್ ಹಾಲಿ, ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ ಇತ್ಯರ್ಥಕ್ಕೆ ಬಾಕಿ ಇರುವ ಕ್ರಿಮಿನಲ್ ಕೇಸುಗಳ ವಿವರವನ್ನು ಕೇಂದ್ರ ಸರಕಾರದಿಂದ ಕೋರಿತ್ತು.